ಮೈಸೂರು ವಿವಿಯಿಂದ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ ಪದವಿ, ಸ್ನಾತಕೋತ್ತರ ಹಂತದಲ್ಲೇ ಸಂಶೋಧನೆಗೆ ಆದ್ಯತೆ ನೀಡಬೇಕು
ಮೈಸೂರು

ಮೈಸೂರು ವಿವಿಯಿಂದ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ ಪದವಿ, ಸ್ನಾತಕೋತ್ತರ ಹಂತದಲ್ಲೇ ಸಂಶೋಧನೆಗೆ ಆದ್ಯತೆ ನೀಡಬೇಕು

March 2, 2022

ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಅಶೋಕ್ ಮಿಶ್ರ ಸಲಹೆ

ಮೈಸೂರು, ಫೆ.೨೮(ಆರ್‌ಕೆಬಿ)- ನಮ್ಮ ನಡುವಿನ ಹಲವು ಸಮಸ್ಯೆಗಳಿಗೆ ವಿಜ್ಞಾನ ದಿಂದ ಪರಿಹಾರವಿದೆ. ಹಾಗಾಗಿ ಸರ್ಕಾರ ಪದವಿ ಹಾಗೂ ಸ್ನಾತಕೋತ್ತರ ಪದವಿ ಹಂತದಿAದಲೇ ಸಂಶೋಧನೆಗೆ ಆದ್ಯತೆ ನೀಡಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಅಶೋಕ ಮಿಶ್ರ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟಿçÃಯ ವಿಜ್ಞಾನ ದಿನಾ ಚರಣೆ ಕಾರ್ಯಕ್ರಮದಲ್ಲಿ `ಸಂಶೋಧನೆ, ಸೃಜನಶೀಲತೆ, ನಾವಿನ್ಯತೆ ಮತ್ತು ಅದರ ಆಚೆ’ ಕುರಿತು ವಿಚಾರ ಮಂಡಿಸಿದರು.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟç ಭಾರತವು ವಿಜ್ಞಾನ ಎಲ್ಲಾ ಸಂಶೋಧನೆ ಗಳ ತಳಹದಿ. ಹೊಸ ತಂತ್ರಜ್ಞಾನದ ಬೆಳವಣ ಗೆ, ಹೊಸ ಆಲೋಚನೆಯನ್ನು ವಿಜ್ಞಾನ ಹುಟ್ಟು ಹಾಕುತ್ತದೆ. ನ್ಯೂಜಿ ಲೆಂಡ್ ಚಿಕ್ಕ ದೇಶವಾದರೂ ಪ್ರತಿವರ್ಷ ಸಾವಿರಾರು ವಿಜ್ಞಾನಿಗಳು ಹೊರ ಬರು ತ್ತಿದ್ದಾರೆ. ಹಾಗಾಗಿ ವಿಜ್ಞಾನ ಕ್ಷೇತ್ರದ ಬೆಳ ವಣ ಗೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಪಿಎಚ್‌ಡಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚ ಬೇಕು. ಹೂಡಿಕೆ ಏಜೆನ್ಸಿಗಳ ಮೂಲಕ ಸಂಶೋಧನಾ ಯೋಜನೆಗಳಿಗೆ ಬಿಡ್ ಮಾಡಬೇಕು ಎಂದು ಸಲಹೆ ನೀಡಿದರು.
ಅಮೆರಿಕ, ಇಂಗ್ಲೆAಡ್, ಜರ್ಮನಿ, ಸಿಂಗಾಪೂರ್ ಹಾಗೂ ಚೀನಾದಂತಹ ರಾಷ್ಟçಗಳು ಉನ್ನತ ಶಿಕ್ಷಣ ಮತ್ತು ಸಂಶೋ ಧನೆಗೆ ಹೆಚ್ಚು ಒತ್ತು ನೀಡುತ್ತಿವೆ. ಹೆಚ್ಚಿನ ಬಂಡವಾಳವನ್ನು ಹೂಡಿಕೆ ಮಾಡುತ್ತಿವೆ. ಈ ನಿಟ್ಟಿನಲ್ಲಿ ಭಾರತವೂ ಸಂಶೋಧನಾ ಸಂಸ್ಥೆಗಳನ್ನು ಹೆಚ್ಚಿಸಬೇಕು. ರಾಷ್ಟಿçÃಯ ಮಟ್ಟದ ಬೇಡಿಕೆಗಳು, ಸಮಸ್ಯೆಗಳನ್ನು ಕುರಿತು ಸಂಶೋಧನೆಗಳನ್ನು ಕೈಗೊಂ ಡಾಗ ಅದಕ್ಕೊಂದು ಮೌಲ್ಯ ಸಿಗುತ್ತದೆ ಎಂದು ತಿಳಿಸಿದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‌ಕುಮಾರ್ ಮಾತನಾಡಿ, ಪ್ರತಿವರ್ಷ ಫೆ.೨೮ರಂದು ದೇಶದಾದ್ಯಂತ ರಾಷ್ಟಿçÃಯ ವಿಜ್ಞಾನ ದಿನ ಆಚರಿಸ ಲಾಗುತ್ತಿದೆ. ೧೯೨೮ರ ಫೆಬ್ರವರಿ ೨೮ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಡಾ. ಸಿ.ವಿ.ರಾಮನ್ ಬೆಳಕಿನ ಚದುರುವಿಕೆಯ ಪರಿಣಾಮಗಳನ್ನು ವಿವರಿಸಿದರು. ಮುಂದೆ ಆ ಸಂಶೋಧನೆ ರಾಮನ್ ಪರಿಣಾಮ (ರಾಮನ್ ಎಫೆಕ್ಟ್) ಎಂದೇ ಜಗತ್ಪçಸಿದ್ಧಿ ಯಾಯಿತು. ಹಲವು ವರ್ಷಗಳ ಸತತ ಅಧ್ಯಯನ ಮತ್ತು ಪ್ರಯೋಗಗಳ ಮೂಲಕ ರಾಮನ್ ಪರಿಣಾಮ ಸಂಶೋ ಧನೆಗೆ ೧೯೩೦ರಲ್ಲಿ ನೊಬೆಲ್ ಪಾರಿ ತೋಷಕ ಸಂದಿತು.

ಇದು ಏಷ್ಯಾದಲ್ಲೇ ಮೊದಲ ನೊಬೆಲ್ ಭೌತವಿಜ್ಞಾನ ಪ್ರಶಸ್ತಿಯಾಗಿದೆ. ೧೯೮೬ ರಿಂದ ದೇಶದಾದ್ಯಂತ ಶಾಲೆ-ಕಾಲೇಜು ಗಳು, ವಿಶ್ವವಿದ್ಯಾಲಯಗಳು, ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳು, ವೈದ್ಯ ಕೀಯ ಹಾಗೂ ತಂತ್ರಜ್ಞಾನ ಕೇಂದ್ರಗಳಲ್ಲಿ ರಾಷ್ಟಿçÃಯ ವಿಜ್ಞಾನ ದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು. ಮೈಸೂರು ವಿವಿ ಕುಲಸಚಿವ ಪ್ರೊ.ಆರ್. ಶಿವಪ್ಪ, ಕುಲಸಚಿವ (ಪರೀಕ್ಷಾಂಗ) ಪ್ರೊ.ಎ.ಪಿ.ಜ್ಞಾನಪ್ರಕಾಶ್ ಉಪಸ್ಥಿತರಿದ್ದರು.

Translate »