ಅಗ್ನಿಶಾಮಕ ಠಾಣೆಯಿಂದ ಸಕಾಲ ಸಪ್ತಾಹ
ಮೈಸೂರು

ಅಗ್ನಿಶಾಮಕ ಠಾಣೆಯಿಂದ ಸಕಾಲ ಸಪ್ತಾಹ

December 21, 2020

ಮೈಸೂರು, ಡಿ.20(ಎಂಕೆ)- ನಗರದ ಸರಸ್ವತಿಪುರಂ ಅಗ್ನಿಶಾಮಕ ಠಾಣೆಯಿಂದ `ಸಕಾಲ ಸಪ್ತಾಹ’ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಅಗ್ನಿ ಅವಘಡ, ಭೂ ಕುಸಿತ, ಕಟ್ಟಡ ಕುಸಿತ ಇನ್ನಿತರೆ ವಿಪತ್ತುಗಳು ಮತ್ತು ಕಟ್ಟಡ ನಿರ್ಮಾಣಕ್ಕೆ ಪಾಲಿಸಬೇಕಾದ ನಿಯಮಗಳು ಕುರಿತು ಕುವೆಂಪು ನಗರ, ನಗರ ಬಸ್ ನಿಲ್ದಾಣ ಸೇರಿದಂತೆ ನಗರದ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಈ ವೇಳೆ ಸರಸ್ವತಿಪುರಂ ಅಗ್ನಿಶಾಮಕ ಠಾಣೆ ಅಧಿಕಾರಿ ನಾಗರಾಜು ಮಾತನಾಡಿ, ಚಿಕ್ಕ ಮಕ್ಕಳು ತೆರೆದ ಕೊಳವೆ ಬಾವಿಗಳಲ್ಲಿ ಬೀಳು ವುದು, ಅಗ್ನಿ ಅವಘಡ ಸಂಭವಿಸುವುದು, ಕಟ್ಟಡ ಮತ್ತು ಕಾರ್ಖಾನೆ ಗಳ ನಿರ್ಮಾಣ ಕುರಿತು ಜನರಿಗೆ ಮಾಹಿತಿ ನೀಡಲಾಗುತ್ತಿದೆ. ಅವಘಡ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಅಗ್ನಿಶಾಮಕ ದಳದಿಂದ ಸೇವೆ ಒದಗಿ ಸುವ ಕುರಿತು ತಿಳಿಸಿಕೊಡಲಾಗುತ್ತಿದೆ ಎಂದು ವಿವರಿಸಿದರು.

 

 

Translate »