ಮೈಸೂರು

ಮೈಸೂರಲ್ಲಿ ಅಪರೂಪದ ಹಾರುವ ಹಾವು!

June 6, 2020
  •  ರಾಮಾನುಜ ರಸ್ತೆ ಮನೆಯಲ್ಲಿ ಪತ್ತೆ
  • ಮರದಿಂದ ಮರಕ್ಕೆ ಜಿಗಿಯುವ ಹಾವು ಬಲು ವರ್ಣರಂಜಿತ

ಮೈಸೂರು, ಜೂ.5(ಎಂಟಿವೈ)- ಎಲ್ಲೆಡೆ ವಿಶ್ವ ಪರಿಸರ ದಿನಾಚರಣೆ ಸಂಭ್ರಮ ವಿದ್ದರೆ, ಮೈಸೂರಿನ ಮನೆಯೊಂದರಲ್ಲಿ ಪಶ್ಚಿಮ ಘಟ್ಟ ದಲ್ಲಿ ಕಂಡು ಬರುವ ಅಲಂಕೃತ ಹಾರುವ ಹಾವು (ಆರ್ನೆಟ್ ಫ್ಲೈಯಿಂಗ್ ಸ್ನೇಕ್) ಕಾಣಿಸಿಕೊಂಡು ಅಚ್ಚರಿಯೊಂದಿಗೆ ಕುತೂಹಲ ಕೆರಳಿಸಿದೆ.

ಮೈಸೂರಿನ ರಾಮಾನುಜ ರಸ್ತೆಯ 7ನೇ ಕ್ರಾಸ್ ನಿವಾಸಿ ಎಸ್.ವೆಂಕಟರಾಮು ಎಂಬವರ ಮನೆಯ ಮುಂಬಾಗಿ ಲಿನ ಗ್ರಿಲ್‍ಗೆ ಸುತ್ತಿಕೊಂಡು ಈ ಹಾವು ದರ್ಶನ ನೀಡಿದೆ. 3-4 ಅಡಿ ಉದ್ದವಿದ್ದ ಹಾವಿನ ಮೈ ಮೇಲೆ ಅಲಂಕಾರಿಕ ಆಭರಣದಂತೆ ಚಿತ್ರವಿದೆ. ಬಾಗಿಲಿನ ಸುತ್ತ ಅಧರ್À ಗಂಟೆಗೂ ಹೆಚ್ಚು ಸುತ್ತಾಡಿದ ಈ ಹಾವು ನೋಡಲು ಆಕರ್ಷಕವಾಗಿದ್ದರಿಂದ ಮನೆ ಮಂದಿ, ಸ್ತಳೀಯರು ಅಪರೂಪದ ಅತಿಥಿಯನ್ನು ಕಂಡು ಸಂಭ್ರಮಿಸಿದ್ದಾರೆ.

ಕೆಲಕಾಲ ಅಲ್ಲಿಯೇ ಸುತ್ತಾಡಿದ ಈ ಹಾವು ವಿರ ಮಿಸಿದೆ. ಮನೆಯವರಾದ ಎಸ್.ವೆಂಕಟರಾಮು, ಉರಗ ರಕ್ಷಕ ಸ್ನೇಕ್ ಶಿವು ಅವರಿಗೆ ಮಾಹಿತಿ ನೀಡಿದ್ದಾರೆ. ಕೆಲ ಸಮಯದ ನಂತರ ಬಂದ ಸ್ನೇಕ್ ಶಿವು ಹಾವನ್ನು ರಕ್ಷಿಸಲು ಹುಡುಕಾಡಿದ್ದಾರೆ. ಆದರೆ ಆ ಹಾವು ಎಲ್ಲರ ಕಣ್ತಪ್ಪಿಸಿ ಮನೆಯ ಸೂರಿನ ಮೇಲ್ಭಾಗದಿಂದ ಪರಾರಿಯಾಗಿದೆ. ಇದರಿಂದ ಗಂಟೆಗಟ್ಟಲೆ ಕಾಲ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಏನದು ಹಾರುವ ಹಾವು: ವಿಷರಹಿತ, ಅಲಂಕೃತ ಹಾರುವ ಹಾವು(ಆರ್ನೆಟ್ ಫ್ಲೈಯಿಂಗ್ ಸ್ನೇಕ್) ಸಾಮಾನ್ಯವಾಗಿ ಪಶ್ಚಿಮ ಘಟ್ಟ, ನೀಲಗಿರಿ(ಊಟಿ), ಬಿಹಾರ, ಒಡಿಸ್ಸಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಈಶಾನ್ಯ ಭಾರತ, ಆಗ್ನೇಯ ಏಷ್ಯಾ ದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮೈಮೇಲೆ ವಿವಿಧ ಬಣ್ಣಗಳ ಚಿತ್ತಾಕರ್ಷವಿರುವ ಈ ಹಾವನ್ನು ಆಭರಣದ ಹಾವು ಎಂತಲೂ ಕರೆಯುತ್ತಾರೆ. ಮರದಿಂದ ಮರಕ್ಕೆ ಹಾರುವ ಈ ಹಾವು ಸಣ್ಣ ಸಣ್ಣ ಪಕ್ಷಿಗಳ ಗೂಡಿಗೆ ಲಗ್ಗೆ ಇಟ್ಟು ಮೊಟ್ಟೆ ತಿನ್ನುವ ಪರಿ ಪಾಠ ಅನುಸರಿಸುತ್ತಿದೆ. ಹಲವು ಬಗೆಯ ಬಣ್ಣದಲ್ಲಿ ಈ ಹಾವು ಕಾಣಿಸಿಕೊಳ್ಳುತ್ತದೆ.

ಮೈಸೂರಿಗೆ ಬಂದದ್ದು ಹೇಗೆ?: ಮೈಸೂರಲ್ಲಿ ಹಾರುವ ಹಾವು ಕಾಣಿಸಿಕೊಂಡಿ ರುವುದು ಇದೇ ಮೊದಲು. ರಾಮಾನುಜ ರಸ್ತೆಯ ಮನೆಯೊಂದರಲ್ಲಿ ಕಾಣಿಸಿಕೊಂಡಿರು ವುದು ಅಚ್ಚರಿ ಮೂಡಿಸಿದೆ. ಲಾಕ್‍ಡೌನ್ ಹಿನ್ನೆಲೆ ಯಾವುದಾದರೂ ವಾಹನ ಊಟಿ ಅಥವಾ ಪಶ್ಚಿಮ ಘಟ್ಟದಲ್ಲಿ ಹಲವು ದಿನ ನಿಂತಿದ್ದಾಗ ಈ ಹಾವು ಸೇರಿಕೊಂಡಿರಬಹುದು. ನಿಯಮ ಸಡಿಲಿಸಿದ ನಂತರ ಆ ವಾಹನ ಮೈಸೂರಿನ ರಾಮಾನುಜ ರಸ್ತೆಯ ಅಸುಪಾಸಲ್ಲಿ ನಿಂತಿರಬಹುದು. ಆಗ ವಾಹನದಿಂದ ಹೊರ ಬಂದಿರುವ ಹಾವು ಸುತ್ತಾಡಿ, ಎಸ್.ವೆಂಕಟ ರಾಮು ಅವರ ಮನೆಗೆ ಬಂದಿರಬಹುದು ಎಂದು ಉರಗ ತಜ್ಞರ ಅಭಿಪ್ರಾಯ.

Translate »