ಮೈಸೂರು

ಸೈಕಲ್ ಪ್ಯೂರ್ ಅಗರ್‍ಬತ್ತಿಯಿಂದ ನೈವೇದ್ಯ ಕಪ್ ಸಾಂಬ್ರಾಣಿ ಬಿಡುಗಡೆ

July 2, 2021

ಮೈಸೂರು, ಜು.1-ಮೈಸೂರಿನ ಎನ್.ಆರ್.ಸಮೂಹದ ಅತಿ ದೊಡ್ಡ ಅಗರ್‍ಬತ್ತಿ ತಯಾರಿಕಾ ಸಂಸ್ಥೆಯಾದ ಸೈಕಲ್ ಪ್ಯೂರ್ ಅಗರ್‍ಬತ್ತಿಯು ಸಾಂಪ್ರದಾಯಿಕ ಸಾಂಬ್ರಾಣಿ ಅನುಭವದ ಸಾರವನ್ನೊಳಗೊಂಡ `ಓಂ ಶಾಂತಿ ನೈವೇದ್ಯ ಕಪ್’ ಬಿಡುಗಡೆ ಮಾಡಿದೆ. ಇದು ಇದ್ದಿಲು ಕಪ್ ಆಗಿದ್ದು, ಶುದ್ಧ ಸಾಂಬ್ರಾಣಿ ಪದಾರ್ಥಗಳನ್ನು ಒಳಗೊಂಡಿದೆ.

ತಲೆಮಾರುಗಳಿಂದ ಅನುಸರಿಸಲಾಗುತ್ತಿರುವ ಅನೇಕ ಪದ್ಧತಿ ಹಾಗೂ ಆಚರಣೆಗಳಲ್ಲಿ ವೈಜ್ಞಾನಿಕ ಅಂಶಗಳು ಅಡಕವಾಗಿದ್ದು, ಬದ ಲಾಗುತ್ತಿರುವ ಜೀವನ ಶೈಲಿಯಿಂದ ಅದನ್ನು ಅನುಸರಿಸಲು ಕಷ್ಟಸಾಧ್ಯವಾಗಿದೆ. ಅಂತಹ ಆಚರಣೆಗಳಲ್ಲಿ ಮನೆಯಲ್ಲಿ ಸಾಂಬ್ರಾಣಿ ಬಳಕೆಯೂ ಒಂದಾಗಿದ್ದು, ಸಾಂಬ್ರಾಣಿಯ ಮಹತ್ವ ಗೊತ್ತಿದ್ದರೂ ಅದನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಇದನ್ನೆಲ್ಲಾ ಗಮನದಲ್ಲಿಟ್ಟು ಕೊಂಡು ಸೈಕಲ್ ಪ್ಯೂರ್ ಅಗರ್‍ಬತ್ತಿ ಸಂಸ್ಥೆಯು ನೈವೇದ್ಯ ಕಪ್ ಸಾಂಬ್ರಾಣಿಯನ್ನು ವಿನ್ಯಾಸಗೊಳಿಸಿದ್ದು, ಇದು ಬಳಸಲು ಸುಲಭವಾಗಿದೆ ಹಾಗೂ ಇದರ ಸುಗಂಧ ದೀರ್ಘ ಕಾಲದವರೆಗೆ ತಾಜಾವಾಗಿ ಉಳಿಯುತ್ತದೆ. ಈ ಉತ್ಪನ್ನದ ಬಗ್ಗೆ ಪ್ರತಿಕ್ರಿಯಿಸಿದ ಸೈಕಲ್ ಪ್ಯೂರ್ ಅಗರ್‍ಬತ್ತಿ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ, ನಮ್ಮ ಸಾಂಪ್ರದಾಯಿಕ ಅಭ್ಯಾಸಗಳು ಹಾಗೂ ಪದ್ಧತಿಗಳನ್ನು ಮುಂದಿನ ಪೀಳಿಗೆಗೆ ಸಾಗಿಸುವುದರಲ್ಲಿ ಬಲವಾದ ನಂಬಿಕೆ ಹೊಂದಿದ್ದೇವೆ. ಅದರದೇ ಆದ ಅನಾನುಕೂಲತೆಗಳಿಂದ ಪ್ರಸ್ತುತ ಪೀಳಿಗೆಯು ಸಾಂಬ್ರಾಣಿಯ ಪ್ರಯೋಜನವನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅದರ ಪ್ರಯೋಜನ ಪಡೆಯಲು `ನೈವೇದ್ಯ ಕಪ್ ಸಾಂಬ್ರಾಣಿ’ ಪರಿಚಯಿಸುತ್ತಿದ್ದೇವೆ ಎಂದರು. ನೈವೇದ್ಯ ಕಪ್ ಸಾಂಬ್ರಾಣಿ ಮಾರುಕಟ್ಟೆಯಲ್ಲಿ ಲಭ್ಯವಿದು, ಆನ್‍ಲೈನ್‍ನಲ್ಲಿ ಖರೀದಿಸಲು hಣಣಠಿs://ತಿತಿತಿ.ಛಿಥಿಛಿಟe.iಟಿ. ಭೇಟಿ ನೀಡಬಹುದು.

Translate »