ಮೈಸೂರು: ಜಂಬೂ ಸವಾರಿಯ ಪುಷ್ಪಾರ್ಚನೆಯ ಅಂತಿಮ ತಾಲೀಮು ಬುಧವಾರ ಅರಮನೆಯ ಆವರಣದಲ್ಲಿ 3 ಗಂಟೆ ತಡವಾಗಿ ನಡೆಯಿತು. ಅಂಬಾರಿ ಆನೆ ಅರ್ಜುನನಿಗೆ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಪುಷ್ಪಾರ್ಚನೆ ಮಾಡಿದರು. ಎಂದಿನಂತೆ ಜಂಬೂಸವಾರಿಯ ಮೆರವಣಿಗೆಯಲ್ಲಿ ಬಲರಾಮ ಮುಂಚೂಣಿಯಲ್ಲಿ ಸಾಗಿದನು. ನಂತರ ಅಭಿಮನ್ಯು ಹಿಂದೆ ಗಜಪಡೆ ಇತರೆ ಸದಸ್ಯರು ಹೆಜ್ಜೆ ಹಾಕುತ್ತಿದ್ದಂತೆ ಪೊಲೀಸ್ ತುಕಡಿಗಳು ಶಿಸ್ತಿನಿಂದ ಪಥಸಂಚಲನ ನಡೆಸಿ, ಗೌರವ ವಂದನೆ ಸಲ್ಲಿಸಿದವು. ಅಂಬಾರಿಗೆ ಪುಷ್ಪಾರ್ಚನೆ ಮಾಡುತ್ತಿದ್ದಂತೆಯೇ ಪೊಲೀಸ್ ಬ್ಯಾಂಡ್ ವಾದನ ತಂಡದ ಸದಸ್ಯರು ರಾಷ್ಟ್ರಗೀತೆ ನುಡಿಸಿದರು. ಫಿರಂಗಿದಳದ…