ಬೆಂಬಲ ಬೆಲೆಯಡಿ ರಾಗಿ ಖರೀದಿಗೆ ಸರ್ಕಾರದ ಆದೇಶ 
ಮೈಸೂರು

ಬೆಂಬಲ ಬೆಲೆಯಡಿ ರಾಗಿ ಖರೀದಿಗೆ ಸರ್ಕಾರದ ಆದೇಶ 

December 21, 2020

ಮೈಸೂರು,ಡಿ.20-2020-21ನೇ ಸಾಲಿನ ಮುಂಗಾರು ಋತುವಿನಲ್ಲಿ ಮೈಸೂರು ಜಿಲ್ಲೆಯ ರೈತರು ಬೆಳೆದ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಲು ಸರ್ಕಾರವು ಆದೇಶಿಸಿದೆ.

ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಕಾರ್ಯಪಡೆಯ ತೀರ್ಮಾನದಂತೆ ಉತ್ತಮ ಗುಣ ಮಟ್ಟದ ರಾಗಿಯನ್ನು ಖರೀದಿಸಲಾಗುವುದು. ಜಿಲ್ಲೆ ಯಲ್ಲಿ 12 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ರೈತÀರು ತಾವು ಬೆಳೆದ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರಗಳ ಮೂಲಕ ಮಾರಾಟ ಮಾಡಲು ರಾಜ್ಯ ಸರ್ಕಾರ ಕೋರಿದೆ.

ಮೈಸೂರು ತಾಲೂಕಿನ ಬಂಡಿಪಾಳ್ಯದ ಎಪಿಎಂಸಿ, ನಂಜನಗೂಡಿನ ಎಪಿಎಂಸಿ, ಟಿ.ನರಸೀಪುರದ ಎಪಿಎಂಸಿ, ಬನ್ನೂರಿನ ಎಪಿಎಂಸಿ, ಕೆ.ಆರ್.ನಗರದ ಎಪಿಎಂಸಿ, ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಉಗ್ರಾಣ ಹಾಗೂ ಸರಗೂರಿನ ಎಪಿಎಂಸಿ, ಪಿರಿಯಾಪಟ್ಟಣ ಎಪಿಎಂಸಿ, ಬೆಟ್ಟದ ಪುರದ ಎಪಿಎಂಸಿ ಆವರಣಗಳಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು. ಬೆಂಬಲ ಬೆಲೆ ಯೋಜನೆಯಡಿ ರಾಗಿಯನ್ನು ಪ್ರತಿ ಕ್ವಿಂಟಾಲ್‍ಗೆ 3,295 ರೂ. ರಂತೆ ಖರೀದಿಸಲಾಗುವುದು.

