ಚಾರುಕೀರ್ತಿ ಶ್ರೀಗೆ ರಜತ ಮಾನಸ್ಥಂಭ, ಸ್ಪಟಿಕ ರತ್ನಬಿಂಬ ಸಮರ್ಪಣೆ
ಹಾಸನ

ಚಾರುಕೀರ್ತಿ ಶ್ರೀಗೆ ರಜತ ಮಾನಸ್ಥಂಭ, ಸ್ಪಟಿಕ ರತ್ನಬಿಂಬ ಸಮರ್ಪಣೆ

May 3, 2019
  • 70ರ ವರ್ಧಂತಿ ಸಂಭ್ರಮದಲ್ಲಿ ಚಾರುಶ್ರೀ ಗ್ರಂಥ ಲೋಕಾರ್ಪಣೆ
  • ಜೈನ ಭಕ್ತರು, ಗಣ್ಯರಿಂದ ಗುರುವಂದನೆ

ಹಾಸನ: ಜೈನಕಾಶಿ ಎಂದೇ ಹೆಸರಾದ ಶ್ರವಣಬೆಳಗೊಳದಲ್ಲಿ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ 70ನೇ ಜನ್ಮದಿನ ಪ್ರಯುಕ್ತ ಶ್ರವಣಬೆಳಗೊಳದ ಚಾವುಂಡರಾಯ ಸಭಾಭವನದಲ್ಲಿ ಗುರುವಾರ ಗುರು ವಂದನೆ-ವರ್ಧಂತಿ ಕಾರ್ಯಕ್ರಮ ಅದ್ಧೂರಿ ಯಾಗಿ ಜರುಗಿತು. 50 ವರ್ಷಗಳ ಸಾರ್ಥಕ ಸೇವೆ ಮತ್ತು 4 ಮಹಾ ಮಸ್ತಕಾಭಿಷೇಕ ಗಳನ್ನು ಬಹಳ ಯಶಸ್ವಿಯಾಗಿ ನೆರವೇರಿಸಿದ ಸ್ವಾಮೀಜಿಗೆ ಹಾಸನ ಜಿಲ್ಲೆಯ ಜೈನ ಸಮಾಜ ದವರು ಗೌರವ ವಂದನೆ ಸಲ್ಲಿಸಿದರು.

ಶ್ರೀಗಳಿಗೆ ಅರ್ಪಣೆ: ಶ್ರೀಗಳಿಗೆ ಆಚಾರ್ಯಶ್ರೀ ಚಂದ್ರಪ್ರಭ ಸಾಗರ ಮಹಾರಾಜರು ನೀಡಿದ ರಜತ ಮಾನಸ್ಥಂಭ ಮತ್ತು ಸ್ಪಟಿಕ ರತ್ನ ಬಿಂಬವನ್ನು ಸಮರ್ಪಿಸಲಾಯಿತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಶ್ರಾವಕ ಶ್ರಾವಕಿಯರು 70 ಅರ್ಘ್ಯಗಳನ್ನು ಶ್ರೀಗಳಿಗೆ ಸಮರ್ಪಿಸಿ ಗೌರವಿಸಿದರು. ಹೋಬಳಿಯ ಸುತ್ತ್ತಲಿನ ಗ್ರಾಮಗಳ ಹಿರಿಯರು, ಸ್ಥಳೀಯ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರು ಶ್ರೀಗಳಿಗೆ ಫಲ ಅರ್ಪಿಸಿದರು.

ನಂತರ ಭಕ್ತರಿಂದ ಗೌರವ ಸ್ವೀಕರಿಸಿದ ಚಾರುಕೀರ್ತಿ ಶ್ರೀಗಳು ಮಾತನಾಡಿ, ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ಉಡುಪಿ ಜಿಲ್ಲೆಯ ಜೈನ ಕ್ಷೇತ್ರ ವರಂಗದಲ್ಲಿ ಪೂರ್ವಾ ಶ್ರಮದ ತಂದೆ ಚಂದ್ರರಾಜ ಇಂದ್ರ ಮತ್ತು ತಾಯಿ ಶ್ರೀಕಾಂತಮ್ಮ ಅವರಿಂದ ಬಾಲ್ಯದಲ್ಲಿ ಸಂಸ್ಕಾರಯುತ ಶಿಕ್ಷಣ ದೊರೆತಿದೆ ಎಂಬು ದನ್ನು ಸ್ಮರಿಸಿದರು. ಪೀಠಕ್ಕೆ ಆಯ್ಕೆಯಾ ದಾಗ ಗುರುಗಳು ನಮ್ಮನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಎತ್ತರದ ಸ್ಥಾನದಲ್ಲಿ ಇರಿಸುವಂತೆ ಬಯಸಿದ್ದರು. ಸಮಾಜ ಹಾಗೂ ಕ್ಷೇತ್ರದ ಜನರು ಸಹ ಎತ್ತರದ ಸ್ಥಾನದಲ್ಲಿ ನಮಗೆ ಅವಕಾಶ ಕಲ್ಪಿಸಿರು ವುದು ಪೂರ್ವಜನ್ಮದ ಪುಣ್ಯ ಎಂದು ಬಣ್ಣಿಸಿದರು. 50 ವರ್ಷ ಗಳ ದೀರ್ಘ ಸೇವೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಯನ್ನೇ ಪ್ರಮುಖವಾಗಿಸಿಕೊಂಡಿದ್ದು, ಸಮಾಜದ ಸಹಕಾರದಿಂದ ಸೇವೆ ಸಲ್ಲಿಸು ತ್ತಿದ್ದೇವೆ. ಎಲ್ಲಾ ಧರ್ಮ, ಧರ್ಮ ಗ್ರಂಥ ಗಳನ್ನು ತಿಳಿಯಬೇಕು. ಎಲ್ಲ ಧರ್ಮಗಳನ್ನೂ ಗೌರವಿಸಬೇಕು, ಧÀರ್ಮ ಗುರುಗಳನ್ನು ಆದರಿಸಬೇಕು ಎಂದರು.

