ಅರಿವಿನ ಕೊರತೆ ಇರುವುದು ರಾಹುಲ್ ಗಾಂಧಿಗಲ್ಲ, ಪ್ರಧಾನಿ ಮೋದಿಗೆ
ಮೈಸೂರು

ಅರಿವಿನ ಕೊರತೆ ಇರುವುದು ರಾಹುಲ್ ಗಾಂಧಿಗಲ್ಲ, ಪ್ರಧಾನಿ ಮೋದಿಗೆ

July 5, 2021

ಮೈಸೂರು,ಜು.4(ಆರ್‍ಕೆಬಿ)- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಅರಿ ವಿನ ಕೊರತೆ ಮತ್ತು ದುರಹಂಕಾರಿ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೇಳಿಕೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಖಂಡಿಸಿದರು.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅರಿವಿನ ಕೊರತೆ ಇರು ವುದು ರಾಹುಲ್‍ಗಾಂಧಿ ಅವರಿಗಲ್ಲ. ನರೇಂದ್ರ ಮೋದಿ ಅವರಿಗೆ. ಇಂದು ಕೋವಿಡ್ ದೇಶಾ ದ್ಯಂತ ವ್ಯಾಪಕವಾಗಿ ಹರಡಲು ನರೇಂದ್ರ ಮೋದಿ ಕಾರಣ. ಕೋವಿಡ್ ಮೊದಲ ಅಲೆ ಬರುವ ಮೊದಲೇ 2020ರ ಫೆಬ್ರವರಿಯಲ್ಲಿ ಲೋಕಸಭಾ ಅಧಿವೇಶನದಲ್ಲಿ ರಾಹುಲ್ ಗಾಂಧಿ ಪ್ರಸ್ತಾಪಿಸಿ ಮುಂಜಾಗ್ರತೆ ವಹಿಸು ವಂತೆ ಸರ್ಕಾರದ ಗಮನ ಸೆಳೆದಿದ್ದರು. ಮಾಜಿ ಪ್ರಧಾನಿ ಮನಮೋಹನ್‍ಸಿಂಗ್ ಕೂಡ ಕೋವಿಡ್ ಲಸಿಕೆಯನ್ನು ಖಾಸಗಿ ಕ್ಷೇತ್ರಕ್ಕೆ ವಿಸ್ತರಿಸಿ ದೇಶದ ಜನರಿಗೆ ಮೊದಲು ಲಸಿಕೆ ನೀಡುವಂತೆ ಕೇಂದ್ರಕ್ಕೆ ಸಲಹೆ ನೀಡಿ ದ್ದರು. ಆದರೆ ಅವರ ಸಲಹೆಗಳನ್ನು ಮೋದಿ ಸ್ವೀಕರಿಸದೆ, ಆರೋಗ್ಯ ಸಚಿವ ಹರ್ಷವರ್ಧನ್ ಮೂಲಕ ರಾಹುಲ್‍ಗಾಂಧಿಯವರ ತೇಜೋ ವಧೆ ಮಾಡಿಸಿದರು ಎಂದು ಮೋದಿ ವಿರುದ್ಧ ಅವರು ಟೀಕಾಪ್ರಹಾರ ನಡೆಸಿದರು.

2020ರ ಜನವರಿಯಲ್ಲಿ ಅಮೆರಿಕಾ ಅಧ್ಯಕ್ಷರನ್ನು ಗುಜರಾತ್‍ಗೆ ಕರೆಸಿದ್ದ ನರೇಂದ್ರ ಮೋದಿ ಲಕ್ಷಾಂತರ ಜನರನ್ನು ಸೇರಿಸಿ, ಕೊರೊನಾ ವೈರಸ್ ಅನ್ನು ನಮ್ಮ ದೇಶಕ್ಕೆ ಆಮದು ಮಾಡಿಕೊಂಡರು. ಹೊರ ದೇಶ ದಿಂದ ನಮ್ಮ ದೇಶಕ್ಕೆ ಕೊರೊನಾ ವೈರಸ್ ತಂದಿದ್ದರಿಂದಲೇ ದೇಶಾ ದ್ಯಂತ ಬಹು ಬೇಗ ವ್ಯಾಪಿ ಸಲು ಕಾರಣರಾದರು ಎಂದು ಗಂಭೀರ ಆರೋಪ ಮಾಡಿದರು.

ಗುಜರಾತ್, ಪಶ್ಚಿಮ ಬಂಗಾಳ ಚುನಾವಣೆ ವೇಳೆ ಲಕ್ಷಾಂತರ ಜನ ಸೇರಿಸಿ ರ್ಯಾಲಿ ನಡೆಸಿದರು. ಆ ಮೂಲಕ 2ನೇ ಅಲೆ ಹೆಚ್ಚಲು ಕಾರಣ ರಾದರು. ಇಂದು ದೇಶದ ಜನ ತತ್ತರಿಸುವಂತೆ ಮಾಡಿದ್ದಾರೆ. ಕೋವಿಡ್ ನಿಂದ ಲಕ್ಷಾಂತರ ಜನರು ಮೃತಪಟ್ಟಿದ್ದರೂ ಅಂಕಿ ಸಂಖ್ಯೆಯನ್ನು ಕಡಿಮೆ ನೀಡಿ ಮುಚ್ಚಿಡ ಲಾಗುತ್ತಿದೆ. ಜೊತೆಗೆ ಕುಂಭಮೇಳವನ್ನು ನಡೆಸಿ ಲಕ್ಷಾಂತರ ಜನರು ಭಾಗವಹಿಸಿ ಕೊರೊನಾ ಹೆಚ್ಚಾಗುವಂತೆ ಮಾಡಿ ದ್ದಾರೆಂದು ಮೋದಿ ವಿರುದ್ಧ ಟೀಕಿಸಿದರು.

