ಮೈಸೂರಿನಾದ್ಯಂತ ವೈಭವದಿಂದ ಮಹಾ ಶಿವರಾತ್ರಿ ಆಚರಣೆ
ಮೈಸೂರು

ಮೈಸೂರಿನಾದ್ಯಂತ ವೈಭವದಿಂದ ಮಹಾ ಶಿವರಾತ್ರಿ ಆಚರಣೆ

March 3, 2022

ಮೈಸೂರು,ಮಾ.2(ಎಂಟಿವೈ)- ಮೈಸೂ ರಲ್ಲಿ ಮಂಗಳವಾರ ಎಲ್ಲೆಲ್ಲೂ ಶಿವನಾಮ ಸ್ಮರಣೆ…, ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷದಿಂದ ಕಳೆಗುಂದಿದ್ದ ಹಬ್ಬಗಳು ಶಿವರಾತ್ರಿ ಹಬ್ಬದ ಮೂಲಕ ಮತ್ತೆ ವೈಭವದಿಂದ ಆಚರಿಸಲಾಯಿತು.

ಮೈಸೂರಿನ ವಿವಿಧೆಡೆಯಿರುವ ಶಿವನ ದೇವಾಲಯಗಳಲ್ಲಿ ಮಂಗಳವಾರ ಮುಂಜಾನೆ ಯಿಂದ ಬುಧವಾರದ ಮುಂಜಾನೆವರೆಗೂ ಭಕ್ತರು ಶ್ರದ್ಧಾಭಕ್ತಿಯಿಂದ ಶಿವರಾತ್ರಿ ಆಚರಿ ಸಿದರು. ಕೆಲವೆಡೆ ರಾತ್ರಿಯಿಡಿ ಭಜನೆ, ಹರಿಕಥೆ ಆಯೋಜಿಸುವ ಮೂಲಕ ಜಾಗರಣೆಗೆ ವೇದಿಕೆ ಮಾಡಿಕೊಡುವ ಮೂಲಕ ಶಿವ ನಾಮಸ್ಮರಣೆ ಮಾಡಲಾಯಿತು.

ಅರಮನೆ ಅಂಗಳದಲ್ಲಿ ಮನೆ ಮಾಡಿದ ಸಂಭ್ರಮ: ಪ್ರತಿವರ್ಷದಂತೆ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಅರಮನೆ ಆವರಣ ದಲ್ಲಿರುವ ತ್ರಿನೇಶ್ವರಸ್ವಾಮಿ ದೇವಾಲಯದಲ್ಲಿ ಶಿವಲಿಂಗಕ್ಕೆ 11 ಕೆಜಿ ತೂಕದ ಚಿನ್ನದ ಕೊಳಗ ಧಾರಣೆ ಮಾಡಿ ವಿಶೇಷ ಪೂಜೆ ಮಾಡ ಲಾಯಿತು. ಪ್ರತಿವರ್ಷದಂತೆ ಈ ಬಾರಿಯೂ ತ್ರಿನೇಶ್ವರಸ್ವಾಮಿ ದೇವಾಲಯದಲ್ಲಿ ನಡೆದ ವಿಶೇಷ ಪೂಜಾ ಮಹೋತ್ಸವದಲ್ಲಿ ಸಾವಿ ರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.

ಶಿವರಾತ್ರಿ ಅಂಗವಾಗಿ ತ್ರಿನೇಶ್ವರನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದಲೇ ನಾಲ್ಕು ಯಾಮ ಗಳಲ್ಲಿ ಅಭಿಷೇಕ ನಡೆಸಲಾಯಿತು. ಬಳಿಕ ಅಭಿಷೇಕ, ಬಿಲ್ವಾರ್ಚನೆ, ಶಿವಸಹಸ್ರನಾಮ, ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳಗ್ಗೆ 6 ಗಂಟೆಗೆ ರಾಜವಂಶಸ್ಥರ ಹೆಸರಲ್ಲಿ ಪೂಜೆ ಸಲ್ಲಿಸಿದ ಬಳಿಕ 6.30ರಿಂದ ಭಕ್ತರಿಗೆ ದರ್ಶನ ಮಾಡಲು ಅವಕಾಶ ಕಲ್ಪಿಸಲಾ ಯಿತು. ಮಧ್ಯರಾತ್ರಿ 12ರವರೆಗೆ ಭಕ್ತರಿಗೆ ಚಿನ್ನದ ಮುಖವಾಡ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಭಕ್ತರು ಸರದಿ ಸಾಲಲ್ಲಿ ಆಗ ಮಿಸಿ ದರ್ಶನ ಪಡೆದರು. ದೇವಾಲಯ ದಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾ ಯಿತು. ತ್ರಿನೇಶ್ವರಸ್ವಾಮಿ ದೇವಾಲಯಕ್ಕೆ ಬರುವ ಭಕ್ತರಿಗೆ ಅರಮನೆಯ ಎಲ್ಲಾ ದ್ವಾರ ಗಳಿಂದಲೂ ಪ್ರವೇಶಾವಕಾಶ ಕಲ್ಪಿಸಲಾಗಿತ್ತು.

