ಬೆಂಗಳೂರು: ಸೂರ್ಯಕಿರಣ್ ಆಗಸದಿಂದ ಧರೆಗುರುಳಿದ ಕಹಿ ನೆನಪಿನ ನಡುವೆ ಇಂದು ಏರ್ ಶೋ-2019ಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ಯಲಹಂಕ ವಾಯು ನೆಲೆಯಲ್ಲಿ ದೇಶ-ವಿದೇಶದ ಯುದ್ಧ ವಿಮಾನಗಳ ಸಾಹಸದ ನಡುವೆಯೇ ನಭೋ ಮಂಡಲದಲ್ಲಿ ತ್ರಿವರ್ಣ ಧ್ವಜದ ಚಿತ್ತಾರ ಮೂಡಿಸುತ್ತಿದ್ದ ಸೂರ್ಯ ಕಿರಣ್ ಇಲ್ಲದೆಯೇ ಈ ಬಾರಿಯ ಏರ್ ಶೋ ಆರಂಭಗೊಂಡಿದೆ. ಆಗಸದಲ್ಲಿ ಯುದ್ಧ ವಿಮಾನಗಳ ಘರ್ಜನೆ ಕಿವಿಗಡಚಿಕ್ಕುವಂತಿತ್ತು. ಗ್ಲೋಬ್ ಮಾಸ್ಟರ್ ದೈತ್ಯ ವಿಮಾನ, ಎಚ್‍ಎಎಲ್‍ನ ಅತ್ಯಂತ ಪುಟ್ಟ ವಿಮಾನಗಳು ಸ್ವೀಡನ್ ಗ್ರೈಪೇನ್ ಯುದ್ಧ ವಿಮಾನಗಳು ವಿವಿಧ ಸಾಹಸ ಪ್ರದರ್ಶನಗಳ…
ವಾಯುಸೇನೆ ಸೇರಲು ಬಂದ `ಯುವಕರು’ 800ಮೀ. ಓಟಕ್ಕೆ ಸುಸ್ತಾದರು!
December 6, 2018ಮೈಸೂರು: ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಮೂರು ದಿನಗಳ ಭಾರತೀಯ ವಾಯುಸೇನೆಯ ನೇಮಕಾತಿ ರ್ಯಾಲಿಯಲ್ಲಿ ಉತ್ತರ ಕರ್ನಾಟಕದ 9 ಜಿಲ್ಲೆಗಳ 1500ಕ್ಕೂ ಹೆಚ್ಚು ಯುವಕರು ಸಂದರ್ಶನದಲ್ಲಿ ಪಾಲ್ಗೊಂಡು ವಿವಿಧ ಪರೀಕ್ಷೆ ಎದುರಿಸಿದರು. ಅರ್ಧದಷ್ಟು ಮಂದಿ 800 ಮೀ. ಓಡುವಷ್ಟರಲ್ಲೇ ಸುಸ್ತು ಹೊಡೆದರು! ಬೆಂಗಳೂರಿನಲ್ಲಿರುವ 7ನೇ ಏರ್‍ಮನ್ ಸೆಲೆಕ್ಷನ್ ಸೆಂಟರ್ ವತಿಯಿಂದ ಇಂದು ಮುಂಜಾನೆ 5.30ರಿಂದಲೇ ಭಾರತೀಯ ವಾಯುಸೇನೆಯ ಗ್ರೂಪ್ `ವೈ’ ಟ್ರೇಡ್ ನಲ್ಲಿ ಖಾಲಿಯಿರುವ `ಏರ್‍ಮನ್’ ಹುದ್ದೆಗಳಿಗೆ ನೇಮಕಾತಿ ಮಾಡಲು ಅಭ್ಯರ್ಥಿಗಳ ಸಂದರ್ಶನ ಆರಂಭಿಸಲಾಯಿತು….
ಬೆಂಗಳೂರಿನಲ್ಲೇ ಏರೋ ಇಂಡಿಯಾ 2019
September 9, 2018ಬೆಂಗಳೂರು: ಕರ್ನಾಟಕ ರಾಜ್ಯದ ಪ್ರತಿಷ್ಠೆ ಎಂದೇ ಹೇಳಲಾಗುತ್ತಿರುವ ‘ಏರೋ ಇಂಡಿಯಾ 2019’ನ್ನು ಬೆಂಗಳೂರಿನಲ್ಲಿಯೇ ನಡೆಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಶನಿವಾರ ಸ್ಪಷ್ಟಪಡಿಸಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತೀವರ್ಷ ನಡೆಸಲಾಗುತ್ತಿದ್ದ ವೈಮಾನಿಕ ಪ್ರದರ್ಶನ ಏರೋ ಇಂಡಿಯಾವನ್ನು ಈ ಬಾರಿ ಉತ್ತರ ಪ್ರದೇಶದ ಲಖನೌಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ರಾಜ್ಯ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗಷ್ಟೇ ಬೆಂಗಳೂರಿಗೆ ಭೇಟಿ ನೀಡಿದ್ದ ರಕ್ಷಣಾ ಸಚಿವೆ ಸೀತಾರಾಮನ್ ಅವರು ಕೂಡ ಹೇಳಿಕೆಯನ್ನು ನೀಡಿದ್ದರು….
ಗಾಳಿಯಲ್ಲೂ ಸೈನಿಕರ ಯೋಗ: ವಾಯುಸೇನೆ ವಿನೂತನ ಪ್ರಯತ್ನ
June 22, 2018ನವದೆಹಲಿ: ಆಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಭಾರತೀಯ ವಾಯು ಸೇನೆಯ ಯೋಧರು ಆಗಸದಲ್ಲೇ ಯೋಗಾಭ್ಯಾಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ದೇಶದ ಭೂ, ವಾಯು ಹಾಗೂ ನೌಕಾ ಪಡೆಯಿಂದ ವಿಶ್ವ ಯೋಗದಿನ ಆಚರಿಸಲಾಗಿದ್ದು, ತಾವು ಇರುವ ವಾತಾವರಣ ದಲ್ಲಿಯೇ ಯೋಗಾಸನಗಳನ್ನು ಮಾಡುವ ಮೂಲಕ ಭಾರತೀಯ ಸೈನಿಕರು ಜಗತ್ತಿನ ಜನರ ಗಮನ ಸೆಳೆದಿದ್ದಾರೆ. ಇನ್ನು ಭಾರತೀಯ ವಾಯು ಪಡೆಯ ಪ್ಯಾರಾಟ್ರೂಪರ್ಸ್ ಟ್ರೈನಿಂಗ್ ಸ್ಕೂಲ್‍ನ ತರಬೇತುದಾರರಾದ ಸ್ಯಾಮಲ್ ಹಾಗೂ ಗಜಾನಂದ್ ಯಾದವ್ ಅವರು ಆಕಾಶದಲ್ಲಿ ಯೋಗಾಸನ ಪ್ರದರ್ಶಿಸಿದರು. ಸುಮಾರು 15…