ಬೆಲೆ ಯೋಜನೆಯಡಿ ರಾಗಿ ಡಿ.8ರಿಂದ ಖರೀದಿಗೆ ನೋಂದಣಿ ಪ್ರಾರಂಭಿಸಲಾಗಿದೆ. ರಾಗಿ ಖರೀದಿಯನ್ನು ಡಿಸೆಂಬರ್ ಮಾಹೆಯಿಂದ ಪ್ರಾರಂ ಭಿಸಿ 15-03-2021ಕ್ಕೆ ಮುಕ್ತಾಯಗೊಳಿಸಲಾಗುತ್ತಿದ್ದು, ಮೈಸೂರಿನ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯು ಖರೀದಿ ಏಜೆನ್ಸಿಯಾಗಿದೆ. ಅನ್ಯ ವಸ್ತುಗಳು, ಇತರೆ ಆಹಾರ ಧಾನ್ಯಗಳು, ವಿರೂಪ ಗೊಂಡ ಧಾನ್ಯಗಳು, ಸ್ವಲ್ಪ ವಿರೂಪಗೊಂಡ ಧಾನ್ಯ ಗಳು ಮತ್ತು ತೇವಾಂಶ ರೈತರಿಂದ ಎಫ್‍ಎಕ್ಯೂ ಗುಣಮಟ್ಟದ ರಾಗಿ ಖರೀದಿಸಲಾಗುವುದು. ರಾಗಿಯನ್ನು ನೋಂದಾಯಿಸಿಕೊಂಡ ರೈತರಿಂದ 1 ಎಕರೆಗೆ 10 ಕ್ವಿಂಟಾಲ್‍ನಂತೆ ಗರಿಷ್ಠ 50 ಕ್ವಿಂಟಾಲ್ ರಾಗಿ ಮಾತ್ರ ಒಬ್ಬ ರೈತರಿಂದ ಖರೀದಿಸಲಾಗುವುದು. ರೈತರಿಗೆ ನೀಡಿರುವ “ಪ್ರೂಟ್ಸ್” ಐಡಿಯನ್ನು ನೋಂದಣಿ ಅಥವಾ ಖರೀದಿ ಕೇಂದ್ರಕ್ಕೆ ತಂದು ಬೆಂಬಲ ಬೆಲೆಯ ಯೋಜನೆಯಡಿ ರಾಗಿ ಮಾರಾಟ ಮಾಡಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು. ಈ ಪ್ರೂಟ್ಸ್ ಐಡಿಯಲ್ಲಿ ಯಾವುದಾದರು ನ್ಯೂನತೆಗಳಿದ್ದಲ್ಲಿ ಕೃಷಿ ಇಲಾಖೆಯಿಂದಲೇ ಸರಿಪಡಿಸಿಕೊಂಡು ತದನಂತರ ನೋಂದಾಯಿಸಿಕೊಳ್ಳುವುದು. ನೋಂದಾಯಿಸಿಕೊಂಡ ರೈತರು ತಾವು ರಾಗಿ ಸರಬರಾಜು ಮಾಡುವ ದಿನಾಂಕ ವನ್ನು ಖರೀದಿ ಕೇಂದ್ರವು ನಿಗದಿಪಡಿಸಿರುವ ದಿನಾಂಕ ದಂದೇ ಸರಬರಾಜು ಮಾಡಬೇಕು. ರೈತರು ಸರಬರಾಜು ಮಾಡುವ ರಾಗಿಯ ಗುಣಮಟ್ಟವನ್ನು ಪರಿವೀಕ್ಷಕರು ಪರಿಶೀಲಿಸಿ ದೃಢೀಕರಿಸಿದ ನಂತರವೇ ಖರೀದಿಸ ಲಾಗುವುದು. ನೋಂದಾಯಿಸಿಕೊಂಡ ರೈತರು ಒಂದು ಬಾರಿ ಉಪಯೋಗಿಸಿದ 50 ಕೆ.ಜಿ ತೂಕದ ಗೋಣಿ ಚೀಲದಲ್ಲಿ ರಾಗಿ ಸರಬರಾಜು ಮಾಡಬೇಕು. ರೈತರಿಗೆ 50 ಕೆ.ಜಿ ಸಾಮಥ್ರ್ಯದ ಒಂದು ಬಾರಿ ಉಪಯೋಗಿ ಸಿದ ಗೋಣಿ ಚೀಲಗಳ ಅವಶ್ಯವಿದ್ದಲ್ಲಿ ನ್ಯಾಯಬೆಲೆ ಅಂಗಡಿ ಮೂಲಕ ಪಡೆಯಲು ಸಂಬಂಧಿಸಿದ ತಾಲೂಕು ತಹಶೀಲ್ದಾರರನ್ನು ಸಂಪರ್ಕಿಸಬಹುದು.

ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿ ಕೇಂದ್ರಕ್ಕೆ ನೇರವಾಗಿ ಸರಬರಾಜು ಮಾಡಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿ ಅಥವಾ ಏಜೆಂಟರ್  ಬೆಂಬ ಲಿಸಬಾರದು. ಖರೀದಿಯಲ್ಲಿ ಮಧ್ಯವರ್ತಿಗಳು ಮತ್ತು ಏಜೆಂಟ್‍ಗಳು ಭಾಗವಹಿಸುವುದು ಕಾನೂನು ಬಾಹಿರ. ರೈತರಿಂದ ಖರೀದಿಸುವ ರಾಗಿ ಸರಕಿನ ಮೌಲ್ಯ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಖಖಿಉS/ಓಇಈಖಿ ಮೂಲಕ ಪಾವತಿಸಲಾಗುವುದು. ಡಿ.15ರಿಂದ ಮಾ.15.2021ರವರೆಗೆ ಮಾತ್ರ ಖರೀದಿ ಮಾಡಲಾಗುವುದು. ಖರೀದಿ ಕೇಂದ್ರಕ್ಕೆ ಬರುವ ರೈತರು ಸಾನಿಟೈಸರ್ ಉಪಯೋಗಿಸಬೇಕು, ಮಾಸ್ಕ್ ಅನ್ನು ಹಾಕಿಕೊಂಡು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Translate »