3ನೇ ಅಲೆಗೂ ಮುನ್ನ ಗರ್ಭಿಣಿಯರಿಗೆ ಲಸಿಕೆ ಕೊಡಿ: ಕಾಂಗ್ರೆಸ್ ಮಹಿಳಾ ಘಟಕ ಆಗ್ರಹ
ಮೈಸೂರು

3ನೇ ಅಲೆಗೂ ಮುನ್ನ ಗರ್ಭಿಣಿಯರಿಗೆ ಲಸಿಕೆ ಕೊಡಿ: ಕಾಂಗ್ರೆಸ್ ಮಹಿಳಾ ಘಟಕ ಆಗ್ರಹ

July 2, 2021

ಮೈಸೂರು, ಜು.1(ಎಂಟಿವೈ)- ಕೋವಿಡ್ 3ನೇ ಅಲೆಯಿಂದ ಮಕ್ಕಳು-ಗರ್ಭಿಣಿಯರನ್ನು ರಕ್ಷಿಸಲು ಮಹಿಳಾ-ಮಕ್ಕಳ ಅಭಿ ವೃದ್ಧಿ ಇಲಾಖೆ ವಿಶೇಷ ಯೋಜನೆ ರೂಪಿಸಿ ರಾಜ್ಯದ ಎಲ್ಲ ಗರ್ಭಿಣಿಯರಿಗೆ ಲಸಿಕೆ ನೀಡ ಬೇಕು, ಅಂಗನವಾಡಿ ಮಕ್ಕಳಿಗೆ ಪೌಷ್ಠಿಕಾಂಶ ಆಹಾರದ ಕಿಟ್ ವಿತರಿಸಬೇಕು ಎಂದು ಕೆಪಿ ಸಿಸಿ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್ ಮೈಸೂರಲ್ಲಿ ಗುರುವಾರ ಸುದ್ದಿಗೋಷ್ಠಿ ಯಲ್ಲಿ ಆಗ್ರಹಿಸಿದ್ದಾರೆ. ಕೋವಿಡ್ 2ನೇ ಅಲೆ ಎದುರಿಸಲು ಸರ್ಕಾರ ಪೂರ್ಣ ವಿಫಲವಾಗಿದೆ. ಲಸಿಕೆ ಸ್ಟಾಕ್ ಇಲ್ಲ ಎಂದು ಫಲಕ ಹಾಕಲಾಗಿದೆ. 2ನೇ ಅಲೆ ಹೊಡೆತದಿಂದ ಚೇತರಿಸಿಕೊಳ್ಳುವ ಮೊದಲೇ 3ನೇ ಅಲೆಯ ಆತಂಕ ಎದುರಾಗಿದೆ. ಮಕ್ಕಳ ಮೇಲೆ 3ನೇ ಅಲೆ ದುಷ್ಪರಿಣಾಮದ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸುರಕ್ಷತೆಗಾಗಿ ಗರ್ಭಿಣಿಯರಿಗೆ ಲಸಿಕೆ ನೀಡಬೇಕೆಂದು ಒತ್ತಾಯಿಸಿದರು.

ಪೌಷ್ಠಿಕ ಆಹಾರ: 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಅಂಗನವಾಡಿ ಮಕ್ಕಳಿಗೆ ಪೌಷ್ಟಿಕಾಂಶ ಆಹಾರದ ಕಿಟ್ ನೀಡ ಬೇಕಿದೆ. ಕಾಂಗ್ರೆಸ್ ಎಲ್ಲಾ ಜಿಲ್ಲೆಗಳ ಮಕ್ಕಳಿಗೆ 1 ತಿಂಗಳಿಗಾಗು ವಷ್ಟು ಪೌಷ್ಠಿಕಾಂಶ ಆಹಾರದ ಕಿಟ್ ವಿತರಿಸುತ್ತಿದೆ. ಸರ್ಕಾರ ಮಾಡ ಬೇಕಿದ್ದ ಕೆಲಸವನ್ನು ವಿಪಕ್ಷದವರು ಮಾಡುತ್ತಿದ್ದೇವೆ. ಆಡಳಿತ ಪಕ್ಷ ಏನು ವಾಡುತ್ತಿದೆ? ಸಂತ್ರಸ್ತರ ನೆರವಿಗೆ ಬಾರದೆ ಸಂಸದ ಪ್ರತಾಪ್‍ಸಿಂಹ ನಾಪತ್ತೆಯಾಗಿದ್ದಾರೆ ಎಂದು ಟೀಕಿಸಿದರು. ಸರ್ಕಾರ ಅಂಗನವಾಡಿ ಮಕ್ಕಳಿಗೆ ಮೂರು ತಿಂಗಳಿಗಾಗುವಷ್ಟು ಪೌಷ್ಠಿ ಕಾಂಶದ ಕಿಟ್‍ಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದರು. ಜುಲೈ 1ರಂದು ಮೈಸೂರನ್ನು ಕೋವಿಡ್ ಮುಕ್ತ ಮಾಡು ತ್ತೇವೆಂದು ಜಿಲ್ಲಾಡಳಿತ ಹೇಳಿತ್ತು. ಹಾಗೆ ಆಗಿಲ್ಲ. ಡೆತ್ ರೇಟ್, ಪಾಸಿಟಿವಿಟಿ ದರ ತಗ್ಗಿಲ್ಲ ಎಂದು ಹೇಳಿದರು.

ಮಕ್ಕಳಿಗೂ ಲಸಿಕೆ: 3ನೇ ಅಲೆ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಸರ್ಕಾರ ಮಕ್ಕಳ ರಕ್ಷಣೆಗೆ ಕ್ರಮ ಕೈಗೊಂಡಿಲ್ಲ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿ ಚರ್ಚಿಸಲು ವಿಧಾನಸಭಾ ಅಧಿ ವೇಶನ ಕರೆಯಬೇಕು. ಅಮೆರಿಕ, ರಷ್ಯಾ ಮತ್ತು ಯೂರೋಪ್ ಸೇರಿದಂತೆ ವಿವಿಧ ದೇಶಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಭಾರತದಲ್ಲೂ ಮಕ್ಕಳಿಗೆ ಲಸಿಕೆ ಅಭಿಯಾನ ಆರಂಭಿಸಬೇಕು ಎಂದು ಆಗ್ರಹಿಸಿದರು. ಪೆಟ್ರೋಲ್, ಡೀಸೆಲ್, ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಬೆಲೆ ಇಳಿಸುವಂತೆ ಜನ ಆಗ್ರಹಿಸುತ್ತಿದ್ದಾರೆ. ಆದರೆ, ಸರ್ಕಾರ ನಿತ್ಯ ಬೆಲೆ ಏರಿಸುತ್ತಲೇ ಇದೆ. ಬಿಜೆಪಿ ಕಾರ್ಯ ಕರ್ತರು ಮತ್ತು ಭಕ್ತರು ಪೆಟ್ರೋಲ್ ಬೆಲೆ ಏರಿಕೆಗೆ ಉಚಿತ ಲಸಿಕೆ ನೀಡುತ್ತಿರುವುದೇ ಕಾರಣ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ತೆರಿಗೆ ಹಣ ಎಲ್ಲ್ಲಿ? ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿ ಯಲ್ಲಿ ಮಾಜಿ ಮೇಯರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ ಇದ್ದರು.

Translate »