ಐಎಂಎ ಹಗರಣ: ರೋಷನ್ ಬೇಗ್   ಬೆಂಗಳೂರು ನಿವಾಸದ ಮೇಲೆ ಸಿಬಿಐ ದಾಳಿ
ಮೈಸೂರು

ಐಎಂಎ ಹಗರಣ: ರೋಷನ್ ಬೇಗ್  ಬೆಂಗಳೂರು ನಿವಾಸದ ಮೇಲೆ ಸಿಬಿಐ ದಾಳಿ

November 24, 2020

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಹಗರಣದಲ್ಲಿ ಜೈಲು ಪಾಲಾಗಿರುವ ಮಾಜಿ ಶಾಸಕ ರೋಷನ್ ಬೇಗ್ ಅವರ ಕುಟುಂಬಸ್ಥರಿಗೂ ಇದೀಗ ಸಿಬಿಐ ಶಾಕ್ ಕೊಟ್ಟಿದೆ. ರೋಷನ್ ಬೇಗ್ ನಿವಾಸದ ಮೇಲೆ ಸಿಬಿಐ ದಾಳಿ ಮಾಡಿದೆ. ಬೆಂಗ ಳೂರಿನ ಕೋಲ್ಸ್ ಪಾರ್ಕ್ ಪ್ರದೇಶದಲ್ಲಿ ಇರುವ ರೋಷನ್ ಬೇಗ್ ನಿವಾಸದ ಮೇಲೆ ಸಿಬಿಐ ಇಂದು ಮುಂಜಾನೆಯೇ ದಾಳಿ ನಡೆಸಿದೆ. ಹಗರಣ ಸಂಬಂಧ ಸಾಕ್ಷ್ಯಗಳಿಗಾಗಿ ಸಿಬಿಐ ಹುಡುಕಾಟ ನಡೆಸಿದೆ. ಭಾನುವಾರವಷ್ಟೇ ಸಿಬಿಐ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದಿತ್ತು. ಭಾನುವಾರ ಬೆಳಗಿನಿಂದ ಸಂಜೆವರೆಗೂ ನಿರಂತರವಾಗಿ ವಿಚಾರಣೆ ನಡೆಸಿದ ಬಳಿಕ ರಾತ್ರಿ ವೇಳೆಗೆ ನ್ಯಾಯಾಲಯದ ಎದುರು ಹಾಜರು ಪಡಿಸಿದರು. ಈ ವೇಳೆ ನ್ಯಾಯಾಲಯ ಬೇಗ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ರೋಷನ್ ಬೇಗ್ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಐಎಂಎ ಕಂಪನಿ ಮತ್ತು ಮನ್ಸೂರ್ ಖಾನ್‍ನಿಂದ ರೋಷನ್ ಬೇಗ್‍ಗೆ ಹಣ ಪಾವತಿಯಾಗಿರುವ ಆರೋಪವಿದೆ. ಐಎಂಎ ಹಗರಣದ ಕುರಿತು ಫೆÇೀರೆನ್ಸಿಕ್ ಆಡಿಟ್ ನಡೆಸಿದ ವೇಳೆ, ರೋಷನ್ ಬೇಗ್ ಅವರಿಗೆ ಹಣ ಪಾವತಿಯಾಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ, ಸಿಬಿಐ ಅಧಿಕಾರಿಗಳು ರೋಷನ್ ಬೇಗ್ ಅವರನ್ನು ವಿಚಾರಣೆಗೆ ಕರೆಸಿದ್ದರು. ಐಎಂಎ ಪ್ರಕರಣ ಸಂಬಂಧ ಆರೋಪಿ ಮನ್ಸೂರ್ ಖಾನ್‍ನಿಂದ ಸುಮಾರು 200 ಕೋಟಿ ರೂ.ಗೂ ಹೆಚ್ಚು ಹಣವನ್ನು ರೋಷನ್ ಬೇಗ್ ಪಡೆದಿದ್ದಾರೆ ಎಂಬ ಆರೋಪವಿದೆ. ಹಣವಷ್ಟೇ ಅಲ್ಲ, ಐಷಾರಾಮಿ ಕಾರುಗಳೂ ಸೇರಿದಂತೆ ಇನ್ನಿತರ ದುಬಾರಿ ಬೆಲೆಯ ಉಡುಗೊರೆಗಳನ್ನೂ ರೋಷನ್ ಬೇಗ್ ಪಡೆದಿದ್ದಾರೆ ಎಂಬ ಆರೋಪ ವಿದೆ.

ಬಿಡಿಎ ಅಧಿಕಾರಿ ಬಲೆಗೆ 

ಬೆಂಗಳೂರು: ಐಎಂಎ ಸಂಸ್ಥೆಯ ಬಹು ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ತನಿಖೆ ಚುರುಕುಗೊಳಿಸಿರುವ ಸಿಬಿಐ ಅಧಿಕಾರಿಗಳು ಸೋಮವಾರ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಿಡಿಎ ವಿಶೇಷ ಭೂಸ್ವಾಧೀನಾಧಿಕಾರಿ ಪಿ.ಡಿ.ಕುಮಾರ್ ಬಂಧಿತ ಆರೋಪಿಯಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮೊಹ ಮ್ಮದ್ ಮನ್ಸೂರ್ ಖಾನ್ ಹಣ ರಿಯಲ್ ಎಸ್ಟೇಟ್ ವಲಯದಲ್ಲಿ ಹೂಡಿಕೆಯಾಗಿದೆ. ಮನ್ಸೂರ್‍ಖಾನ್‍ನಿಂದ

3ರಿಂದ 4 ಕೋಟಿ ರೂ. ಹಣವನ್ನು ಪಿ.ಡಿ.ಕುಮಾರ್ ಪಡೆದಿದ್ದರು ಎಂದು ಆರೋಪಿಸಿ ಕುಮಾರ್ ವಿರುದ್ಧ ಸಿಬಿಐ ಅಧಿಕಾರಿಗಳು ಎಫ್‍ಐಆರ್ ದಾಖಲಿಸಿದ್ದರು. ಕುಮಾರ್ ಅವರನ್ನು ಬಂಧಿಸಿದ ಅಧಿಕಾರಿಗಳು, ಸಿಬಿಐ ವಿಶೇಷ ನ್ಯಾಯಾಲಯದ ಎದುರು ಹಾಜರು ಪಡಿಸಿದ್ದರು. ನಂತರ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ಗಾಗಿ ಕುಮಾರ್ ಅವರನ್ನು ಮೂರು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿ ಆದೇಶಿಸಿದೆ.

 

 

 

 

 

 

Translate »