Tag: Gopalaswamy hill

ಬಹುಪಾಲು ಭಸ್ಮವಾಯಿತು ಗೋಪಾಲಸ್ವಾಮಿ ಬೆಟ್ಟ
ಮೈಸೂರು

ಬಹುಪಾಲು ಭಸ್ಮವಾಯಿತು ಗೋಪಾಲಸ್ವಾಮಿ ಬೆಟ್ಟ

February 25, 2019

ಬಂಡೀಪುರ: ಬೆಂಕಿಯ ರೌದ್ರ ನರ್ತನ ಭಾನುವಾರವೂ ಮುಂದುವರೆಯಿತು. ರಭಸವಾಗಿ ಬೀಸಿದ ಗಾಳಿಗೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಹಲವು ಗುಡ್ಡಗಳನ್ನು ಆಹುತಿ ಪಡೆದ ಕಾಳ್ಗಿಚ್ಚು, ಅಪಾರ ಪ್ರಮಾಣದ ವನ್ಯಸಂಪತ್ತನ್ನು ನೋಡ ನೋಡುತ್ತಿದ್ದಂತೆ ಹೊಸಕಿ ಹಾಕಿತು. ಶನಿವಾರ ಮೇಲುಕಾಮನಹಳ್ಳಿಯಿಂದ ಬಂಡೀಪುರದ ಕ್ಯಾಂಪಸ್ ಕಡೆ ಸಾಗಿದ ಬೆಂಕಿಯ ಸಾವಿರಾರು ಎಕರೆ ಕಾಡನ್ನು ಆಹುತಿ ಪಡೆದಿತ್ತು. ನಂತರ ಗಾಳಿ ಬೀಸುತ್ತಿದ್ದ ದಿಕ್ಕಿನತ್ತ ಸಾಗಿದ ಬೆಂಕಿ ರಾತ್ರಿಯಿಡೀ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸುತ್ತಮುತ್ತ ಲಿನ ಗುಡ್ಡಗಳನ್ನು ಆವರಿಸುತ್ತಾ ಸಾಗಿತು. ಭಾನುವಾರ ಬೆಳಿಗ್ಗೆ 10 ಗಂಟೆವರೆಗೂ…

ಗೋಪಾಲಸ್ವಾಮಿ ಬೆಟ್ಟದಲ್ಲಿ ಹುಲಿ ಪ್ರತ್ಯಕ್ಷ: ಜನರಲ್ಲಿ ಆತಂಕ
ಚಾಮರಾಜನಗರ

ಗೋಪಾಲಸ್ವಾಮಿ ಬೆಟ್ಟದಲ್ಲಿ ಹುಲಿ ಪ್ರತ್ಯಕ್ಷ: ಜನರಲ್ಲಿ ಆತಂಕ

November 23, 2018

ಗುಂಡ್ಲುಪೇಟೆ:  ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಹುಲಿ ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಎದುರಾಗಿದೆ. ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ತೀವ್ರ ನಿಗಾ ಇಟ್ಟಿದೆ. ಹುಲಿಯ ಕಾಲಿನಲ್ಲಿ ಗಾಯವಾಗಿದ್ದು, ನಾಡಿನತ್ತ ಬಂದಿರುವ ಶಂಕೆ ವ್ಯಕ್ತವಾಗಿದೆ. ಗುರುವಾರ ಸಂಜೆವರೆಗೂ ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚಾರಣೆ ನಡೆಸಿದರೂ ಯಾವುದೇ ಪ್ರಯೋಜ ವಾಗಲಿಲ್ಲ. ಬಳಿಕ, ಮಳೆಯ ಕಾರಣದಿಂದ ಕಾರ್ಯಾಚಾರಣೆ ಸ್ಥಗಿತ ಗೊಳಿಸಲಾಗಿದೆ. ಗೋಪಾಲಸ್ವಾಮಿಬೆಟ್ಟ ಅರಣ್ಯ ವಲಯದ ಹಿರೀಕೆರೆ ಸಮೀಪ ಬುಧವಾರ ಅರಣ್ಯ ಸಿಬ್ಬಂದಿಗೆ ಹುಲಿ…

Translate »