ರೈಸ್ ಪುಲ್ಲಿಂಗ್ ದಂಧೆಯಲ್ಲಿ ವಂಚಿಸಿದ ವ್ಯಕ್ತಿ ಹತ್ಯೆ
ಮೈಸೂರು

ರೈಸ್ ಪುಲ್ಲಿಂಗ್ ದಂಧೆಯಲ್ಲಿ ವಂಚಿಸಿದ ವ್ಯಕ್ತಿ ಹತ್ಯೆ

March 2, 2022

ಮಳವಳ್ಳಿ, ಫೆ.೨೮-ರೈಸ್ ಪುಲ್ಲಿಂಗ್ ದಂಧೆಯಲ್ಲಿ ವಂಚನೆ ಮಾಡಿದ ವ್ಯಕ್ತಿಯನ್ನು ಹತ್ಯೆ ಮಾಡಿದ ಆರೋಪ ದಡಿ ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ. ಚಂದ್ರ ಶೇಖರ್ ಪುತ್ರ ವೈದ್ಯ ಡಾ. ಶ್ರೀಕಾಂತ್ (೪೨) ಸೇರಿದಂತೆ ಎಂಟು ಮಂದಿಯನ್ನು ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ದ್ದಾರೆ. ಮಾಜಿ ಶಾಸಕ ಪುತ್ರ ಡಾ. ಶ್ರೀಕಾಂತ್, ಗ್ರಾಪಂ ಮಾಜಿ ಸದಸ್ಯ ಕುಮಾರ್ (೪೦), ಅಭಿಷೇಕ್ (೨೬), ಮಂಜುನಾಥ್ ಅಲಿಯಾಸ್ ಮಂಜು (೨೩), ಆನಂದ್ (೨೪), ವಜ್ರಮುನಿ ಅಲಿಯಾಸ್ ವಿಕ್ಕಿ (೨೪), ಪುನೀತ್ (೩೨), ಶಿವ ಅಲಿಯಾಸ್ ಸೋಮಶೇಖರ್ (೩೭) ಬಂಧಿತರಾಗಿದ್ದು, ಇವರುಗಳು ಕೊಳ್ಳೇಗಾಲ ಮೂಲದ ಸಲೀಂ (೪೦) ಎಂಬಾತನನ್ನು ಹತ್ಯೆಗೈದು ಶವವನ್ನು ಟಾರ್ಪಲ್‌ನಲ್ಲಿ ಸುತ್ತಿ ಮಳವಳ್ಳಿ ತಾಲೂಕು ಪಂಡಿತಹಳ್ಳಿ ಬಳಿ ಹೆದ್ದಾರಿ ಬದಿಯಲ್ಲಿ ಬಿಸಾಕಿದ್ದರು ಎಂದು ಹೇಳಲಾಗಿದೆ.

