ಮೈಸೂರು

ಮೂರ್ನಾಲ್ಕು ದಿನದಲ್ಲಿ ಭಾರೀ ಬದಲಾವಣೆ!?

November 24, 2020

ಬೆಂಗಳೂರು,ನ.23-ರಾಜ್ಯ ರಾಜಕಾರಣದಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಭಾರೀ ಬದಲಾವಣೆಗಳಾಗಲಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ದಟ್ಟ ವಾಗಿದೆ. ಸೋಮವಾರ ದಿಢೀರನೇ ಇಂತಹದ್ದೊಂದು ವದಂತಿ ಹಬ್ಬಿದ ಬೆನ್ನಲ್ಲೇ ಮುಖ್ಯಮಂತ್ರಿಗಳು ದಿಢೀರನೇ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಅಧಿಸೂಚನೆ ಹೊರಡಿಸಿದ್ದು, ಬರೋಬ್ಬರಿ ಐದು ನೂರು ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ.

ಹೈಕಮಾಂಡ್ ಮಟ್ಟದಲ್ಲಿ ತಮ್ಮ ಬದಲಾವಣೆಯ ಕುರಿತ ಪ್ರಯತ್ನಗಳು ಬಿರುಸುಗೊಂಡಿ ರುವ ಹಿನ್ನೆಲೆಯಲ್ಲಿಯೇ ಮುಖ್ಯಮಂತ್ರಿಗಳು ನಾಳೆ ಸಂದರ್ಭ ಬಂದಲ್ಲಿ ತಮ್ಮ ವೀರ ಶೈವ-ಲಿಂಗಾಯತ ಸಮುದಾಯ ತಮ್ಮ ಪರ ನಿಲ್ಲಲಿ. ಈ ಹಿಂದಿನಂತೆಯೇ ಸಮು ದಾಯದ ಮಠಾಧೀಶರ ನೇತೃತ್ವದಲ್ಲಿ ತಮ್ಮ ಪರವಾಗಿ ಬೀದಿಗಿಳಿದು

ಬಲಪ್ರದರ್ಶನ ಮಾಡಬೇಕಾದ ಸಂದರ್ಭ ಬಂದಾಗ ಇಡೀ ಸಮುದಾಯ ಒಕ್ಕೊರಲಿ ನಿಂದ ಜೊತೆ ನಿಲ್ಲಲಿ ಎಂಬ ಉದ್ದೇಶದಿಂದಲೇ ಇಷ್ಟೊಂದು ತರಾತುರಿಯಲ್ಲಿ ಭಾರೀ ಮೊತ್ತದ ಹಣ ಘೋಷಿಸಿ ಅಧಿಸೂಚನೆ ಹೊರಡಿಸಿದ್ದಾರೆ ಎಂದೇ ಮುಖ್ಯಮಂತ್ರಿಗಳ ಈ ಕಾರ್ಯ ವನ್ನು ವಿಶ್ಲೇಷಿಸಲಾಗುತ್ತಿದೆ. ವಲಸಿಗ ಶಾಸಕರ ನಾಯಕ ರಮೇಶ್ ಜಾರಕಿಹೊಳಿ ಮತ್ತು ಮೂಲ ಬಿಜೆಪಿ ಬಣದ ಪ್ರಮುಖ ಸಿ.ಟಿ.ರವಿ ಜಂಟಿಯಾಗಿ ಕಳೆದ ವಾರ ದೆಹಲಿಗೆ ತೆರಳಿ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಿದ ಬೆನ್ನಲ್ಲೇ ಯಡಿಯೂರಪ್ಪ ವಿರೋಧಿ ಅಲೆ ದೆಹಲಿ ಮಟ್ಟದಲ್ಲಿ ಬಿರುಸುಗೊಂಡಿದೆ. ಆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಕೂಡ ತರಾತುರಿಯಲ್ಲಿ ದೆಹಲಿ ಭೇಟಿ ಕೈಗೊಂಡಿದ್ದರು. ಸಿಟಿರವಿ ದೆಹಲಿಯಿಂದ ವಾಪಸ್ಸಾಗುತ್ತಲೇ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮುಂದಿನ ಬದಲಾವಣೆಗಳ ಬಗ್ಗೆ ಚರ್ಚಿಸಿದ್ದರು. ವಿಜಯೇಂದ್ರ ಕೂಡ ದೆಹಲಿಯಿಂದ ನೇರವಾಗಿ ತಮ್ಮ ತಂದೆಯನ್ನು ಭೇಟಿ ಮಾಡಿ ಚರ್ಚಿಸಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣಕರ್ತರಾದ ತಮಗೆ ಈ ಹಿಂದೆ ಮಾತು ಕೊಟ್ಟಂತೆ ಪ್ರಮುಖ ಸ್ಥಾನ ಕೊಡಬೇಕು. ಸದ್ಯ ಉಪ ಚುನಾವಣೆ ನಡೆಯಲಿರುವ ಬೆಳಗಾವಿ ಕ್ಷೇತ್ರದಲ್ಲಿ ಪಕ್ಷ ಗೆಲುವು ಪಡೆಯಲು ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಅನಿವಾರ್ಯ ಎಂದು ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಈಗಾಗಲೇ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಯಾಗಿದ್ದು, ಅವರ ಮತ್ತೊಂದು ಬೇಡಿಕೆ ಸರ್ಕಾರದಲ್ಲಿ ಪ್ರಮುಖ ಸ್ಥಾನದ ಕುರಿತು ಚರ್ಚಿಸಲೆಂದೇ ರಮೇಶ್ ಜಾರಕಿಹೊಳಿ ದೆಹಲಿಗೆ ತೆರಳಿದ್ದರು. ಆ ವೇಳೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರೊಂದಿಗೆ ಸಮಾಲೋಚನೆ ನಡೆಸಿ ಬಂದಿದ್ದಾರೆ.

 

 

 

Translate »