ಸರ್ವಾಧಿಕಾರಿ ಧೋರಣೆಯ ಪ್ರಧಾನಿ ಮೋದಿ, ಆಕ್ಸಿಜನ್ ಕೊರತೆಯಿಂದ ದೇಶ ವ್ಯಾಪಿ ಸಾವಿರಾರು, ಲಕ್ಷಾಂತರ ಮಂದಿ ಸಾವಿಗೀಡಾದರೂ ಕ್ರಮ ಕೈಗೊಳ್ಳಲಿಲ್ಲ. ದೆಹಲಿಯಲ್ಲಿ 5 ತಿಂಗಳಿಂದ ರೈತರು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದರೂ ರೈತರ ಪರ ನಿಲ್ಲಲಿಲ್ಲ. ಒಟ್ಟಾರೆ, ರಾಹುಲ್ ಗಾಂಧಿ ಅವರನ್ನು ಟೀಕಿಸು ವುದೇ ಅವರ ಏಕೈಕ ಗುರಿ ಎಂದು ಆರೋಪಿಸಿದರು.

ಪ್ರಗತಿಪರ ಧೋರಣೆ ಯುಳ್ಳ ರಾಹುಲ್ ಗಾಂಧಿ ಯುವ ನಾಯಕ. ಉಪಪ್ರಧಾನಿ, ಸಚಿವ ಆಗಬಹುದಿತ್ತು. ಅವರು ಎಂದೂ ಅಧಿಕಾರಕ್ಕೆ ಆಸೆ ಪಡಲಿಲ್ಲ. ಅಂತಹ ನಾಯಕರ ಬಗ್ಗೆ ಹಗುರವಾಗಿ ಮಾತನಾಡಲು ಬಿಜೆಪಿಗರಿಗೆ ನೈತಿಕತೆ ಇಲ್ಲ. ರಾಹುಲ್ ಗಾಂಧಿ ಬಗ್ಗೆ ನೀಡಿ ರುವ ಹೇಳಿಕೆಯನ್ನು ಪ್ರಹ್ಲಾದ್ ಜೋಶಿ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಲಸಿಕೆಯಲ್ಲಿ ಸಂಪೂರ್ಣ ವಿಫಲ: ಕೇಂದ್ರ ಸರ್ಕಾರ ಲಸಿಕೆ ನೀಡುವುದರಲ್ಲಿ ಸಂಪೂರ್ಣ ವಿಫಲವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ ಲಸಿಕೆ ಸಿಗುತ್ತಿಲ್ಲ. ಕೇಂದ್ರ ನೀಡು ತ್ತಿರುವ ಅಂಕಿ ಅಂಶಗಳು ಸುಳ್ಳು. ರಾಜ್ಯದಲ್ಲಿ ಸಚಿವರು ದ್ವಂದ್ವ ಹೇಳಿಕೆಗಳನ್ನು ನೀಡು ತ್ತಿರುವುದನ್ನು ನೋಡಿದರೆ ಸರ್ಕಾರದಲ್ಲಿ ಸ್ಪಷ್ಟತೆ ಇಲ್ಲ. ತಜ್ಞರ ವರದಿ ಸರಿಯಾಗಿ ಪಾಲಿಸದೆ ನಿರ್ಲಕ್ಷ್ಯ ಮಾಡಿದ್ದರಿಂದಲೇ ಈ ಗೊಂದಲ. ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಅಭಿ ವೃದ್ಧಿ ಬಗ್ಗೆ ಒಂದೂ ಮಾತನಾಡದ ಬಿಜೆಪಿ ನಾಯಕರು, ಕೋವಿಡ್ ಸಂದರ್ಭದಲ್ಲಿ ಜನರ ಜೀವ ಉಳಿಸುವುದನ್ನು ಬಿಟ್ಟು, ಮುಖ್ಯಮಂತ್ರಿ ಇಳಿಸುವ ವಿಚಾರವನ್ನೇ ದೊಡ್ಡದು ಮಾಡಿ, ಅಧಿಕಾರ ದಾಹದಿಂದ ವರ್ತಿಸುತ್ತಿದ್ದಾರೆ ಎಂದೂ ದೂರಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ತನ್ವೀರ್ ಸೇಠ್, ಮಾಜಿ ಶಾಸಕರಾದ ಎಂ.ಕೆ.ಸೋಮ ಶೇಖರ್, ಕಳಲೆ ಕೇಶವಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ವೀಕ್ಷಕರಾದ ಎಂ.ಎಸ್.ಆತ್ಮಾನಂದ, ಮಂಜುಳಾ ನಾಯ್ಡು, ಹೆಚ್.ಎ.ವೆಂಕಟೇಶ್, ಎಂ.ಲಕ್ಷ್ಮಣ್, ಬಾಲಾಜಿ, ಸುರೇಶ್, ಶಿವಣ್ಣ, ಈಶ್ವರ್ ಚಕ್ಕಡಿ ಇನ್ನಿತರರು ಉಪಸ್ಥಿತರಿದ್ದರು.

Translate »