ನವದೆಹಲಿ,ನ.23- ಹಲವು ತಿಂಗಳ ಊಹಾಪೆÇೀಹಗಳ ನಂತರ ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ಮತ್ತು ಮಾಜಿ ಸಂಸದೆ ವಿಜಯಶಾಂತಿ ನಾಳೆ ದೆಹಲಿಗೆ ತೆರಳಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖ ದಲ್ಲಿ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಬಹುತೇಕ ಖಾತ್ರಿ ಯಾಗಿದೆ. ಚಿತ್ರನಟಿ ವಿಜಯಶಾಂತಿ ಬಿಜೆಪಿಗೆ ಮತ್ತೆ ಸೇರ್ಪಡೆ ಯಾಗುತ್ತಿರುವುದರಿಂದ ಡಿಸೆಂಬರ್ 1ರಂದು ನಡೆಯಲಿರುವ ಜಿಹೆಚ್‍ಎಂಸಿಯ 150 ವಾರ್ಡ್ ಗಳ ಚುನಾವಣೆಯ ಪ್ರಚಾರಕ್ಕೆ ಬಲ ಬಂದಂತಾಗಿದೆ. ವಿಜಯ ಶಾಂತಿ ಬಿಜೆಪಿಗೆ ಸೇರ್ಪಡೆಯಾದರೆ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದಲ್ಲಿ ಉನ್ನತ ಸ್ಥಾನ ಪಡೆಯಲಿದ್ದಾರೆ. ಪಕ್ಷದಲ್ಲಿ ಎರಡನೇ ಉನ್ನತ ನಾಯಕರಾದ ಅಮಿತ್ ಶಾ ಅವರ ಸಮ್ಮುಖದಲ್ಲಿ ವಿಜಯಶಾಂತಿ ಬಿಜೆಪಿಗೆ ಸೇರಲಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.