ಮಡಿಕೇರಿ: ಜಿಲ್ಲಾಡಳಿತ ಹಾಗೂ ಬೆಂಗಳೂರಿನ ಇ-ಆಡಳಿತ ಕೇಂದ್ರದ ಸಹ ಯೋಗದೊಂದಿಗೆ ನ.19 ರಿಂದ 24 ರವರೆಗೆ ನಗರದ ನಗರಸಭಾ ಕಟ್ಟಡದ ಆವರಣದಲ್ಲಿ ಆಧಾರ್ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಸರ್ಕಾರದ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆ ಅತ್ಯಂತ ಪ್ರಯೋಜನಕಾರಿಯಾಗಿ ರುವ ಹಿನ್ನಲೆಯಲ್ಲಿ ಆಧಾರ್ ನೋಂದಣಿ ಮಹತ್ವ ಪಡೆದಿದೆ. ಜಿಲ್ಲೆಯ ನಾಗರಿಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಆಧಾರ್ ತಿದ್ದುಪಡಿ, ಅಪಡೇಷನ್, ಹೊಸ ನೋಂದಣಿ ಹಾಗೂ ಆಧಾರ್‍ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಪಡಿತರ ಚೀಟಿ, ಬ್ಯಾಂಕ್ ಪಾಸ್‍ಪುಸ್ತಕ,…
ನೇರ ಹಣ ವರ್ಗಾವಣೆಗೆ ಆಧಾರ್ ಇ-ಕೆವೈಸಿ ಬಳಸಿ
October 29, 2018ನವದೆಹಲಿ: ಸರ್ಕಾರದ ಸಬ್ಸಿಡಿ ಮತ್ತು ಇತರೆ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಮಾಡಲು ಆಧಾರ್ ಇ-ಕೆವೈಸಿ ಬಳಸುವಂತೆ ಬ್ಯಾಂಕ್‍ಗಳಿಗೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಸ್ಪಷ್ಟಪಡಿಸಿದೆ. ಸರ್ಕಾರದ ಕಲ್ಯಾಣ ಯೋಜನೆಗಳನ್ನು ಹೊರತುಪಡಿಸಿ ಇತರೆ ಸೌಲಭ್ಯ ಪಡೆ ಯಲು ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶದ ನಂತರ ಬ್ಯಾಂಕ್‍ಗಳು ಕಾನೂನು ಸಲಹೆ ಕೇಳಿ ಯುಐಡಿಎಐಗೆ ಪತ್ರ ಬರೆದಿದ್ದವು. ಈ ಸಂಬಂಧ ಕಳೆದ ವಾರ ಬ್ಯಾಂಕ್‍ಗಳಿಗೆ ಪತ್ರ ಬರೆದಿರುವ ಯುಐಡಿಎಐ, ಯಾವುದಕ್ಕೆ ಮತ್ತು…
ಬ್ಯಾಂಕ್, ಮೊಬೈಲ್‍ಗೆ ಆಧಾರ್ ಲಿಂಕ್ ಕಡ್ಡಾಯ ಮುಂದುವರಿಕೆ
October 7, 2018ನವದೆಹಲಿ: ಬ್ಯಾಂಕ್ ಮತ್ತು ಮೊಬೈಲ್‍ಗೆ ಆಧಾರ್ ಲಿಂಕ್ ಕಡ್ಡಾಯ ನಿಯಮ ಮುಂದು ವರೆಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಸಂಸತ್ ಪಾಸ್ ಮಾಡಿದ ಕಾನೂನು ಇದನ್ನು ಪುನರ್ ಸ್ಥಾಪಿಸಲಿದೆ. ಆದರೆ ಈ ಸಂಬಂಧ ಹೊಸ ಕಾನೂನು ತರುವುದಿಲ್ಲ ಅಂತ ಹೇಳುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಜೇಟ್ಲಿ ಶನಿವಾರ ಹೇಳಿದ್ದಾರೆ. ಕಳೆದ ತಿಂಗಳು ಆಧಾರ್ ಸಾಂವಿಧಾನಿಕ ಮಾನ್ಯತೆಯನ್ನು ಕೋರ್ಟ್ ಎತ್ತಿ ಹಿಡಿದಿತ್ತು.
