ಉದ್ದೂರ್ ಪ್ರೇಮೇಗೌಡ ಹುಣಸೂರು ತಾಪಂ ಉಪಾಧ್ಯಕ್ಷ
ಮೈಸೂರು

ಉದ್ದೂರ್ ಪ್ರೇಮೇಗೌಡ ಹುಣಸೂರು ತಾಪಂ ಉಪಾಧ್ಯಕ್ಷ

May 4, 2019

ಹುಣಸೂರು: ಇಲ್ಲಿನ ತಾಪಂ ಉಪಾಧ್ಯಕ್ಷ ಪ್ರೇಮ್‍ಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಉದ್ದೂರ್ ಪ್ರೇಮೇಗೌಡ ಸರ್ವಾನುಮತದಿಂದ ಆಯ್ಕೆಯಾದರು.

ಕಲ್ಕುಂದ ಕ್ಷೇತ್ರದ ಹೆಚ್.ಪ್ರೇಮ್‍ಕುಮಾರ್ ಒಪ್ಪಂದದಂತೆ ರಾಜೀನಾಮೆ ನೀಡಿದರಿಂದ ಉಪಾಧ್ಯಕ್ಷ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕೆ ನಿಗದಿಪಡಿಸಿದಂತೆ ಇಂದು ತಾಪಂ ಸಭಾಗಂಗಣದಲ್ಲಿ ಚುನಾವಣೆ ನಡೆಯಿತು. 23 ಸದಸ್ಯರ ಪೈಕಿ 14 ಸದಸ್ಯರು ಭಾಗವಹಿಸಿ ತೆರವಾಗಿದ್ದ ಸ್ಥಾನಕ್ಕೆ ಉದ್ದೂರ್‍ಕಾವಲ್ ಕ್ಷೇತ್ರದ ಎಸ್.ಪ್ರೇಮೆಗೌಡರನ್ನು ಆಯ್ಕೆಗೆ ಸರ್ವಾನುಮತದಿಂದ ಸಮ್ಮತಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‍ನ ತಟ್ಟೆಕೆರೆ ಶ್ರೀನಿವಾಸ್ ಅವರ ಹೆಸರನ್ನು ಸೂಚಿಸಲಾಗಿತ್ತಾದರೂ ಕೊನೆ ಹಂತದಲ್ಲಿ ಉದ್ದೂರ್ ಎಸ್.ಪ್ರೇಮೆಗೌಡ ತಾವೇ ಸ್ಪರ್ಧಿಸುವುದಾಗಾಗಿ ಸದಸ್ಯರು ಮತ್ತು ಮುಖಂಡರನ್ನು ಕೋರಿದ್ದರಿಂದ ಸದಸ್ಯರಾದ ಶಕುಂತಲಾ, ಹೆಚ್.ಸಿ.ಶಿವಣ್ಣ, ವಿ.ರಾಜೇಶ್, ಪ್ರಭಾಕರ್, ಕೆಂಗಯ್ಯ, ಲತಾಮಣಿ ಶಿವಶೇಖರ್, ಟಿ.ಆರ್.ಶ್ರೀನಿವಾಸ್, ಮಂಜುಳಾ ರಾಜೆಗೌಡ, ಕೆ.ಪುಷ್ಪಲತಾ ಸೇರಿದಂತೆ 9 ಜನ ಸದಸ್ಯರು ಸಭೆಗೆ ಗೈರಾಗಿದ್ದರು. ಇನ್ನೂಳಿದ 14 ಜನ ಸದಸ್ಯರು ಎಸ್.ಪ್ರೇಮೇಗೌಡರನ್ನು ಬೆಂಬಲಿಸಿದರು.

ನೂತನ ಉಪಾಧ್ಯಕ್ಷ ಪ್ರೇಮೇಗೌಡ ಮಾತನಾಡಿ, ಪಕ್ಷದಲ್ಲಿನ ಗೊಂದಲಗಳಿಂದ ಹಿಂದಿನ ಉಪಾಧಕ್ಷರಾದ ಹೆಚ್.ಪ್ರೇಮ್‍ಕುಮಾರ್ ರಾಜೀನಾಮೆ ನೀಡಿರಲಿಲ್ಲ. ನಂತರ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಾನು ಆಕಾಂಕ್ಷಿಯಾಗಿದ್ದರೂ ತಟ್ಟೆಕೆರೆ ಶ್ರೀನಿವಾಸ್ ಅವರ ಹೆಸರÀನ್ನು ಸೂಚಿಸಲಾಗಿತ್ತು. ಇದರಿಂದ ನಾನು ಕಾಂಗ್ರೆಸ್ ಸೇರಿದಂತೆ ಎಲ್ಲಾ ಸದಸ್ಯರು ಹಾಗೂ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಸಹಕಾರ ಪಡೆದು ಉಪಾಧ್ಯಕ್ಷನಾಗಿದ್ದೇನೆ.

ನಾನು ಸತತವಾಗಿ 25 ವರ್ಷಗಳಿಂದ ಜೆಡಿಎಸ್‍ನಲ್ಲೇ ದುಡಿದಿದ್ದೇನೆ. ಜಿಟಿಡಿ ಅವರ ಶಿಷ್ಯನಾಗಿದ್ದೇನೆ. ಈಗಲೂ ಜೆಡಿಎಸ್‍ನಲ್ಲೇ ಇದ್ದೇನೆ. ಅದರೆ ಸ್ಥಾನ ಕಲ್ಪಿಸುವಾಗ ನನ್ನ ಹೆಸರು ಕೈಬಿಡಲಾಯಿತು. ಹಾಗಾಗಿ ನಾನು ಎಲ್ಲ ಸದಸ್ಯರ ಬೆಂಬಲ ಪಡೆದುಕೊಂಡು ಸ್ಥಾನ ಉಳಿಸಿಕೊಂಡಿದ್ದೇನೆ ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ ಚುನಾವನೆ ಪ್ರಕ್ರಿಯೆ ನಡೆಸಿದರು. ತಾಪಂ ಇಓ ಪರವಾಗಿ ಸಹಾಯಕ ನಿರ್ದೇಶಕ ಪ್ರೇಮ್‍ಕುಮಾರ್ ಉಪಸ್ಥಿತರಿದ್ದರು.

Translate »