ಮೈಸೂರು

ರಷ್ಯಾದಿಂದ ಅಣ್ವಸ್ತ್ರ ಎಚ್ಚರಿಕೆ

March 2, 2022

ಮಾಸ್ಕೋ, ಫೆ. ೨೮- ಜಾಗತಿಕ ಸಮು ದಾಯಗಳಿಂದ ಎಚ್ಚರಿಕೆ ಹಾಗೂ ಉಕ್ರೇನ್ ನಲ್ಲಿ ರಷ್ಯಾ ಸೈನಿಕರಿಗೆ ಎದುರಾಗುತ್ತಿರುವ ಪ್ರತಿರೋಧದಿಂದಾಗಿ ಕುಪಿತಗೊಂಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅಣ್ವಸ್ತç ಪ್ರಯೋಗಕ್ಕೆ ಸಿದ್ಧತೆ ಮಾಡಿಕೊಳ್ಳು ವಂತೆ ತಮ್ಮ ರಾಷ್ಟçದ ಅಣ್ವಸ್ತç ಪಡೆ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿಗಳು ಹರಿದಾಡುತ್ತಿವೆ.
ಪುಟ್ಟ ರಾಷ್ಟç ಉಕ್ರೇನ್ ಮೇಲಿನ ಯುದ್ಧ ಒಂದೆರಡು ದಿನದಲ್ಲಿ ಮುಗಿಯಬಹುದು ಎಂಬ ಪುಟಿನ್ ಅವರ ಲೆಕ್ಕಾಚಾರ ತಲೆಕೆಳ ಗಾಗಿದ್ದು, ಉಕ್ರೇನ್ ಸೈನಿಕರು ಮತ್ತು ನಾಗ ರಿಕರು ರಷ್ಯಾ ಪಡೆಗೆ ತೀವ್ರ ಪ್ರತಿರೋಧ ಒಡ್ಡುತ್ತಿದ್ದಾರೆ. ಉಕ್ರೇನ್ ರಾಜಧಾನಿ ಕೀವ್ ಮತ್ತು ಎರಡನೇ ದೊಡ್ಡ ನಗರ ಖಾರ್ಕಿವ್ ಮೇಲೆ ರಷ್ಯಾ ಪಡೆಗಳು ತಕ್ಕಮಟ್ಟಿಗೆ ಪ್ರಾಬಲ್ಯ ಸಾಧಿಸಿದ್ದರೂ ಕೂಡ ಉಕ್ರೇನ್ ಸೈನಿಕರ ಕೆಚ್ಚೆದೆಯ ಪ್ರತಿರೋಧದಿಂದಾಗಿ ರಷ್ಯಾಗೆ ತಾನಂದುಕೊAಡಷ್ಟು ಈ ಯುದ್ಧ ಸಲೀಸಾಗಿಲ್ಲ ಎಂದು ಮನವರಿಕೆಯಾಗುತ್ತಿದೆ. ಮತ್ತೊಂದೆಡೆ ಜಾಗತಿಕ ಸಮುದಾಯ ಗಳಿಂದ ರಷ್ಯಾಗೆ ತೀವ್ರ ವಿರೋಧ ವ್ಯಕ್ತ ವಾಗುತ್ತಿದೆ. ಒಂದೆಡೆ

