ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮ ಗಾಂಧಿ ಮರಿ   ಮೊಮ್ಮಗ ಸತೀಶ್ ಕೊರೊನಾಗೆ ಬಲಿ
ಮೈಸೂರು

ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮ ಗಾಂಧಿ ಮರಿ  ಮೊಮ್ಮಗ ಸತೀಶ್ ಕೊರೊನಾಗೆ ಬಲಿ

November 24, 2020

ಜೋಹಾನ್ಸ್ ಬರ್ಗ್: ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಮರಿ ಮೊಮ್ಮಗ ಸತೀಶ್ ಧುಪೇಲಿಯಾ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಮೂರು ದಿನಗಳ ಹಿಂದೆ ಸತೀಶ್ ತಮ್ಮ 66ನೇ ಹುಟ್ಟುಹಬ್ಬ ಆಚರಿಸಿ ಕೊಂಡಿದ್ದರು ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ. ನ್ಯುಮೋನಿಯಾದಿಂದ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಸತೀಶ್ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ಸಹೋದರಿ ಉಮಾ ಧುಪೇ ಲಿಯಾ ಸ್ಪಷ್ಟಪಡಿಸಿದ್ದಾರೆ. ನ್ಯುಮೋನಿಯಾ ಕಾರಣದಿಂದ 1 ತಿಂಗಳಿಂದ ಅನಾರೋಗ್ಯ ಪೀಡಿತರಾಗಿದ್ದ ನನ್ನ ಸಹೋದರ ಸತೀಶ್ ಚಿಕಿತ್ಸೆ ಫಲಿಸದೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸೋಷಿಯಲ್ ಮೀಡಿಯಾ ಪೋಸ್ಟ್‍ನಲ್ಲಿ ಹಾಕಿಕೊಂಡಿದ್ದಾರೆ. ಉಮಾ ಜೊತೆಗೆ, ಧುಪೆಲಿಯಾ ಜೋಹಾನ್ಸ್‍ಬರ್ಗ್‍ನಲ್ಲಿ ವಾಸಿಸು ತ್ತಿರುವ ಕೀರ್ತಿ ಮೆನನ್ ಎಂಬ ಇನ್ನೊಬ್ಬ ಸಹೋದರಿಯನ್ನು ಅಗಲಿದ್ದಾರೆ. ಕೀರ್ತಿ ಅವರು ಗಾಂಧಿಯ ಸ್ಮರಣೆಯನ್ನು ಗೌರವಿಸುವ ವಿವಿಧ ಯೋಜನೆಗಳಲ್ಲಿ ಸಕ್ರಿಯರಾಗಿ ದ್ದಾರೆ. ತನ್ನ ಜೀವನದ ಬಹುಪಾಲು ಮಾಧ್ಯಮಗಳಲ್ಲಿ, ವಿಶೇಷವಾಗಿ ವಿಡಿಯೋಗ್ರಾಫರ್ ಮತ್ತು ಛಾಯಾಗ್ರಾಹಕನಾಗಿ ಕಳೆದ ಧುಪೆಲಿಯಾ, ಡರ್ಬನ್‍ನ ಬಳಿಯ ಫೀನಿಕ್ಸ್ ಸೆಟಲ್‍ಮೆಂಟ್‍ನಲ್ಲಿ ಮಹಾತ್ಮರು ಪ್ರಾರಂಭಿಸಿದ ಕೆಲಸವನ್ನು ಮುಂದುವರಿಸಲು ಗಾಂಧಿ ಅಭಿವೃದ್ಧಿ ಟ್ರಸ್ಟ್‍ಗೆ ಸಹಾಯ ಮಾಡುವಲ್ಲಿ ತುಂಬಾ ಸಕ್ರಿಯರಾಗಿದ್ದರು.

 

 

 

Translate »