Tag: Hassan

ಮೇ 8ಕ್ಕೆ ಶ್ರೀ ಪಟ್ಟಾಭಿರಾಮಸ್ವಾಮಿ ಬ್ರಹ್ಮರಥೋತ್ಸವ
ಹಾಸನ

ಮೇ 8ಕ್ಕೆ ಶ್ರೀ ಪಟ್ಟಾಭಿರಾಮಸ್ವಾಮಿ ಬ್ರಹ್ಮರಥೋತ್ಸವ

May 6, 2019

ರಾಮನಾಥಪುರ: ದಕ್ಷಿಣಕಾಶಿ ಎಂದೇ ಹೆಸರಾದ ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀಪಟ್ಟಾಭಿರಾಮಸ್ವಾಮಿ ಬ್ರಹ್ಮ ರಥೋತ್ಸವ ಮೇ 8ರಂದು ಸಡ ಗರ ಸಂಭ್ರಮದಿಂದ ನಡೆಯಲಿದೆ. ಬ್ರಹ್ಮರಥೋತ್ಸವದಂದು ಮುಂಜಾನೆಯಿಂದಲೇ ಸ್ವಾಮಿಗೆ ಪಂಚಾಮೃತ ಅಭಿಷೇಕ, ವೇದ ಘೋಷಗಳೊಂದಿಗೆ ಮಹಾ ಮಂಗಳಾರತಿ, ಉತ್ಸವಗಳು ಹಾಗೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಶೇಷ ಪೂಜೆ ನಡೆಯಲಿದೆ. ಈಗಾಗಲೇ ದೇವರ ಸನ್ನಿಧಾನಕ್ಕೆ ಭಕ್ತರ ದಂಡು ಆಗಮಿಸುತ್ತಿದ್ದು, ಇಲ್ಲಿನ ಕಾವೇರಿ ನದಿಯಲ್ಲಿ ಮಿಂದು ದೇವರ ದರ್ಶನ ಪಡೆಯುತ್ತಿದ್ದಾರೆ. ಅಲ್ಲದೇ ಇಲ್ಲಿನ ದೇವಾಲಯದ ಆಡಳಿತ ಮಂಡಳಿ ಆಗಮಿಸುವ ಭಕ್ತರ ಅನುಕೂಲಕ್ಕಾಗಿ…

ಹಾಸನ: ಅಕ್ರಮ ಮತದಾನದ ದೂರು ನೀಡಿದ್ದ ಬಿಜೆಪಿ ಏಜೆಂಟ್ ವಿರುದ್ಧ ಎಫ್‍ಐಆರ್
ಹಾಸನ

ಹಾಸನ: ಅಕ್ರಮ ಮತದಾನದ ದೂರು ನೀಡಿದ್ದ ಬಿಜೆಪಿ ಏಜೆಂಟ್ ವಿರುದ್ಧ ಎಫ್‍ಐಆರ್

May 6, 2019

ಹಾಸನ: ಹೊಳೆನರಸೀ ಪುರ ತಾಲೂಕಿನ 2 ಮತಗಟ್ಟೆಗಳಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ದೂರು ನೀಡಿದ್ದ ಬಿಜೆಪಿ ಬೂತ್ ಏಜೆಂಟ್ ಮಾಯಣ್ಣ ವಿರುದ್ಧ ಎಫ್‍ಐಆರ್ ದಾಖ ಲಾಗಿದೆ. ಬಿಜೆಪಿ ಏಜೆಂಟ್ ಆಗಿದ್ದ ಮಾಯಣ್ಣ ಅವರು ಮತಗಟ್ಟೆ ಸಂಖ್ಯೆ 200 ಹಾಗೂ 277ರಲ್ಲಿ ಅಕ್ರಮ ಮತ ದಾನ ನಡೆದಿದೆ ಎಂದು ಚುನಾವಣಾ ಧಿಕಾರಿಗೆ ದೂರು ನೀಡಿದ್ದರು. ಈ ಸಂಬಂಧ ಪರಿಶೀಲನೆ ನಡೆಸಿದ್ದ ಚುನಾ ವಣಾ ಹಾಗೂ ಪೆÇಲೀಸ್ ಅಧಿಕಾರಿಗಳು ಮಾಯಣ್ಣ ಅವರ ಆರೋಪದಲ್ಲಿ ಹುರುಳಿಲ್ಲ. ಸಾರ್ವಜನಿಕರನ್ನು ದಾರಿ ತಪ್ಪಿಸುವ…

ಸಕಾಲ: ಹಾಸನಕ್ಕೆ ಮೊದಲ ಸ್ಥಾನ ಉಡುಪಿ ದ್ವಿತೀಯ, ಚಿಕ್ಕಮಗಳೂರು ತೃತೀಯ, ಬೀದರ್‍ಗೆ 30ನೇ ಸ್ಥಾನ
ಹಾಸನ

