ಮೈಸೂರು: ನಗರದ ಬೋಗಾದಿ ಮುಖ್ಯರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ಮಂತ್ರಿಮಂಡಲದ ರಚನೆ ಹಾಗು ಪದಗ್ರಹಣ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.ಶಾಲಾ ಸಂಸ್ಥಾಪಕ ಟಿ.ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಮಂತ್ರಿ ಮಂಡಲದ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮಂತ್ರಿಮಂಡಲದಲ್ಲಿ ಮಂತ್ರಿಗಳು ಹಾಗೂ ನಾಯಕರುಗಳಿಗೆ ಗುರುತರವಾದ ಜವಾಬ್ದಾರಿ ಇರುತ್ತದೆ. ವಿದ್ಯಾರ್ಥಿಗಳು ಇದನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು. ಪ್ರಾಂಶುಪಾಲರಾದ ಶ್ರೀಧರ್‍ರವರು ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜರೀನಾ ಬಾಬುಲ್ ಪ್ರತಿಜ್ಞಾವಿಧಿಯನ್ನು ವಿದ್ಯಾರ್ಥಿಗಳಿಂದ ನೆರವೇರಿಸಿದರು. ಯು.ಮೌನ ಮುಖ್ಯಮಂತ್ರಿಯಾಗಿ,…
ಮೈಸೂರು
ನಗುವನಹಳ್ಳಿ, ಬೋಗಾದಿ ಜನರ ನಿದ್ದೆಗೆಡಿಸಿರುವ ಚಿರತೆಗಳು
May 26, 2018ಮೈಸೂರು: ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿಯಲ್ಲಿ ಚಿರತೆ ಸಾಕು ಪ್ರಾಣ ಗಳ ಬೇಟೆಯಾಡಿದ್ದು, ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಇತ್ತ ಮೈಸೂರು ತಾಲೂಕಿನ ಜಟ್ಟಿಹುಂಡಿ, ಬೋಗಾದಿಯಲ್ಲಿ ಎರಡು ಮರಿಗಳೊಂದಿಗೆ ಚಿರತೆ ಕಾಣ ಸಿಕೊಳ್ಳುವ ಮೂಲಕ ಆತಂಕ ಉಂಟು ಮಾಡಿದೆ. ಕಳೆದ ಎರಡು ವಾರದಿಂದ ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿಯಲ್ಲಿ ಚಿರತೆ ಉಪಟಳ ನೀಡುತ್ತಿದ್ದು, ಗ್ರಾಮಸ್ಥರ ಮೇಕೆ, ಕುರಿ, ನಾಯಿ, ಬೆಕ್ಕು ಹಾಗೂ ಹಂದಿಯನ್ನು ಬೇಟೆಯಾಡಿದೆ. ಗ್ರಾಮದ ನಿವಾಸಿ ಅಣ್ಣಯ್ಯ ಅವರಿಗೆ ಸೇರಿದ ಬೆಕ್ಕು ಮತ್ತು ನಾಯಿಯನ್ನು ಬಲಿ ಪಡೆದಿದೆ. ಅಲ್ಲದೆ…