ಮೈಸೂರು,ಜು.1- ಜಗತ್ತಿನಲ್ಲಿ ಶೈಕ್ಷಣಿಕ ಕ್ಷೇತ್ರ ಅತ್ಯಂತ ಪವಿತ್ರವಾದದ್ದು. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವ ರೆಗೆ ಇಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು, ಪ್ರಾಂಶು ಪಾಲರು ತಮ್ಮ ಆತ್ಮಸಾಕ್ಷಿಗನುಗುಣವಾಗಿ ಕಾರ್ಯನಿರ್ವಹಿಸಿ ಶಿಕ್ಷಣದ ಪಾವಿತ್ರ್ಯತೆ ಯನ್ನು ಮತ್ತಷ್ಟು ಮೆರೆಸಿ ಮುಂದಿನವರು ಹಿಂದಿನವರಿಗೆ ಆದರ್ಶವಾಗಬೇಕೆಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು.
ಮೈಸೂರು ದೇವರಾಜ ಮೊಹಲ್ಲಾದ ದೇವರಾಜ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ನಿವೃತ್ತ ರಾದ ವಾಣಿಜ್ಯಶಾಸ್ತ್ರದ ಉಪನ್ಯಾಸಕ ರವಿ ಕುಮಾರ್ ಅವರಿಗೆ ಏರ್ಪಡಿಸಿದ್ದ ಬೀಳ್ಕೊ ಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಅವರು, ಜನರನ್ನು ಹಾಗೂ ಜಗತ್ತನ್ನು ಯಾರೂ ಮೆಚ್ಚಿಸಲು ಆಗದು. ಆದರೆ ಕನಿಷ್ಠ ತಮ್ಮ ಆತ್ಮಸಾಕ್ಷಿ ಒಪ್ಪುವಂತೆ ಯಾದರೂ ಗುರುಗಳೆನಿಸಿಕೊಂಡವರು ಸೇವೆ ಮಾಡಿ ಸಮಾಜಕ್ಕೆ ಒಳ್ಳೆಯ ಪ್ರಜೆ ಗಳನ್ನು ತಯಾರಿಸಿ ಕೊಡಬೇಕು. ಈ ದಿಸೆಯಲ್ಲಿ ತಾವು ಕೆಲಸ ಮಾಡಿದ ಕಾಲೇಜುಗಳಲ್ಲೆಲ್ಲಾ ಒಳ್ಳೆ ಹೆಸರು ಸಂಪಾ ದಿಸಿಕೊಂಡು ಬಂದು ಇಂದು ನಿವೃತ್ತಿ ಜೀವನಕ್ಕೆ ಹೆಜ್ಜೆ ಇಟ್ಟಿರುವ ವಾಣಿಜ್ಯ ಶಾಸ್ತ್ರದ ಉಪನ್ಯಾಸಕ ರವಿಕುಮಾರ್ ಅವರ ಪ್ರಾಮಾ ಣಿಕ ಸೇವೆ ಶ್ಲಾಘನೀಯವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯಾವ ದೇಶದಲ್ಲಿ ಶೈಕ್ಷಣಿಕ ವ್ಯವಸ್ಥೆ ಉತ್ತಮವಾಗಿರುತ್ತದೋ ಆ ದೇಶ ಸಂಪ ದ್ಭರಿತ ಹಾಗೂ ಸುಭದ್ರವಾಗಿರುತ್ತದೆ. ಹಾಗೆಯೇ ಯಾವ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಹದಗೆಟ್ಟು ಹೋಗಿರುತ್ತದೆಯೋ ಅಂತಹ ದೇಶದಲ್ಲಿ ಎಲ್ಲವೂ ಕೆಟ್ಟುಹೋಗಿ ಒಟ್ಟಾರೆ ಅಲ್ಲಿನ ಸಮಾಜ ಸಂಕಷ್ಟ ಪರಿಸ್ಥಿತಿಗೆ ತಲು ಪಿರುತ್ತದೆ. ಎಲ್ಲಿಯೇ ಆಗಲಿ ಶೈಕ್ಷಣಿಕ ವ್ಯವಸ್ಥೆ ಬಹುಪಾಲು ಗುರುವರ್ಯರ ಕೈಯಲ್ಲಿರುತ್ತದೆ. ಆದ್ದರಿಂದ ಗುರುಗಳೆನಿಸಿ ಕೊಂಡವರು ತಮ್ಮ ಪ್ರಾಮಾಣಿಕ ಶೈಕ್ಷಣಿಕ ಸೇವೆಯಿಂದ ದೇಶದ ಅಭಿವೃದ್ಧಿಗೆ ಶ್ರಮಿಸ ಬೇಕೆಂದ ಅವರು, ಶಿಕ್ಷಣವೇ ಜಗತ್ತಿನ ಆತ್ಮ. ಹಾಗಾಗಿ ಅದು ಯಾವತ್ತೂ ಪರಿ ಶುದ್ಧವಾಗಿ ರಬೇಕು. ಇದಕ್ಕೆ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳನ್ನು ಮುನ್ನಡೆಸುವ ಗುರು ಗಳ ಶಕ್ತಿ ಬಹು ಮುಖ್ಯವೆಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾ ಧ್ಯಕ್ಷರೂ ಆಗಿರುವ ಕಾರ್ಪೊರೇಟರ್ ಪ್ರಮೀಳಾ ಭರತ್, ರವಿಕುಮಾರ್ ಅವ ರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಕಾಲೇಜಿನ ಪರವಾಗಿ ಅಭಿ ನಂದಿಸಿದರು. ನಂತರ ಮಾತನಾಡಿದ ನಿವೃತ್ತ ಉಪನ್ಯಾಸಕ ರವಿಕುಮಾರ್, ಎಲ್ಲ ರಿಗೂ ಕೃತಜ್ಞತೆ ಸಲ್ಲಿಸಿದರು. ಕಾಲೇಜಿನ ಪ್ರಾಂಶುಪಾಲ ಕಾಡ್ನೂರು ಈ.ಶಿವೇಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಾದ ವಿಘ್ನೇಶ್ವರ ಭಟ್, ರಾಜಗೋಪಾಲ್, ಚರಣ್, ರಾಜಣ್ಣ ಹಾಗೂ ಉಪನ್ಯಾಸಕ ರಾದ ಡಾ.ವಿ.ಶ್ರೀಮತಿ, ಎ.ಬಿ.ಸಬಿತಾ, ಸುಶೀಲಾ ವಿ. ಭಟ್, ಟಿ.ಎಂ.ನಾಗೇಶ್, ವಿ.ಆನಂದಕುಮಾರ್, ಎಂ.ಕೆ.ರಾಧಾ, ಎ.ಎಸ್.ಜಗದೀಶ್, ಎಸ್.ಶ್ಯಾಮಲಾ, ಡಿ.ಪ್ರಭಾ ವತಿ, ಉಷಾ ಎಸ್.ಗೊಂಧಳಿ, ಪುಷ್ಪಲತಾ, ಸವಿತಾ, ಎಂ.ಪಿ.ಗಂಗಮ್ಮ, ಪಿ.ಜ್ಯೋತಿ ಮುಂತಾದವರು ಉಪಸ್ಥಿತರಿದ್ದರು.