ಸಕಾಲ: ಹಾಸನಕ್ಕೆ ಮೊದಲ ಸ್ಥಾನ ಉಡುಪಿ ದ್ವಿತೀಯ, ಚಿಕ್ಕಮಗಳೂರು ತೃತೀಯ, ಬೀದರ್‍ಗೆ 30ನೇ ಸ್ಥಾನ

May 4, 2019

ಹಾಸನ: ಸರ್ಕಾರದ ಸೌಲಭ್ಯ ಗಳನ್ನು ಪಡೆಯಲು ಜಿಲ್ಲೆಯ ಜನರು ಹೆಚ್ಚು ಆನ್‍ಲೈನ್‍ನ ಮೊರೆ ಹೋಗಿದ್ದು, ಸಕಾಲ ಯೋಜನೆಯಲ್ಲಿ ಹಾಸನ ಜಿಲ್ಲೆಯ ಕಂದಾಯ ಇಲಾಖೆ ರಾಜ್ಯ ದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯ ಸರ್ಕಾರವು 2011-12ನೇ ಸಾಲಿನಲ್ಲಿ ಜಾರಿಗೆ ತಂದಿರುವ ಸಕಾಲ ಕಾಯ್ದೆಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾ ಗಿದ್ದು, ಸಕಾಲ ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದಂತೆ ಜಿಲ್ಲೆಯು ಒಟ್ಟಾರೆ ಉತ್ತಮ ಸಾಧನೆ ಮಾಡಿದೆ. ದೈನಂದಿನ ಪ್ರಗತಿಯ ದಿನಾಂಕ ಮೇ 03 ರಂದು ಸಕಾಲ ಜಿಲ್ಲಾ ಶ್ರೇಯಾಂಕ ಮತ್ತು ಕಂದಾಯ ಇಲಾಖೆಯ…

ಇಂದಿನಿಂದ ಶ್ರೀ ದೇವಮ್ಮ ದೇವಾಲಯ ಉದ್ಘಾಟನಾ ಕಾರ್ಯಕ್ರಮ
ಹಾಸನ

ಇಂದಿನಿಂದ ಶ್ರೀ ದೇವಮ್ಮ ದೇವಾಲಯ ಉದ್ಘಾಟನಾ ಕಾರ್ಯಕ್ರಮ

May 4, 2019

ಅರಸೀಕೆರೆ: ತಾಲೂಕಿನ ಮುರುಂಡಿ ಗ್ರಾಮದಲ್ಲಿ ಜೀರ್ಣೋದ್ಧಾರ ಗೊಂಡಿರುವ ಶ್ರೀ ದೇವಮ್ಮ ದೇವಿ ದೇವಾಲಯದ ಲೋಕಾರ್ಪಣೆ ಕಾರ್ಯ ಕ್ರಮದ ಪೂಜಾ ಕೈಂಕರ್ಯಗಳು ಮೇ 5ರಿಂದ ನಡೆಯಲಿದೆ ಎಂದು ದೇವಾ ಲಯ ಸಮಿತಿ ಪ್ರಕಟಣೆ ತಿಳಿಸಿದೆ. ಕಳೆದ ಎರಡು ವರ್ಷಗಳಿಂದ ನಡೆಯು ತ್ತಿದ್ದ ದೇವಾಲಯ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿದ್ದು ಮೇ 5ರಿಂದ ಮೇ 7ರವರೆಗೆ ದೇವಾಲಯ ಲೋಕಾರ್ಪಣೆಯ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮೇ 5ರ ಸಂಜೆ 108 ಕುಂಭಪೂಜಾ, ಗಂಗಾ ಪೂಜಾ ಶ್ರೀ ಗಣಪತಿ ಪೂಜೆ ಜೊತೆಗೆ ಹೋಮ ಹವನಾದಿಗಳು…

ಸಾಮಾಜಿಕ ಪರಿವರ್ತನೆಗೆ ನಿವೃತ್ತರ ಸೇವೆ ಅಗತ್ಯ
ಹಾಸನ

ಸಾಮಾಜಿಕ ಪರಿವರ್ತನೆಗೆ ನಿವೃತ್ತರ ಸೇವೆ ಅಗತ್ಯ

May 4, 2019

ಬೇಲೂರು: ಸಮಾಜದಲ್ಲಿ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಹಾಗೂ ಸಾಮಾಜಿಕ ಪರಿವರ್ತನೆಗೆ ನಿವೃತ್ತರ ಸೇವೆ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಉದಯರವಿ ಹೇಳಿದರು. ಪಟ್ಟಣದ ನಿವೃತ್ತ ಭವನದಲ್ಲಿ ಕಸಾಪ ಮಾಜಿ ಅಧ್ಯಕ್ಷ ಉದಯರವಿ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದ ಹಿನೆÀ್ನಲೆಯಲ್ಲಿ ತಾಲೂಕು ನಿವೃತ್ತನೌಕರರ ಸಂಘದಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹಿರಿಯ ನೌಕರರು ನಿವೃತ್ತಿಗೊಂಡ ನಂತರದಲ್ಲಿ ಅವರನ್ನು ನಿರ್ಲಕ್ಷ್ಯಿಸಬಾರದು. ಅದರ ಬದಲು ಅವರ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಮುಂದಾಗಬೇಕು. ಹಳೆಯ ತಲೆಮಾರು ಹೊಸ ಚಿಗುರಿನೊಂದಿಗೆ ಬೆರೆತು…

