ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಿಎಂಗೆ ಮನವಿ
ಮೈಸೂರು

ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಿಎಂಗೆ ಮನವಿ

December 21, 2020

ಮೈಸೂರು, ಡಿ.20(ಎಂಟಿವೈ)-ಕಾಡಂಚಿನ ಗ್ರಾಮಗಳಲ್ಲಿ ಯಾವುದೇ ಮೂಲಭೂತ ಸೌಲಭ್ಯವಿಲ್ಲದೆ ವಾಸಿಸುತ್ತಿರುವ ಆದಿವಾಸಿ ಸಮುದಾಯದ ಸಮಗ್ರ ಏಳಿಗೆಗೆ ಪ್ರತ್ಯೇಕ ಆದಿವಾಸಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವಂತೆ ಅಖಿಲ ಕರ್ನಾಟಕ ಆದಿ ವಾಸಿ ಮಹಿಳಾ ಸಮಿತಿ ಪದಾಧಿಕಾರಿ ಗಳು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಯಡಿ ಯೂರಪ್ಪ ಅವರನ್ನು ಅಖಿಲ ಕರ್ನಾ ಟಕ ಆದಿವಾಸಿ ಮಹಿಳಾ ಸಮಿತಿ ರಾಜ್ಯಾಧ್ಯಕ್ಷೆ ಎನ್.ವಿ.ಮಂಜುಳಾ ನೇತೃತ್ವದಲ್ಲಿ ಆದಿವಾಸಿ ಮುಖಂಡರಾದ ಮುನಿಸ್ವಾಮಿ, ಶಿವಮ್ಮ, ರವಿ, ಕುಮಾರ, ಆಂಜನಪ್ಪ, ಮಂಜು, ವೆಂಕಟೇಶ್, ಅಣ್ಣಪ್ಪ ಸೇರಿದಂತೆ ಇನ್ನಿತರರು ಭೇಟಿ ನೀಡಿ ಪ್ರತ್ಯೇಕವಾಗಿ ಆದಿವಾಸಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸು ವಂತೆ ಮನವಿ ಸಲ್ಲಿಸಿದ್ದಾರೆ. ಇದೇ ವೇಳೆ ಮಹಿಳಾ ಸಮಿತಿ ಅಧ್ಯಕ್ಷೆ ಎನ್.ವಿ.ಮಂಜುಳಾ ಮಾತನಾಡಿ, ಪ್ರಸ್ತುತ ವಾಲ್ಮೀಕಿ ಅಭಿವೃದ್ಧಿ ನಿಗಮದಡಿ ಆದಿವಾಸಿ ಅಭಿವೃದ್ಧಿ ಕೋಶವನ್ನು ಸ್ಥಾಪಿಸಲಾಗಿದೆ. ಇದರಿಂದ ಆದಿವಾಸಿಗಳ ಸಮಗ್ರ ಏಳಿಗೆಗೆ ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ 15ರಿಂದ 20 ಲಕ್ಷ ಜನಸಂಖ್ಯೆ ಹೊಂದಿರುವ ಆದಿವಾಸಿ ಸಮುದಾಯವು ಹಾಡಿ, ಕಾಡಂಚಿನ ಪ್ರದೇಶಗಳಲ್ಲಿ ವಾಸಿಸುತ್ತಿವೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಆದಿವಾಸಿ ಸಮುದಾಯ ಹಿಂದುಳಿದಿದ್ದು, ಮೂಲ ಸೌಲಭ್ಯವಿಲ್ಲದೆ ಹಾಡಿಗಳಲ್ಲಿ ವಾಸಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿರುವ ಆದಿವಾಸಿ ಅಭಿವೃದ್ಧಿ ಕೋಶವನ್ನು ಪ್ರತ್ಯೇಕ ನಿಗಮವಾಗಿ ಪುನರ್ ರಚಿಸಬೇಕು. ಆ ಮೂಲಕ ಆದಿವಾಸಿ ಸಮುದಾಯದ ಏಳಿಗೆಗೆ ಸಹಕರಿಸುವಂತೆ ಕೋರಿದರು. ಇದಕ್ಕೆ ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಪರಿಶೀಲನೆ ನಡೆಸುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

 

Translate »