Tag: Chamundi Hill Road

ಕಾವೇರಿ ಸಿಲ್ಕ್ ಉದ್ಯೋಗ ಎಂಪೋರಿಯಂ ಮಳಿಗೆಗೆ ತಹಶೀಲ್ದಾರ್‌ರಿಂದ ಬೀಗಮುದ್ರೆ
ಮೈಸೂರು

ಕಾವೇರಿ ಸಿಲ್ಕ್ ಉದ್ಯೋಗ ಎಂಪೋರಿಯಂ ಮಳಿಗೆಗೆ ತಹಶೀಲ್ದಾರ್‌ರಿಂದ ಬೀಗಮುದ್ರೆ

October 12, 2018

ಮೈಸೂರು:  ಬಾಡಿಗೆ ಹಣ ಮತ್ತು ಲಾಭಾಂಶ ನೀಡುವ ಸಂಬಂಧ ಉಂಟಾಗಿರುವ ವಿವಾದದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮೈಸೂರಿನ ಚಾಮುಂಡಿಬೆಟ್ಟದ ರಸ್ತೆಯಲ್ಲಿರುವ ಕಾವೇರಿ ಸಿಲ್ಕ್ ಉದ್ಯೋಗ ಎಂಪೋರಿಯಂ ಮಳಿಗೆಗೆ ತಹಶೀಲ್ದಾರ್ ಟಿ.ರಮೇಶ್‍ಬಾಬು ಇಂದು ಬೀಗಮುದ್ರೆ ಮಾಡಿಸಿದರು. ಮಳಿಗೆ ಸ್ವಾಧೀನ ಪಡೆಯುವ ವಿಚಾರದಲ್ಲಿ ಅಕ್ಟೋಬರ್ 6ರಂದು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ದೂರು-ಪ್ರತಿದೂರು ನೀಡಿದ ಹಿನ್ನೆಲೆಯಲ್ಲಿ ನಜರ್‍ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೋಮು ಸೌಹಾರ್ದತೆ ಕಾಪಾಡುವ ದೃಷ್ಟಿ ಹಾಗೂ ನಾಡಹಬ್ಬ…

ವಾಣಿಜ್ಯ ವಹಿವಾಟು ಕೇಂದ್ರವಾಗುತ್ತಿರುವ ಚಾಮುಂಡಿಬೆಟ್ಟದ ರಸ್ತೆ
ಮೈಸೂರು

ವಾಣಿಜ್ಯ ವಹಿವಾಟು ಕೇಂದ್ರವಾಗುತ್ತಿರುವ ಚಾಮುಂಡಿಬೆಟ್ಟದ ರಸ್ತೆ

September 23, 2018

ಮೈಸೂರು: ಪ್ರಮುಖ ಪ್ರವಾಸಿ ತಾಣವೂ ಆದ, ಪವಿತ್ರ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ರಸ್ತೆ, ಇದೀಗ ವ್ಯಾಪಾರ, ವಾಣಿಜ್ಯ ವಹಿವಾಟಿನ ಕೇಂದ್ರವಾಗಿ ಬದಲಾಗುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಭಕ್ತರು, ಪ್ರವಾಸಿಗರು ಹಾಗೂ ಪ್ರಜ್ಞಾವಂತ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳ ನಿರ್ಲಕ್ಷ್ಯ, ಅಧಿಕಾರಿ ವರ್ಗದ ಅಸಡ್ಡೆಯಿಂದಾಗಿ ಪವಿತ್ರ ಕ್ಷೇತ್ರಕ್ಕೆ ತೆರಳುವ ಮಾರ್ಗದಲ್ಲಿ ಹತ್ತಾರು ವ್ಯಾಪಾರ ಮಳಿಗೆಗಳು, ಗೂಡಂಗಡಿಗಳು, ಫಾಸ್ಟ್‍ಫುಡ್ ಗಾಡಿಗಳು ತಳವೂರಿವೆ. ಇನ್ನು ದಸರಾ ಸಂದರ್ಭ ದಲ್ಲಿ ನಾನಾ ವಸ್ತುಗಳ ಮಾರಾಟಕ್ಕೆಂದು ಹೊರಗಿನಿಂದ ಮೈಸೂರಿಗೆ ಬರುವವರೂ ಈ ರಸ್ತೆಯಲ್ಲಿ…

Translate »