ಸಮರ್ಪಕ ಕುಡಿಯುವ ನೀರು ಪೂರೈಸಲು ಸೂಚನೆ
ಹಾಸನ

ಸಮರ್ಪಕ ಕುಡಿಯುವ ನೀರು ಪೂರೈಸಲು ಸೂಚನೆ

May 4, 2019

ಅರಸೀಕೆರೆ: ತಾಲೂಕಿನಲ್ಲಿ ಮಳೆ ಕೊರತೆಯಿಂದ ಕುಡಿಯುವ ನೀರಿನ ಬವಣೆ ಉಂಟಾಗಿದ್ದು, ಪ್ರತಿ ಗ್ರಾಮಗಳಿಗೆ ಸಮರ್ಪಕವಾಗಿ ನೀರು ಪೂರೈಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚನೆ ನೀಡಿದರು. ಏ. 29ರಂದು ‘ಮೈಸೂರುಮಿತ್ರ’ ಪತ್ರಿಕೆ ಯಲ್ಲಿ ‘ಅರಸೀಕೆರೆಯಲ್ಲಿ ನೀರಿಲ್ಲ’ ಶಿರ್ಷಿಕೆಯಡಿ ಪ್ರಕಟ ವಾಗಿದ್ದ ವರದಿಗೆ ಜಿಲ್ಲಾಡ ಳಿತ ಎಚ್ಚೆತ್ತಿದೆ. ಬುಧವಾರ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಯನ್ನು ಅವಲೋಕಿಸಿ ನೀರಿನ ಬವಣೆ ನೀಗಿಸುವಂತೆ ಅಧಿಕಾರಿಗಳಿಗೆ…

ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮೇಸ್ತ್ರಿ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಪಾಲುದಾರನ ಬಂಧನ
ಹಾಸನ

ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮೇಸ್ತ್ರಿ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಪಾಲುದಾರನ ಬಂಧನ

May 4, 2019

ಹೊಳೆನರಸೀಪುರ: ಕೂಲಿ ಬಾಕಿ ಹಣ ವಸೂಲಾತಿಗೆ ತೆರಳಿ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಕೂಲಿ ಕಾರ್ಮಿಕರ ಮೇಸ್ತ್ರಿ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನ ಪಾಲುದಾರನನ್ನು ಪೊಲೀಸರು ಕೊಲೆ ಆರೋಪದ ಮೇರೆಗೆ ಬಂಧಿಸಿದ್ದಾರೆ. ಕಾಮೇನಹಳ್ಳಿ ಗ್ರಾಮದ ಕೂಲಿ ಕಾರ್ಮಿಕ ಮೇಸ್ತ್ರಿ ಮಂಜೇಗೌಡ(28) ಹತ್ಯೆಯಾದವರಾಗಿದ್ದು, ಇವರ ಮೃತದೇಹ ತಾಲೂಕಿನ ಹರಿಹರಪುರ ಸಮೀಪದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಮಂಜೇಗೌಡ ಕಬ್ಬು ಕಟಾವು ಮಾಡುವ ಕೂಲಿ ಕಾರ್ಮಿಕರ ಮೇಸ್ತ್ರಿಯಾಗಿ ಕೆಲಸ ಮಾಡಿಕೊಂಡಿದ್ದ. ಮಾ.28ರಂದು ಕಬ್ಬು ಕಡಿಯುತ್ತಿದ್ದ ಜಮೀನಿಗೆ, ಕೂಲಿ ಬಾಕಿ ಹಣ…