ಚಾರುಶ್ರೀ ಗ್ರಂಥ ಲೋಕಾರ್ಪಣೆ: ಇದೇ ವೇಳೆ `ಚಾರುಶ್ರೀ ಗ್ರಂಥ’ವನ್ನು ಸಚಿವ ಹೆಚ್.ಡಿ.ರೇವಣ್ಣ ಲೋಕಾರ್ಪಣೆಗೊಳಿಸಿದರು. ಅದಕ್ಕೂ ಮೊದಲು ಗ್ರಂಥವನ್ನು ಮಠದ ಬಸದಿಯಿಂದ ರಜತ ಪಲ್ಲಕ್ಕಿಯಲ್ಲಿಟ್ಟು ಹಂಪನಾ ಮತ್ತು ಜಯಂಧರ ಸೋನಿ ಅವರು ಹೆಗಲ ಮೇಲೆ ಹೊತ್ತುಕೊಂಡು ಮಂಗಲ ವಾದ್ಯಗಳೊಂದಿಗೆ ವೇದಿಕೆಗೆ ತಂದಿದ್ದು ವಿಶೇಷವಾಗಿತ್ತು. ಚಾರುಕೀರ್ತಿಶ್ರೀ ಗಳು ಶ್ರವಣಬೆಳಗೊಳ ಪೀಠವನ್ನು ಅಲಂಕರಿಸಿ 50 ವರ್ಷಗಳು ತುಂಬಿದ್ದು, ಹಾಗೂ ಸಾಹಿತ್ಯ, ಪ್ರಾಕೃತ ಭಾಷೆಯ ಪುನರುತ್ಥಾನ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ ಕಮ್ಮಟ ಗಳು ನಡೆದ ಪ್ರಬಂಧಗಳನ್ನು ಒಳಗೊಂಡ `ಚಾರುಶ್ರೀ ಗ್ರಂಥ’ ಆಂಗ್ಲ ಭಾಷೆಯಲ್ಲಿದ್ದು, ಪೆÇ್ರ.ಹಂಪ ನಾಗರಾಜಯ್ಯ ಮತ್ತು ಜಯಂ ಧರ್ ಸೋನಿ ಅವರ ಸಂಪಾದಕತ್ವದಲ್ಲಿ ಸಿದ್ಧಗೊಂಡಿದೆ. ಪೆÇ್ರ.ಹಂಪನಾ ಪ್ರಾಸ್ತಾವಿಕ ನುಡಿಗಳ ನ್ನಾಡಿ ಶ್ರೀಗಳ 50 ವರ್ಷಗಳ ಸತತ ಸೇವೆಯನ್ನು ಶಿಖರ ದರ್ಶಿನಿ ಎಂದು ಶ್ಲಾಘಿಸಿದರು. ಅಪೂರ್ವವಾದ ಧವಲಾ, ಜಯಧವಲಾ, ಮಹಾಧವಲ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದು, ಶ್ರೀಗಳ ಕೊಡುಗೆ ಅನನ್ಯ. ಇವರು ಹುಂಚ ಜೈನ ಮಠದ ಅರ್ಹದ್ಧಾಸ ಗುರುಗಳ ಕೈಯಲ್ಲಿ ಬೆಳೆದ ಪುತ್ಥಳಿ ಎಂದು ಬಣ್ಣಿಸಿದರು.

ಕರ್ನಾಟಕ ಜೈನ ಅಸೋಸಿಯೇಷನ್ ಅಧ್ಯಕ್ಷ ಎಸ್.ಜಿತೇಂದ್ರಕುಮಾರ್ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸಿ.ಎನ್.ಬಾಲಕೃಷ್ಣ, ಸಂಸದೀಯ ಕಾರ್ಯ ದರ್ಶಿ ಎಂ.ಗೋಪಾಲಸ್ವಾಮಿ, ಗೋ.ಮಧು ಸೂಧನ್, ಜಯಂಧರ್ ಸೋನಿ, ಪ್ರೊ. ಲುಯಿಟ್ ಗಾರ್ಡ್ ಸೋನಿ, ಬಿ.ಪ್ರಸನ್ನಯ್ಯ, ತಾಪಂ ಸದಸ್ಯೆ ಮಹಾಲಕ್ಷ್ಮಿ, ಗ್ರಾಪಂ ಅಧ್ಯಕ್ಷೆ ಲತಾ, ಪದ್ಮರಾಜ್ ದಂಡಾವತಿ, ಜೈನ ಸಮಾಜದ ಅಧ್ಯಕ್ಷ ಜಿ.ಪಿ.ಪದ್ಮ ಕುಮಾರ್, ಮಹಿಳಾ ಸಮಾಜದ ಅಧ್ಯಕ್ಷೆ ಪೂರ್ಣಿಮಾ ಅನಂತಪದ್ಮನಾಭ್ ಮತ್ತಿತರರಿದ್ದರು.

Translate »