ವಿವರ: ಕೊಳ್ಳೇಗಾಲ ಮೂಲದ ಸಲೀಂ ಎಂಬಾತ ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚಿಸುತ್ತಿದ್ದ ಎಂದು ಹೇಳಲಾಗಿದೆ. ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಪುತ್ರ ಡಾ. ಶ್ರೀಕಾಂತ್ ಅವರನ್ನು ಸಂಪರ್ಕಿಸಿದ್ದ ಸಲೀಂ ರೈಸ್ ಪುಲ್ಲಿಂಗ್ ವ್ಯವಹಾರವನ್ನು ಭಾರೀ ಮೊತ್ತಕ್ಕೆ ಕುದುರಿಸಿ ೫ ಲಕ್ಷ ರೂ. ಮುಂಗಡವಾಗಿ ಪಡೆದಿದ್ದ ಎಂದು ಹೇಳಲಾಗಿದೆ.
ರೈಸ್ ಪುಲ್ಲಿಂಗ್ ಎಂಬುದು ವಂಚನೆಯ ಜಾಲ ಎಂಬುದನ್ನು ಡಾ. ಶ್ರೀಕಾಂತ್ ಅವರಿಗೆ ಮನವರಿಕೆ ಆಗಿದೆ ಎನ್ನಲಾಗಿದ್ದು, ಫೆ.೭ ರಂದು ಸಲೀಂನನ್ನು ಮೈಸೂರು ತಾಲೂಕು ಇಲವಾಲ ಬಳಿ ಕರೆಸಿಕೊಂಡು ರೈಸ್ ಪುಲ್ಲಿಂಗ್ ವ್ಯವಹಾರದಲ್ಲಿ ತನ್ನನ್ನು ವಂಚಿಸಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಶ್ರೀಕಾಂತ್ ಹಾಗೂ ಅವರ ಜೊತೆಯಲ್ಲಿದ್ದವರು ಸಲೀಂ ಮೇಲೆ ಹಲ್ಲೆ ನಡೆಸಿದಾಗ ಆತ ಸಾವನ್ನಪ್ಪಿದ್ದಾನೆ. ಅಂದು ರಾತ್ರಿ ಶ್ರೀಕಾಂತ್ ತನ್ನ ಕಾರಿನಲ್ಲೇ ಶವವನ್ನಿಟ್ಟುಕೊಂಡು ಫೆ.೮ ರಂದು ಕೆ.ಆರ್.ಪೇಟೆಯಲ್ಲಿ ಸಬ್‌ಇನ್ಸ್ಪೆಕ್ಟರ್ ಆಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದರು ಎಂದು ಹೇಳಲಾಗಿದ್ದು, ಅವರ ಸಲಹೆಯಂತೆ ಸಲೀಂ ಮೃತದೇಹವನ್ನು ಟಾರ್ಪಲ್‌ನಲ್ಲಿ ಸುತ್ತಿ ಫೆ.೮ ರಂದು ರಾತ್ರಿ ಮಳವಳ್ಳಿ ತಾಲೂಕು ಪಂಡಿತಹಳ್ಳಿ ಬಳಿ ಬಿಸಾಡಿ ಹೋಗಿದ್ದಾರೆ. ಪೊಲೀಸ್ ಅಧಿಕಾರಿ ನೀಡಿದ ಸೂಚನೆಯಂತೆ ಇವರು ಬೆಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶವವನ್ನು ಬಿಸಾಡಿ, ಇವರಲ್ಲೇ ಮೂವರು ಬೆಳಕವಾಡಿ ಪೊಲೀಸರಿಗೆ ಶರಣಾಗಬೇಕಾಗಿತ್ತು ಎಂದು ಹೇಳಲಾಗಿದ್ದು, ಠಾಣೆಯ ಸರಹದ್ದಿನ ಬಗ್ಗೆ ಗೊಂದಲ ಮಾಡಿಕೊಂಡ ಈ ವ್ಯಕ್ತಿಗಳು ಬೆಳಕವಾಡಿ ಠಾಣಾ ಸರಹದ್ದಿನಿಂದ ಸುಮಾರು ೫೦೦ ಮೀ ಅಂತರದಲ್ಲಿ ಮೃತದೇಹವನ್ನು ಬಿಸಾಡಿ ಹೋಗಿದ್ದಾರೆ. ಮೃತದೇಹ ಬಿಸಾಡಿದ್ದ ಸ್ಥಳವು ಮಳವಳ್ಳಿ ಗ್ರಾಮಾಂತರ ಠಾಣೆ ಸರಹದ್ದಿಗೆ ಸೇರಿದ್ದಾಗಿದೆ.