ಚಾರುಕೀರ್ತಿ ಶ್ರೀಗೆ ರಜತ ಮಾನಸ್ಥಂಭ, ಸ್ಪಟಿಕ ರತ್ನಬಿಂಬ ಸಮರ್ಪಣೆ
ಹಾಸನ

ಚಾರುಕೀರ್ತಿ ಶ್ರೀಗೆ ರಜತ ಮಾನಸ್ಥಂಭ, ಸ್ಪಟಿಕ ರತ್ನಬಿಂಬ ಸಮರ್ಪಣೆ

May 3, 2019

70ರ ವರ್ಧಂತಿ ಸಂಭ್ರಮದಲ್ಲಿ ಚಾರುಶ್ರೀ ಗ್ರಂಥ ಲೋಕಾರ್ಪಣೆ ಜೈನ ಭಕ್ತರು, ಗಣ್ಯರಿಂದ ಗುರುವಂದನೆ ಹಾಸನ: ಜೈನಕಾಶಿ ಎಂದೇ ಹೆಸರಾದ ಶ್ರವಣಬೆಳಗೊಳದಲ್ಲಿ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ 70ನೇ ಜನ್ಮದಿನ ಪ್ರಯುಕ್ತ ಶ್ರವಣಬೆಳಗೊಳದ ಚಾವುಂಡರಾಯ ಸಭಾಭವನದಲ್ಲಿ ಗುರುವಾರ ಗುರು ವಂದನೆ-ವರ್ಧಂತಿ ಕಾರ್ಯಕ್ರಮ ಅದ್ಧೂರಿ ಯಾಗಿ ಜರುಗಿತು. 50 ವರ್ಷಗಳ ಸಾರ್ಥಕ ಸೇವೆ ಮತ್ತು 4 ಮಹಾ ಮಸ್ತಕಾಭಿಷೇಕ ಗಳನ್ನು ಬಹಳ ಯಶಸ್ವಿಯಾಗಿ ನೆರವೇರಿಸಿದ ಸ್ವಾಮೀಜಿಗೆ ಹಾಸನ ಜಿಲ್ಲೆಯ ಜೈನ ಸಮಾಜ ದವರು ಗೌರವ ವಂದನೆ…

ಅರಸೀಕೆರೆಯಲ್ಲಿ ಅಂತರ್ಜಲ ರಕ್ಷಣೆಗೆ ಆದ್ಯತೆ: ಡಿಸಿ
ಹಾಸನ

ಅರಸೀಕೆರೆಯಲ್ಲಿ ಅಂತರ್ಜಲ ರಕ್ಷಣೆಗೆ ಆದ್ಯತೆ: ಡಿಸಿ

May 3, 2019

ಹಾಸನ: ಕುಡಿಯುವ ನೀರಿಗೆ ತೀವ್ರ ತೊಂದರೆ ಅನುಭವಿಸುತ್ತಿರುವ ಅರಸೀ ಕೆರೆ ತಾಲೂಕಿನಲ್ಲಿ ಅಂತರ್ಜಲ ಸಂರಕ್ಷಣೆಗೆ ಪರಿಣಾಮಕಾರಿ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಗಮನ ಸೆಳೆದರು. ಡಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಅಂತರ್ಜಲ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಅರಸೀಕೆರೆ ತಾಲೂಕಿ ನಲ್ಲಿ ಜಲ ಮರುಪೂರಣ ಕಾರ್ಯಕ್ಕೆ ಹೆಚ್ಚು ಗಮನ ಹರಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಂತರ್ಜಲ ವೃದ್ಧಿ ಮತ್ತು ನಿರ್ವಹಣೆ, ನಿಯಂತ್ರಣದ ವರದಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಂತರ್ಜಲ…

ಚನ್ನರಾಯಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ತಡೆಗೆ 15 ಅಧಿಕಾರಿಗಳ ತಂಡ
ಹಾಸನ

ಚನ್ನರಾಯಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ತಡೆಗೆ 15 ಅಧಿಕಾರಿಗಳ ತಂಡ

May 3, 2019

ಚನ್ನರಾಯಪಟ್ಟಣ: ಪಟ್ಟಣ ದಲ್ಲಿ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವ ಸಲುವಾಗಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ವಿರುದ್ಧ ಕಾರ್ಯಾಚರಣೆಗೆ 15 ಅಧಿಕಾರಿಗಳ ತಂಡ ರಚಿಸಲು ಪುರಸಭೆ ಮುಂದಾಗಿದೆ. ಪ್ಲಾಸ್ಟಿಕ್ ನಿಷೇಧ ಕುರಿತು ಪಟ್ಟಣದ ಪುರಸಭೆ ಏರ್ಪಡಿಸಿದ್ದ ಸಭೆಯಲ್ಲಿ ಮಾತ ನಾಡಿದ ಪುರಸಭೆ ಆಡಳಿತಾಧಿಕಾರಿ ಹೆಚ್.ಎಲ್. ನಾಗರಾಜ್, ಪಟ್ಟಣದಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾರಾಟದ ಅಂಗಡಿ, ಬಳಸುವ ಸ್ಥಳಗಳಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಿದೆ ಎಂದರು. ತಾಲೂಕಿನಲ್ಲಿರುವ ಬಹುತೇಕ ಸಮು ದಾಯ ಭವನಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಬಗ್ಗೆ…

1 25 26 27 28 29 103
Translate »