ರಂಗಾಯಣದ ನಿರ್ದೇಶಕರೂ ಆದ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಸಿ.ಕಾರ್ಯಪ್ಪ
ಮೈಸೂರು, ಡಿ.20(ಪಿಎಂ)- ಕೇಂದ್ರ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಕಟಣೆ ಹಾಗೂ ಪ್ರಶಸ್ತಿಯಲ್ಲಿ ವೈದ್ಯಕೀಯ ಸಾಹಿತ್ಯ ಪರಿ ಗಣಿಸುವಂತೆ ಪ್ರಸ್ತಾಪ ಮಾಡುವುದಾಗಿ ರಂಗಾಯಣದ ನಿರ್ದೇಶಕರೂ ಆದ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.
ಮೈಸೂರಿನ ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಯಮ್ಮ ಪ್ರಕಾಶನ, ಆರೋಗ್ಯ ಯೋಗ ಸಂಸ್ಥೆ ಹಾಗೂ ಸುಯೋಗ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವೈದ್ಯ ಸಾಹಿತಿ, ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ. ಎಸ್.ಪಿ.ಯೋಗಣ್ಣ ಅವರ `ಹೃದಯಾ ಘಾತ’ 3ನೇ ಆವೃತ್ತಿ ಕೃತಿ ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.
ಅಕಾಡೆಮಿ ವತಿಯಿಂದ ವಿವಿಧ ಸಾಹಿತ್ಯ ಪ್ರಕಾರದ ಕೃತಿಗಳನ್ನು ಪ್ರಕಟಣೆ ಮಾಡಲಾಗು ತ್ತದೆ. ಇದಕ್ಕೆ ವೈದ್ಯಕೀಯ ಸಾಹಿತ್ಯವನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಜೊತೆಗೆ ಪ್ರಶಸ್ತಿ ಯಲ್ಲೂ ಪರಿಗಣಿಸಬೇಕೆಂದು ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಡಾ. ಯೋಗಣ್ಣ ಹೆಸರು ಶಿಫಾರಸ್ಸು ಮಾಡುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ವೈ.ಡಿ.ರಾಜಣ್ಣ ಮೊದಲಾದವರು ಪ್ರಸ್ತಾಪಿಸಿ ದ್ದೀರಿ. ಆದರೆ ಅದಕ್ಕೂ ಮೊದಲು ಅಕಾಡೆಮಿ ಯಲ್ಲಿ ವೈದ್ಯಕೀಯ ಸಾಹಿತ್ಯ ಪ್ರಕಾರ ಸೇರ್ಪಡೆ ಯಾಗಬೇಕಿದೆ ಎಂದು ತಿಳಿಸಿದರು.
ಪ್ರೊ.ಭಗವಾನ್ ವಿವಾದಕ್ಕೆ ಫಿಟ್: ಅಡ್ಡಂಡ ಸಿ.ಕಾರ್ಯಪ್ಪ ತಮ್ಮ ಭಾಷಣದಲ್ಲಿ ಹಾಸ್ಯ ಚಟಾಕಿಯನ್ನು ಹಾರಿಸಿದರು. ರಾಜಕಾರಣ ಶ್ರೇಷ್ಠ ಕಾಯಕ. ಅದಕ್ಕಾಗಿಯೇ ಏನೋ ಡಾ. ಯೋಗಣ್ಣ ರಾಜಕಾರಣ ಪ್ರವೇಶಕ್ಕೆ ಪ್ರಯ ತ್ನಿಸಿದ್ದರು. ಡಾ.ಯೋಗಣ್ಣನವರೇ ನೀವು ಕುಡಿಯಬೇಡಿ ಎಂದು ಹೇಳಿ, ಚುನಾವಣೆಗೆ ಸ್ಪರ್ಧಿಸಿದರೆ ಠೇವಣಿ ಕಳೆದುಕೊಳ್ಳುವುದು ಗ್ಯಾರಂಟಿ ಎಂದು ಹಾಸ್ಯ Zಟಾಕಿ ಹಾರಿಸಿ ದರು. ಡಾ.ಯೋಗಣ್ಣ ನೀವು ಕನ್ನಡಕ್ಕೆ ಫಿಟ್. ಆದರೆ ರಾಜಕಾರಣಕ್ಕೆ ಅನ್‍ಫಿಟ್. ಅಂದರೆ ಕೆಲವು ಜನರು ಕೆಲವಕ್ಕೆ ಮಾತ್ರ ಫಿಟ್ ಎಂದ ಅವರು, ಪ್ರೊ.ಕೆ.ಎಸ್.ಭಗವಾನ್ ಅವರು ವಿವಾದಕ್ಕೆ ಫಿಟ್ ಎಂದು ಸಭಿಕರ ಸಾಲಿನಲ್ಲಿ ಹಾಜರಿದ್ದ ಅವರನ್ನು ತಮಾಷೆ ಮಾಡಿದರು. ಮುಕ್ತ ವಿವಿ ಕುಲಪತಿ ಡಾ. ವಿದ್ಯಾಶಂಕರ್ ಸಮಾರಂಭ ಉದ್ಘಾಟಿಸಿ ದರು. ಮೈಸೂರು ಜಯದೇವ ಹೃದ್ರೋಗ ಸಂಸ್ಥೆ ಮುಖ್ಯಸ್ಥ ಡಾ.ಕೆ.ಎಸ್.ಸದಾನಂದ್, ಹಿರಿಯ ಹೃದ್ರೋಗ ತಜ್ಞ ಡಾ.ಅರುಣ್ ಶ್ರೀನಿವಾಸ್, ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕೃತಿ ಕರ್ತೃ ಡಾ.ಎಸ್.ಪಿ.ಯೋಗಣ್ಣ, ಸುಯೋಗ್ ಆಸ್ಪತ್ರೆ ಹೃದ್ರೋಗ ತಜ್ಞರಾದ ಡಾ.ವಿನು, ಡಾ.ಆದಿತ್ಯ ಉಡುಪ ಮತ್ತಿತರರು ಹಾಜರಿದ್ದರು.