ಉಕ್ರೇನ್ ಜೊತೆ ಶಾಂತಿ ಮಾತುಕತೆ ನಡೆಸುತ್ತಿದ್ದರೂ, ಮತ್ತೊಂದೆಡೆ ಅಣ್ವಸ್ತç ಪ್ರಯೋಗ ಮಾಡಿ ತನ್ನ ಗೆಲುವನ್ನು ದಾಖಲಿಸಿಕೊಳ್ಳಬೇಕು ಎಂಬ ಹಪಾಹಪಿ ಪುಟಿನ್ ಅವರಲ್ಲಿದೆ ಎಂದು ಹೇಳಲಾಗುತ್ತಿದೆ. “ರಷ್ಯಾಗೆ ಮನ್ನಣೆ ಇಲ್ಲದ ಜಗತ್ತು ನಮಗೆ ಬೇಡ, ನಮ್ಮ ತಂಟೆಗೆ ಯಾರಾದರೂ ಬಂದರೆ ಅಣ್ವಸ್ತç ಪ್ರಯೋಗಿಸಲು ಹಿಂದೆ-ಮುAದೆ ನೋಡು ವುದಿಲ್ಲ” ಎಂದು ನಾಲ್ಕು ವರ್ಷಗಳ ಹಿಂದೆ ಘೋಷಿಸಿದ್ದ ಪುಟಿನ್, ಇದೀಗ ಅದನ್ನು ಕಾರ್ಯಗತ ಮಾಡಲು ಹೊರಟಿದ್ದಾರೆಯೇ ಎಂಬ ಆತಂಕ ಮನೆ ಮಾಡಿದೆ. ಐರೋಪ್ಯ ರಾಷ್ಟçಗಳು ಉಕ್ರೇನ್‌ಗೆ ರಕ್ಷಣಾ ನೆರವಿನ ರೂಪದಲ್ಲಿ ಸಶಸ್ತçಗಳ ಪೂರೈಕೆ ಮಾಡುವುದಾಗಿ ಘೋಷಿಸಿದೆ. ಪುಟ್ಟ ದೇಶದ ಮೇಲೆ ಯುದ್ಧ ಸಾರಿದ್ದು, ಈ ಸಂದರ್ಭ ದಲ್ಲಿ ಹಿಂದಡಿ ಇಟ್ಟರೆ ಅವಮಾನ ಎಂದು ಭಾವಿಸಿರುವ ಪುಟಿನ್, ಅಣ್ವಸ್ತç ಪ್ರಯೋ ಗದಂತಹ ಕಠಿಣ ನಿರ್ಧಾರ ತೆಗೆದುಕೊಂಡರೆ ಆಶ್ಚರ್ಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ರಷ್ಯಾ ಅಣ್ವಸ್ತç ಪ್ರಯೋಗ ಮಾಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಬ್ರಿಟನ್, ಪುಟಿನ್ ಅವರು ಕೇವಲ ಹೆದರಿಸುತ್ತಿದ್ದಾರೆ ಅಷ್ಟೇ ಎಂದು ಹೇಳಿದೆ. ಉಕ್ರೇನ್‌ನ ಗಡಿ ರಾಷ್ಟçವಾಗಿರುವ ಬೆಲಾರಸ್ ರಷ್ಯಾ ಪರ ನಿಲುವು ತಾಳಿದ್ದು, ತನ್ನ ದೇಶದ ಮೂಲಕ ಉಕ್ರೇನ್ ಮೇಲೆ ದಾಳಿ ನಡೆಸಲು ರಷ್ಯಾಗೆ ಅನುವು ಮಾಡಿಕೊಟ್ಟಿದೆ. ಬೆಲಾರಸ್‌ಗೆ ಅಣ್ವಸ್ತçಗಳನ್ನು ಸಾಗಿಸಿ, ಅಲ್ಲಿಂದಲೇ ಉಕ್ರೇನ್ ಮೇಲೆ ದಾಳಿ ಮಾಡುವುದು ರಷ್ಯಾದ ಯೋಜನೆ ಎಂದು ಕೂಡ ವರದಿಗಳು ಹೇಳಿವೆ.

ರಷ್ಯಾ ಸೇನೆ ನಿರ್ಗಮನಕ್ಕೆ ಉಕ್ರೇನ್ ಪಟ್ಟು
ಉಕ್ರೇನ್, ಫೆ. ೨೮- ಬೆಲಾರಸ್‌ನಲ್ಲಿ ಸೋಮವಾರ ರಷ್ಯಾ ಮತ್ತು ಉಕ್ರೇನ್ ನಿಯೋಗದಿಂದ ಶಾಂತಿ ಮಾತುಕತೆಗಳು ಆರಂಭವಾಗಿವೆ. ಈ ಶಾಂತಿ ಮಾತುಕತೆ ಯಲ್ಲಿ ಉಕ್ರೇನ್‌ನ ೭ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಹೇಳಲಾಗಿದ್ದು, ತಕ್ಷಣವೇ ಯುದ್ಧ ವಿರಾಮ ಘೋಷಿಸಿ, ಉಕ್ರೇನ್‌ನಿಂದ ರಷ್ಯಾ ಸೇನಾ ಪಡೆಯನ್ನು ಹಿಂಪಡೆಯಬೇಕು ಎಂದು ಒತ್ತಡ ಹಾಕಿದ್ದಾರೆ ಎಂದು ಹೇಳಲಾಗಿದೆ. ಉಭಯ ರಾಷ್ಟçಗಳ ನಿಯೋಗವು ೩ ಸುತ್ತು ಮಾತುಕತೆ ನಡೆಸಿದ್ದು, ಶಾಂತಿ ಮಾತುಕತೆ ವಿಫಲವಾಗಿದೆ ಎಂದು ಮಾಹಿತಿಗಳು ತಿಳಿಸಿವೆ. ೨ನೇ ಸುತ್ತಿನ ಮಾತುಕತೆ ಅಂತ್ಯಗೊಳ್ಳುತ್ತಿದ್ದAತೆಯೇ ರಷ್ಯಾದ ವಿಶ್ವಸಂಸ್ಥೆ ರಾಯಭಾರಿಯು ಉಕ್ರೇನ್‌ನನ್ನು ವಶಪಡಿಸಿಕೊಳ್ಳುವ ಯಾವುದೇ ಯೋಜನೆ ಮಾಸ್ಕೋ (ರಷ್ಯಾ) ಹೊಂದಿಲ್ಲ ಎಂದು ತಿಳಿಸಿದ್ದಾರೆ. ಈ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲನ್ಸಿ÷್ಕ ಅವರು ಯೂರೋಪಿಯನ್ ಒಕ್ಕೂಟದಲ್ಲಿ ಉಕ್ರೇನ್ ಸದಸ್ಯತ್ವಕ್ಕಾಗಿ ಅರ್ಜಿ ಹಾಕಿದ್ದಾರೆ ಎಂದು ಉಕ್ರೇನ್ ತಿಳಿಸಿದೆ.

Translate »