ಮೈಸೂರು: ಮೈಸೂ ರಲ್ಲಿ 25 ತಂಡದ ನೂರು ಮಂದಿ ಯುವಕ -ಯುವತಿಯರು ಇಂದು ಪಾರಂಪರಿಕ ನಿಧಿ ಶೋಧ (ಟ್ರೆಷರ್ ಹಂಟ್) ನಡೆಸಿದರು. ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ದ್ವಿಜ ಕನ್ಸರ್ವೇಷನ್ ಸೊಸೈಟಿ ಆಫ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಅದ್ಭುತ ಪಾರಂಪರಿಕ ನಿಧಿ ಶೋಧ ಕಾರ್ಯಕ್ರಮಕ್ಕೆ ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಹೆಚ್.ಪಿ.ಜನಾರ್ಧನ್ ಅವರು ಹಸಿರು…