ಫೆ.೯ರಂದು ಅಪರಿಚಿತ ಶವವನ್ನು ಕಂಡ ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಮಳವಳ್ಳಿ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಆ ವ್ಯಕ್ತಿಯನ್ನು ಬೇರೆಲ್ಲೋ ಹತ್ಯೆ ಮಾಡಿ, ಶವವನ್ನು ಇಲ್ಲಿಗೆ ತಂದು ಬಿಸಾಡಲಾಗಿದೆ ಎಂಬ ನಿರ್ಧಾರಕ್ಕೆ ಬಂದು ಕೊಲೆ ಪ್ರಕರಣ ದಾಖಲಿಸುವಷ್ಟರಲ್ಲಿಯೇ ಮಂಜುನಾಥ ಅಲಿಯಾಸ್ ಮಂಜು, ಆನಂದ ಮತ್ತು ವಜ್ರಮುನಿ ಅಲಿಯಾಸ್ ವಿಕ್ಕಿ ಎಂಬುವರು ಠಾಣೆಗೆ ಬಂದು ಶರಣಾಗಿದ್ದಾರೆ. ತಾವು ಸಿಕ್ಕಿಹಾಕಿಕೊಳ್ಳಬಾರದು ಎಂಬ ಕಾರಣಕ್ಕಾಗಿಯೇ ಎಲ್ಲಿಯೋ ಕೊಲೆ ಮಾಡಿ, ಬೇರೆಲ್ಲಿಯೋ ಮೃತದೇಹವನ್ನು ಹಂತಕರು ಬಿಸಾಡುವುದು ಸರ್ವೇ ಸಾಮಾನ್ಯ. ಆದರೆ ಕೊಲೆ ಪ್ರಕರಣದ ಎಫ್‌ಐಆರ್ ದಾಖಲಿಸುವ ಹಂತದಲ್ಲೇ ಮೂವರು ಬಂದು ಶರಣಾಗಿದ್ದು ಮಳವಳ್ಳಿ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ರಾಜೇಶ್ ಅವರಲ್ಲಿ ಸಂಶಯವನ್ನುAಟು ಮಾಡಿದೆ. ಹಂತಕರು ಯಾರೋ ಪ್ರಭಾವಿಗಳಾಗಿದ್ದು, ಈ ಮೂವರನ್ನು ಶರಣಾಗುವಂತೆ ಮಾಡಿರಬಹುದು ಎಂದು ಶಂಕಿಸಿದ ಇನ್ಸ್ಪೆಕ್ಟರ್ ರಾಜೇಶ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಹೊರಬಿದ್ದಿದೆ ಎಂದು ಮೂಲಗಳು ತಿಳಿಸಿವೆ. ಮಳವಳ್ಳಿ ಉಪವಿಭಾಗದ ಡಿವೈಎಸ್ಪಿ ಲಕ್ಷಿö್ಮÃನಾರಾಯಣ ಮಾರ್ಗದರ್ಶನದಲ್ಲಿ ಕೂಲಂಕುಷವಾಗಿ ತನಿಖೆ ನಡೆಸಿದ ಪೊಲೀಸರು, ಶರಣಾಗಿದ್ದ ಮೂವರು ನೀಡಿದ ಸುಳಿವಿನ ಮೇರೆಗೆ ಭಾನುವಾರ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಪುತ್ರ ಡಾ. ಶ್ರೀಕಾಂತ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ ನಂತರ, ಅವರೂ ಸೇರಿದಂತೆ ೮ ಮಂದಿಯನ್ನು ಬಂಧಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ನನ್ನ ಮಗನ ಪಾತ್ರವಿಲ್ಲ. ಆತನ ಸ್ನೇಹಿತ ಕುಮಾರ್ ಎಂಬಾತನಿಗೆ ಯಾರಿಂದಲೋ ಹಣ ಬರಬೇಕಾಗಿತ್ತಂತೆ. ಆ ವಿಚಾರವಾಗಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಇತ್ಯರ್ಥ ಪಡಿಸುವಂತೆ ಆತ ನನ್ನ ಮಗನನ್ನು ಕೇಳಿಕೊಂಡಿದ್ದ. ಹೀಗಾಗಿ ನನ್ನ ಮಗ ಹೋಗಿದ್ದ. ಆದರೆ, ಯಾವುದೋ ವ್ಯವಹಾರ ನಡೆಸುತ್ತಿದ್ದ ಬೆಂಗಳೂ ರಿನ ಕೆಲವು ವ್ಯಕ್ತಿಗಳು ಅಲ್ಲಿಗೆ ಬಂದಿದ್ದಾರೆ. ಅವರ ನಡುವೆ ಗಲಾಟೆ ನಡೆದು, ಈಗ ಕೊಲೆಯಾಗಿರುವ ವ್ಯಕ್ತಿಯನ್ನು ಹೊಡೆದಿದ್ದಾರೆ. ಆ ಸಂದರ್ಭದಲ್ಲಿ ನನ್ನ ಮಗ ಹೊಡೆಯ ಬೇಡವೆಂದು ಬಿಡಿಸಲೂ ಪ್ರಯತ್ನಿಸಿದ್ದಾನೆ. ಆ ನಂತರ ಅವನೇ ಚಿಕಿತ್ಸೆಯೂ ಕೊಡಿಸಿದ್ದಾನೆ. ದುರಾದೃಷ್ಟವಶಾತ್ ವ್ಯಕ್ತಿ ಮೃತಪಟ್ಟು ಕೊಲೆ ಕೇಸ್ ಆಗಿದೆ. ನನ್ನ ಮಗನಿಗೂ ಕೊಲೆಗೂ ಯಾವುದೇ ಸಂಬAಧವಿಲ್ಲದಿದ್ದರೂ ಘಟನೆ ನಡೆದ ಸ್ಥಳದಲ್ಲಿ ಆತ ಇದ್ದ ಕಾರಣದಿಂದ ಪೊಲೀಸರು ಬಂಧಿಸಿದ್ದಾರೆ. -ಕೆ.ಬಿ. ಚಂದ್ರಶೇಖರ್, ಮಾಜಿ ಶಾಸಕ.

Translate »