ಮೈಸೂರು: `ನಾಜೂಕಿನ ನಾರಿ ಜನಜಂಗುಳಿ ಇರುವಲ್ಲಿ ಮೈ ತೋರಿ… ಗಾಳಿಗೂ ಎದುರಿ ತುಳುಕುವಳು ಮಾದ ಕತೆಯ ಬೀರಿ…’ ಈ ರೀತಿ ತಮ್ಮದೇ ಕವನವನ್ನು ವಾಚಿಸುವ ಮೂಲಕ ಹಿರಿಯ ಸಾಹಿತಿ ನಾಡೋಜ ಡಾ.ಹಂಪ ನಾಗರಾಜಯ್ಯ ಸಭಿಕ ರನ್ನು ನಗೆಗಡಲಲ್ಲಿ ತೇಲಿಸಿ ಚಂದುಳ್ಳಿ ಚೆಲುವೆಯೂ ಸಭಾಂ ಗಣದಲ್ಲಿ ಸುಳಿದಾಡುವಂತೆ ಮಾಡಿ ಪುಳಕವಿಟ್ಟರು. ಮೈಸೂರಿನ ಮಾನಸ ಗಂಗೋತ್ರಿಯ ಮೈಸೂರು ವಿವಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶುಕ್ರವಾರ ದಸರಾ ಕವಿಗೋಷ್ಠಿ ಉಪ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮೂರು ದಿನಗಳ ಕಾಲ ನಡೆಯುವ…