ಉಕ್ರೇನ್‍ನಿಂದ ಭಾರತಕ್ಕೆ ಬಂದ ಕೊಡಗಿನ ಮೂವರು ವಿದ್ಯಾರ್ಥಿನಿಯರು
ಕೊಡಗು

ಉಕ್ರೇನ್‍ನಿಂದ ಭಾರತಕ್ಕೆ ಬಂದ ಕೊಡಗಿನ ಮೂವರು ವಿದ್ಯಾರ್ಥಿನಿಯರು

March 3, 2022

ಮಡಿಕೇರಿ, ಮಾ.2- ಯುದ್ಧ ಪೀಡಿತ ಉಕ್ರೇನ್‍ನ ವಿವಿಧ ಪ್ರದೇಶಗಳಿಂದ ಭಾರತ ಸರಕಾರ ‘ಆಪರೇಷನ್ ಗಂಗಾ’ ಹೆಸರಲ್ಲಿ ಏರ್‍ಲಿಫ್ಟ್ ಮಾಡುತ್ತಿದೆ. ಉಕ್ರೇನ್‍ನಲ್ಲಿ ವೈದ್ಯ ಕೀಯ ವಿದ್ಯಾಭ್ಯಾಸಕ್ಕಾಗಿ ತೆರಳಿರುವ ಕೊಡಗು ಜಿಲ್ಲೆಯ ಒಟ್ಟು 14 ವಿದ್ಯಾರ್ಥಿಗಳಿದ್ದು, ಈವರೆಗೆ ಕೊಡಗು ಜಿಲ್ಲೆಯ ಮೂವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ಈ ಪೈಕಿ ಗೋಣಿಕೊಪ್ಪದ ಮದೀಹ ಎಂಬಾಕೆ ಸುರಕ್ಷಿತವಾಗಿ ತವರುಮನೆ ಸೇರಿದ್ದಾಳೆ.

ಮನೆಗೆ ಮರಳಿದ ಮದೀಹ: ವಿರಾಜ ಪೇಟೆ ತಾಲೂಕಿನ ಗೋಣಿಕೊಪ್ಪಲುವಿನ ನಿವಾಸಿ ಗಫೂರ್ ಎಂಬವರ ಪುತ್ರಿ ಎಂ.ಜಿ. ಮದೀಹ(22) ವೈದ್ಯಕೀಯ ವಿದ್ಯಾಭ್ಯಾಸ ಕ್ಕಾಗಿ ಉಕ್ರೇನ್‍ಗೆ ತೆರಳಿದ್ದರು. ಮಾ.1ರಂದು ನಡೆಸಿದ ಏರ್‍ಲಿಫ್ಟ್‍ನಲ್ಲಿ ಮದೀಹ ಅವ ರನ್ನು ದೆಹಲಿಗೆ ಕರೆತರಲಾಗಿತ್ತು. ಬಳಿಕ ಏರ್ ಏಷ್ಯಾ ವಿಮಾನದ ಮೂಲಕ ಮದೀಹ ಬೆಂಗಳೂರು ತಲುಪಿದ್ದು, ಮಂಗಳವಾರ ಬೆಳಗ್ಗೆ ತನ್ನ ತವರು ಮನೆಗೆ ಆಗಮಿಸಿ ದ್ದಾರೆ. ಈ ಸಂದರ್ಭ ಆಕೆಯ ಪೋಷ ಕರು ಕಂಬನಿ ಮಿಡಿಯುತ್ತಾ ಆಕೆಯನ್ನು ಬರಮಾಡಿಕೊಂಡರು.

 

ಯುದ್ಧ ಪ್ರದೇಶದಿಂದ ರಕ್ಷಣೆಯ ಬಳಿಕ ನನಗೆ ಮರು ಜನ್ಮ ಸಿಕ್ಕಿದಂತಾಗಿದೆ. ಇದಕ್ಕಾಗಿ ಭಾರತ ಸರಕಾರ ಮತ್ತು ಭಾರ ತೀಯ ರಾಯಭಾರ ಕಚೇರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಮದೀಹ ಹೇಳಿ ದರು. ಕನ್ನಡಿಗ ವಿದ್ಯಾರ್ಥಿನಿ ನವೀನ್ ಸಾವು ತುಂಬಾ ಬೇಸರ ತಂದಿದೆ ಎಂದು ವಿಷಾದಿಸಿದ ಮದೀಹ, ಉಳಿದ ವಿದ್ಯಾರ್ಥಿ ಗಳನ್ನು ಕೂಡ ಸರ್ಕಾರ ಆದಷ್ಟು ಬೇಗ ರಕ್ಷಿಸಿ ಕರೆತರಲಿ ಎಂದು ಆಶಿಸಿದರು.

ಮದೀಹ ತಾಯಿ ಮಾತನಾಡಿ, ಉಕ್ರೇನ್ ಯುದ್ಧವನ್ನು ನೋಡುವಾಗ ತುಂಬಾ ಭಯ ವಾಗುತ್ತಿತ್ತು. ಇದೀಗ ನನ್ನ ಮಗಳು ಮನೆಗೆ ತಲುಪಿದ್ದು ತುಂಬಾ ಸಂತೋಷವಾಗಿದೆ. ಉಕ್ರೇನ್‍ನಲ್ಲಿ ಬೇರೆ ಮಕ್ಕಳು ಕೂಡ ಇದ್ದಾರೆ. ಅದರ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ನೋಡು ವಾಗ ದುಃಖವಾಗುತ್ತದೆ. ನನ್ನ ಮಗಳನ್ನು ಕರೆತಂದಂತೆ ಆ ಮಕ್ಕಳನ್ನೂ ಕರೆತರ ಬೇಕು ಎಂದು ಮನವಿ ಮಾಡಿದರು.

ದೆಹಲಿಗೆ ಬಂದ ಇನ್ನಿಬ್ಬರು: ಕೊಡಗು ಜಿಲ್ಲೆ ಪೊನ್ನಂಪೇಟೆಯ ವಿ.ಜೆ.ಶಿನ್ಯಾ(22) ಮತ್ತು ವಿರಾಜಪೇಟೆ ತಾಲೂಕಿನ ಗೋಣಿ ಕೊಪ್ಪದ ಕಾವೇರಿ ಬಡಾವಣೆ ನಿವಾಸಿ ಆಲಿಷಾ(22) ಎಂಬವರನ್ನು ಏರ್‍ಲಿಫ್ಟ್ ಮೂಲಕ ದೆಹಲಿಗೆ ಕರೆತರಲಾಗಿದೆ. ಈ ವಿದ್ಯಾರ್ಥಿಗಳು ಇನ್ನಷ್ಟೇ ತವರು ಮನೆ ಸೇರಬೇಕಿದೆ ಎಂದು ತಿಳಿದು ಬಂದಿದೆ. ಆಲಿಶಾ ಉಕ್ರೇನ್-ಪೋಲೆಂಡ್ ಗಡಿಯ ಇವಾನೋ ಫ್ರಾನ್ಸಿಸ್ಕೋ ನಗರದ ಫ್ಲಾಟ್ ಒಂದರಲ್ಲಿ ನೆಲೆಸಿದ್ದರು.

Translate »