ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮೇಸ್ತ್ರಿ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಪಾಲುದಾರನ ಬಂಧನ
ಹಾಸನ

ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮೇಸ್ತ್ರಿ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಪಾಲುದಾರನ ಬಂಧನ

May 4, 2019

ಹೊಳೆನರಸೀಪುರ: ಕೂಲಿ ಬಾಕಿ ಹಣ ವಸೂಲಾತಿಗೆ ತೆರಳಿ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಕೂಲಿ ಕಾರ್ಮಿಕರ ಮೇಸ್ತ್ರಿ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನ ಪಾಲುದಾರನನ್ನು ಪೊಲೀಸರು ಕೊಲೆ ಆರೋಪದ ಮೇರೆಗೆ ಬಂಧಿಸಿದ್ದಾರೆ.

ಕಾಮೇನಹಳ್ಳಿ ಗ್ರಾಮದ ಕೂಲಿ ಕಾರ್ಮಿಕ ಮೇಸ್ತ್ರಿ ಮಂಜೇಗೌಡ(28) ಹತ್ಯೆಯಾದವರಾಗಿದ್ದು, ಇವರ ಮೃತದೇಹ ತಾಲೂಕಿನ ಹರಿಹರಪುರ ಸಮೀಪದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.

ಮಂಜೇಗೌಡ ಕಬ್ಬು ಕಟಾವು ಮಾಡುವ ಕೂಲಿ ಕಾರ್ಮಿಕರ ಮೇಸ್ತ್ರಿಯಾಗಿ ಕೆಲಸ ಮಾಡಿಕೊಂಡಿದ್ದ. ಮಾ.28ರಂದು ಕಬ್ಬು ಕಡಿಯುತ್ತಿದ್ದ ಜಮೀನಿಗೆ, ಕೂಲಿ ಬಾಕಿ ಹಣ ವಸೂಲಿಗೆ ತೆರಳುತ್ತಿದ್ದೇನೆ ಎಂದು ತನ್ನ ಪಾಲುದಾರ ಸುಲ್ತಾನ್ ಖಾನ್ ಎಂಬಾತನಿಗೆ ಹೇಳಿ ತೆರಳಿದ್ದರು ಎನ್ನಲಾಗಿದೆ. ಆದರೆ ಮಂಜೇಗೌಡ ನಾಪತ್ತೆಯಾಗಿದ್ದಾರೆಂದು ಸುಲ್ತಾನ್ ಏ.3ರಂದು ನಗರ ಠಾಣೆಗೆ ದೂರು ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಶೋಧ ಕಾರ್ಯ ಕೈಗೊಂಡಿದ್ದರು.

ಗಸ್ತಿನಲ್ಲಿದ್ದ ಪೆÇಲೀಸರಿಗೆ ಹರಿಹರಪುರ ಅರಣ್ಯ ಪ್ರದೇಶದಲ್ಲಿ ಮೇಸ್ತ್ರಿ ಮಂಜೇಗೌಡರ ಶವ ರುಂಡ ಬೇರ್ಪಟ್ಟು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಕುರಿತು ತನಿಖೆ ನಡೆಸಿದ ಪೊಲೀಸರು ಮಂಜೇಗೌಡರ ನಾಪತ್ತೆ ದೂರು ನೀಡಿದ್ದ ಪಾಲುದಾರ ಸುಲ್ತಾನ್ ಖಾನ್‍ನನ್ನುಬಂಧಿಸಿದ್ದಾರೆ.

ಬಂಧಿತ ಸುಲ್ತಾನ್‍ಖಾನ್ ಮತ್ತು ಮೃತ ಮಂಜೇಗೌಡ ಪಾಲುದಾರರಾಗಿ ಜ್ಯೂಸ್ ಕಬ್ಬು ಸಗಟು ವ್ಯಾಪಾರ ಮಾಡುತ್ತಿದ್ದರು. ಈ ನಡುವೆ, ಕಳೆದ ಮಾರ್ಚ್ 28 ರಂದು ಮನೆಯಿಂದ 2 ಲಕ್ಷ ರೂ. ತೆಗೆದುಕೊಂಡು ಹೋದ ಮಂಜೇಗೌಡ ನಂತರ ನಾಪತ್ತೆಯಾದರು. ಸುಲ್ತಾನ್‍ಖಾನ್ ಜತೆ ವ್ಯಾಪಾರಕ್ಕೆಂದು ಹೋದವರು ಮನೆಗೆ ಮರಳಿ ಬಂದಿಲ್ಲವೆಂದು ಮಂಜೇಗೌಡರ ಪತ್ನಿ ಭಾರತಿ ಪಟ್ಟಣ ಠಾಣೆಗೆ ದೂರು ನೀಡಿದ್ದರು.
ಏಪ್ರಿಲ್ 30 ರಂದು ಹಳೇಕೋಟೆ ಹೋಬಳಿ ಹರಿಹರಪುರ ಬೆಟ್ಟದಲ್ಲಿ ಮಂಜೇಗೌಡರ ಮೃತದೇಹ ಪತ್ತೆಯಾಗಿತ್ತು. ದುಷ್ಕರ್ಮಿಗಳು ಹಣಕ್ಕಾಗಿ ಕೊಂದಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದರು.

ಡಿವೈಎಸ್‍ಪಿ ಲಕ್ಷ್ಮೇಗೌಡ, ಸರ್ಕಲ್ ಇನ್ಸ್‍ಪೆಕ್ಟರ್ ಆರ್.ಪಿ.ಅಶೋಕ್ ಮಾರ್ಗ ದರ್ಶನದಲ್ಲಿ ಪಿಎಸ್‍ಐ ಮೋಹನಕೃಷ್ಣ ಮತ್ತು ಸಿಬ್ಬಂದಿ ಸುಲ್ತಾನ್‍ಖಾನ್‍ನನ್ನು ಜಾಂದಾಳ್ ಗ್ರಾಮದಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Translate »