ಮೈಸೂರು: ಅಗಲೀಕರಣ ಹಾಗೂ ಅಭಿವೃದ್ಧಿಗೊಳ್ಳು ತ್ತಿರುವ ಮೈಸೂರಿನ ಇರ್ವಿನ್ ರಸ್ತೆಯ ಮೂರು ಕಟ್ಟಡಗಳ ತೆರವಿಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಇರ್ವಿನ್ ರಸ್ತೆ ಉಳಿಸಿ ಹೋರಾಟ ಸಮಿತಿಯ ತಾಜ್ ಮೊಹಮ್ಮದ್ ಖಾನ್ ತಿಳಿಸಿದ್ದಾರೆ. ಇರ್ವಿನ್ ರಸ್ತೆಯ ವಕ್ಫ್ ಕಮಿಟಿ ಆಶ್ರಯದ ಜಮ್ಮಾ ಮಸೀದಿ ಕಟ್ಟಡ, ಚಿತ್ರಾಸ್ ಆಸ್ಪತ್ರೆ ಹಾಗೂ ಪ್ರಸಾದ್ ನರ್ಸಿಂಗ್ ಹೋಂ ಕಟ್ಟಡ ಗಳ ಭಾಗಶಃ ನೆಲಸಮಗೊಳಿಸುವುದಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಡಾ.ಸಿದ್ದಪ್ಪ ಸುನಿಲ್ ದತ್ ಯಾದವ್ ತಡೆಯಾಜ್ಞೆ ನೀಡಿದ್ದಾರೆ ಎಂದು ತಾಜ್ ಮೊಹಮ್ಮದ್ ಖಾನ್…
ಕಡೆಗೂ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿ ಆರಂಭ
December 26, 2018ಮೈಸೂರು: ವಾಹನ ದಟ್ಟಣೆಯಿಂದ ಕೂಡಿದ ಮೈಸೂರಿನ ಹೃದಯ ಭಾಗದ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿ ಯನ್ನು ನಗರ ಪಾಲಿಕೆ ಕಡೆಗೂ ಆರಂಭಿಸಿದೆ. ನೆಹರು ಸರ್ಕಲ್ ಸಮೀಪ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮತ್ತು ಶಾಸಕ ಎಲ್. ನಾಗೇಂದ್ರ ಅವರು ಇಂದು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಪಾಲಿಕೆಯು ಮಾಲೀಕರಿಂದ ಖರೀದಿ ಮಾಡಿರುವ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಮಹಮದ್ ಶಫಿ, ಕಾರ್ಪೊರೇಟರ್‍ಗಳಾದ ಸತೀಶ, ಎಂ.ಡಿ.ನಾಗರಾಜ್, ಮಾಜಿ ಕಾರ್ಪೊರೇಟರ್‍ಗಳಾದ…
ಮೈಸೂರಿನ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿಗೆ ಪಾಲಿಕೆ ಸದಸ್ಯ ಎಂ.ಡಿ.ನಾಗರಾಜು ಗುದ್ದಲಿ ಪೂಜೆ
November 27, 2018ಮೈಸೂರು: ಮೈಸೂರಿನ ಬಹು ನಿರೀಕ್ಷಿತ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿಗೆ ಕೊನೆಗೂ ಸೋಮವಾರ ಚಾಲನೆ ದೊರೆಯಿತು. ರಸ್ತೆಯ ಪಂಚ ಮುಖಿ ಆಂಜನೇಯಸ್ವಾಮಿ ದೇವಸ್ಥಾನದ ಕಾಂಪೌಂಡ್ ಬಳಿ ಮಹಾನಗರಪಾಲಿಕೆ ಸದಸ್ಯ ಎಂ.ಡಿ. ನಾಗರಾಜು ಅವರು ಗುದ್ದಲಿ ಪೂಜೆ ನೆರವೇರಿಸಿದರು. ರಸ್ತೆ ವಿಭಜಕ ಸೇರಿದಂತೆ ಒಟ್ಟು 60 ಅಡಿ ಅಗಲದ 0.8 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ 4 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮೈಸೂರು ಮಹಾನಗರಪಾಲಿಕೆ ಕಾಮಗಾರಿ ಕೈಗೆತ್ತಿಕೊಂಡಿದೆ. ನೆಹರೂ ವೃತ್ತ (ಮುಖ್ಯ ಅಂಚೆ ಕಚೇರಿ ವೃತ್ತ)ದಿಂದ ಆಯುರ್ವೇದ…