ರಾಜವಂಶಸ್ಥರ ಭೇಟಿ: ಅರಮನೆ ಆವ ರಣದಲ್ಲಿರುವ ತ್ರಿನೇಶ್ವರಸ್ವಾಮಿ ದೇವಾ ಲಯಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಮ್ಮ ಪುತ್ರ ಆದ್ಯವೀರ್ ಅವರೊಂದಿಗೆ ಬಂದು ದರ್ಶನ ಪಡೆದರು. ಈ ವೇಳೆ ದೇವಾಲಯಕ್ಕೆ ದರ್ಶನಕ್ಕಾಗಿ ಆಗಮಿಸಿದ್ದ ಭಕ್ತರು ಯದುವೀರ್ ಅವರಿಗೆ ನಮಿಸಿದರು.

101 ಲಿಂಗಗಳಿಗೆ ವಿಶೇಷ ಪೂಜೆ: ಮೈಸೂ ರಿನ ರಾಮಾನುಜ ರಸ್ತೆಯಲ್ಲಿರುವ ಗುರು ಕುಲದಲ್ಲಿ 101 ಲಿಂಗಗಳಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು. ಹಾಲು, ಮೊಸರು, ತುಪ್ಪದ ಅಭಿಷೇಕ ಮಾಡ ಲಾಗಿದ್ದು, ಬುಧವಾರ ಮುಂಜಾನೆವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಭಕ್ತರು ಬಿಲ್ವಪತ್ರೆ ಸಮರ್ಪಿಸಿ ದರ್ಶನ ಪಡೆದರು.

ವಿಶೇಷ ಅಲಂಕಾರ: ನಗರದ ಸರಸ್ವತಿ ಪುರಂನಲ್ಲಿರುವ ಚಂದ್ರಮೌಳೇಶ್ವರ ದೇವಾ ಲಯವನ್ನು ವಿವಿಧ ಬಣ್ಣಗಳ ಹೂಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲೇ ಭಕ್ತರು ದರ್ಶನ ಪಡೆದರು. ರಥ ಮಾದರಿಯ ವಾಹನದಲ್ಲಿ ದೇವರ ಮೂರ್ತಿ ಯನ್ನಿಟ್ಟು ಸುತ್ತಮುತ್ತಲಿನ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು.

ಶಿವನಾಮ ಸ್ಮರಣೆ: ಮೈಸೂರಿನ ಶ್ರೀ ಸ್ವರ್ಣ ನರಸಿಂಹದತ್ತ ಸಾಯಿ ಪೀಠಿಕಾ ವತಿಯಿಂದ ಜಯನಗರದಲ್ಲಿರುವ ಶ್ರೀರಾಮಮಂದಿರ ದಲ್ಲಿ ವಿಶೇಷ ಪೂಜೆ ಮತ್ತು ಜಾಗರಣೆ ನಡೆಯಿತು. ವೆಂಕಟಾಚಲ ಅವಧೂತರ ಆಶೀರ್ವಾದ ಮತ್ತು ಅರ್ಜುನ ಅವಧೂತರ ಸಾನ್ನಿಧ್ಯದಲ್ಲಿ ಸಂಜೆ 6ರಿಂದ ಬುಧವಾರ ಮುಂಜಾನೆವರೆಗೂ ವಿಶೇಷ ಪೂಜೆ, ಶಿವ ನಾಮ ಸ್ಮರಣೆ, ಬಿಲ್ವಪತ್ರ ಅರ್ಚನೆ, ರುದ್ರಾ ಭಿಷೇಕ, ಜಾಗರಣೆ, ಭಜನೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ರುದ್ರಾಭಿಷೇಕ: ಉದಯಗಿರಿಯಲ್ಲಿರುವ ಶ್ರೀರಾಮ ಧಾಮದಲ್ಲಿ ರುದ್ರಾಭಿಷೇಕ, ಸಹಸ್ರಾರ್ಚನೆ, ಅಭಿಷೇಕ, ಸಾಮೂಹಿಕ ಮೃತ್ಯುಂಜಯ ಹೋಮ ನಡೆಯಿತು.

ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಮೈಸೂ ರಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಮಹೋತ್ಸವ ಜರುಗಿತು. ರಾಮಾ ನುಜ ರಸ್ತೆಯಲ್ಲಿರುವ ಗುರುಕುಲ, ಶ್ರೀ ಕಾಮಕಾಮೇಶ್ವರಿ, ಅಶೋಕ ರಸ್ತೆಯಲ್ಲಿ ರುವ ಶ್ರೀ ಮುಕ್ಕಣ್ಣೇಶ್ವರ ಸ್ವಾಮಿ ದೇವಾ ಲಯ, ಲಷ್ಕರ್ ಮೊಹಲ್ಲಾದ ಗರಡಿ ಕೇರಿಯ ಶ್ರೀ ಮಲೈ ಮಹದೇಶ್ವರಸ್ವಾಮಿ ದೇವಾಲಯ, ಹಾಲಿನ ಡೈರಿ ಬಳಿಯಿ ರುವ ಮಹದೇಶ್ವರ ದೇವಾಲಯ, ಕುಂಬಾರ ಕೊಪ್ಪಲು, ಪಡುವಾರಹಳ್ಳಿ, ಸುಣ್ಣದಕೇರಿ, ಕೆ.ಟಿ.ಸ್ಟ್ರೀಟ್‍ನಲ್ಲಿರುವ ಮಹದೇಶ್ವರ ದೇವಾ ಲಯ, ಹಳೆ ಸಂತೆಪೇಟೆಯ ಶ್ರೀ ಪ್ರಸನ್ನ ನಂಜುಂಡೇಶ್ವರಸ್ವಾಮಿ ದೇವಸ್ಥಾನ, ವಿ.ವಿ.ಮೊಹಲ್ಲದ ಶ್ರೀ ಚಂದ್ರ ಮೌಳೇಶ್ವರ ಸ್ವಾಮಿ ದೇವಸ್ಥಾನ, ನಂಜರಾಜ ಬಹದ್ದೂರ್ ಛತ್ರ ಬಳಿಯ ಅಮೃತೇಶ್ವರ, ಗಂಗೋತ್ರಿ ಬಡಾವಣೆಯ ಮಾರುತಿ ದೇವಸ್ಥಾನ, ಖಿಲ್ಲೆ ಮೊಹಲ್ಲಾ ಭೈರವೇಶ್ವರಸ್ವಾಮಿ ದೇವ ಸ್ಥಾನ, ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನ, ನಾಗಲಿಂಗೇಶ್ವರ ಮಠ, ವಿಜಯನಗರದ ಯೋಗಾ ನರಸಿಂಹ ಸ್ವಾಮಿ ದೇವಾಲಯ, ದೇವರಾಜ ಮೊಹಲ್ಲಾ ದಿವಾನ್ಸ್ ರಸ್ತೆ ಅಮೃತೇಶ್ವರ ದೇವಾಲಯ, ಕುರುಬಾರಹಳ್ಳಿ ಮಲೆ ಮಹದೇಶ್ವರ ಸ್ವಾಮಿ ದೇವಾಲಯ, ಗಣಪತಿ ಸಚ್ಚಿದಾ ನಂದ ಆಶ್ರಮ, ಚಾಮುಂಡಿಬೆಟ್ಟದ ಮಹಾ ಬಲೇಶ್ವರ ಸ್ವಾಮಿ ದೇವಾಲಯಗಳಲ್ಲೂ ಶಿವರಾತ್ರಿ ಮಹೋತ್ಸವದ ವಿಶೇಷ ಪೂಜಾ ಮಹೋತ್ಸವ ಜರುಗಿದವು.

ಸುತ್ತೂರು ಶ್ರೀಕ್ಷೇತ್ರ: ಸುತ್ತೂರು ಶ್ರೀ ಕ್ಷೇತ್ರ ದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು. ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳವರ ಕರ್ತೃಗದ್ದುಗೆ, ಮಹದೇ ಶ್ವರ, ಸೋಮೇಶ್ವರ, ವೀರಭದ್ರೇಶ್ವರ, ನಂಜುಂ ಡೇಶ್ವರ ಮತ್ತು ನಾರಾಯಣಸ್ವಾಮಿ ದೇವಸ್ಥಾನ ಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು.

Translate »