ಆಧಾರ್‌ಗೆ ಸಾಂವಿಧಾನಿಕ ಮಾನ್ಯತೆ
September 27, 2018ನವದೆಹಲಿ: ಬಹು ನಿರೀಕ್ಷಿತ ಆಧಾರ್ ಸಿಂಧುತ್ವ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದ್ದು, ಆಧಾರ್ ಮೇಲಿನ ದಾಳಿ, ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ಹೇಳುವ ಮೂಲಕ ಆಧಾರ್ ಸಿಂಧುತ್ವವನ್ನು ಎತ್ತಿ ಹಿಡಿದಿದೆ. ಆಧಾರ್ ಸಿಂಧುತ್ವ ಕುರಿತಂತೆ ಸುಪ್ರೀಂ ಕೋರ್ಟಿನಲ್ಲಿ ಇಂದು ಮಹತ್ವದ ತೀರ್ಪು ಹೊರಬಿದ್ದಿದ್ದು, ಅಂತಿಮ ತೀರ್ಪಿನ ವಿವರವನ್ನು ನ್ಯಾಯಮೂರ್ತಿ ಎ.ಕೆ.ಸಿಕ್ರಿ ಓದಿದರು. ‘ಆಧಾರ್ ಮೇಲಿನ ದಾಳಿ ಸಂವಿಧಾನಕ್ಕೆ ವಿರುದ್ಧವಾದುದು. ಆಧಾರ್ ದತ್ತಾಂಶಗಳ ಸೋರಿಕೆ ಅಥವಾ ಅವುಗಳನ್ನು ಕದಿಯುವುದು ಸಂವಿಧಾನಕ್ಕೆ ವಿರುದ್ಧವಾದದ್ದು. ಆಧಾರ್ ಮಾಹಿತಿ ರಕ್ಷಣೆಗೆ ಕೇಂದ್ರ ಸರ್ಕಾರ…
ಎಲ್ಲದಕ್ಕೂ ಕಡ್ಡಾಯವಾಗುತ್ತಾ ಆಧಾರ್?: ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
September 26, 2018ನವದೆಹಲಿ: ವಿಶಿಷ್ಟ ಗುರುತಿನ ಸಂಖ್ಯೆ(ಆಧಾರ್)ಯ ಸಾಂವಿಧಾನಿಕ ಮಾನ್ಯತೆ ಕುರಿತು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪು ಪ್ರಕಟಿಸ ಲಿದೆ. ದೇಶದ ಏಕೈಕ ಬಯೋಮೆಟ್ರಿಕ್ ರಾಷ್ಟ್ರೀಯ ಗುರುತಿನ ಚೀಟಿಯ ಸಾಂವಿ ಧಾನಿಕ ಮಾನ್ಯತೆ ಪ್ರಶ್ನಿಸಿ ದೇಶಾದ್ಯಂತ ಹಲವಾರು ಅರ್ಜಿಗಳು ಸರ್ವೋಚ್ಚ ನ್ಯಾಯಾ ಲಯಕ್ಕೆ ಸಲ್ಲಿಸಲಾಗಿತ್ತು. 38 ದಿನಗಳ ಕಾಲ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ತೀರ್ಪನ್ನು ಕಾಯ್ದಿರಿ ಸಿದ್ದು, ನಾಳೆ ಪ್ರಕಟಿಸಲಿದೆ. ಸುಪ್ರೀಂ ಕೋರ್ಟ್ ಈ…
ಮಾಸಾಶನಕ್ಕೆ ಆಧಾರ್ ಲಿಂಕ್ ಕಡ್ಡಾಯ
September 20, 2018ಸರ್ಕಾರದ ಆದೇಶ ದುರುಪಯೋಗ ತಡೆಗೆ ಕ್ರಮ ಬೆಂಗಳೂರು: ಅಂಗವಿಕಲ, ವಿಧವಾ, ವಯೋವೃದ್ಧ ವೇತನ ಸೇರಿದಂತೆ ಮಾಸಾಶನ ಪಡೆಯಲು ಇನ್ನು ಮುಂದೆ ತಮ್ಮ ಸಂಖ್ಯೆಗಳಿಗೆ ಕಡ್ಡಾಯವಾಗಿ ಆಧಾರ್ ಕಾರ್ಡ್‍ನ್ನು ಜೋಡಿಸಿಕೊಳ್ಳುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ವಯೋವೃದ್ಧರಿಗೆ ನೀಡುತ್ತಿದ್ದ ಮಾಸಾಶನವನ್ನು 600 ರಿಂದ 1000 ರೂಪಾಯಿಗೆ ಹೆಚ್ಚಳ ಮಾಡಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಆಧಾರ್ ಕಡ್ಡಾಯಗೊಳಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ದಿನದ ಕೊಡುಗೆಯಾಗಿ ವಯೋವೃದ್ಧರಿಗೆ ಮಾಸಾಶನ ಹೆಚ್ಚಳ ಮಾಡಿದ್ದು, ಅದು ನವೆಂಬರ್ 1 ರಿಂದ ಜಾರಿಗೆ ಬರಲಿದೆ. ನಕಲು…