ಮೈಸೂರು, ಆ.21(ಆರ್‍ಕೆ)- ಮನೆ ಮಳಿಗೆಯ ಬಾಡಿಗೆದಾರನೂ ಆದ ಹಣ್ಣಿನ ವ್ಯಾಪಾರಿ, ಹಾಡಹಗಲೇ ತನ್ನ ಮಳಿಗೆ ಮಾಲೀಕರ ಮನೆಗೆ ನುಗ್ಗಿ, ಮನೆಯಲ್ಲಿದ್ದ ವೃದ್ಧೆಯ ಬಾಯಿಗೆ ಬಟ್ಟೆ ತುರುಕಿ ಅವರ ಕೈಗಳಲ್ಲಿದ್ದ 7 ಚಿನ್ನದ ಬಳೆಗಳನ್ನು ದೋಚಿ ಪರಾರಿಯಾಗಿದ್ದು, ಕೇವಲ ಅರ್ಧಗಂಟೆ ಯಲ್ಲಿ ಲಕ್ಷ್ಮೀಪುರಂ ಠಾಣೆ ಪೊಲೀಸರು ಆತನ ಹೆಡೆಮುರಿ ಕಟ್ಟಿದ್ದಾರೆ. ಈ ಆಘಾತ ಕಾರಿ ಘಟನೆ ಮೈಸೂರಿನ ಜಿಲ್ಲಾ ನ್ಯಾಯಾ ಲಯದೆದುರು, ಚಾಮರಾಜಪುರಂನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಮೈಸೂರಿನ ಬನ್ನಿಮಂಟಪದ ಅಲೀಂ ನಗರ ನಿವಾಸಿ ಗೌಸ್ ಷರೀಫ್ ಮಗ…
ಮೈಸೂರು
ಮದುವೆ ಛತ್ರಗಳಲ್ಲಿ ಕಳವು ಮಾಡುತ್ತಿದ್ದ ಕಳ್ಳಿ ಬಂಧನ
June 24, 2018ಮೈಸೂರು: ಸಮಾರಂಭಗಳು ನಡೆಯುವ ಸಂದರ್ಭದಲ್ಲಿ ಛತ್ರಗಳಿಗೆ ತೆರಳಿ, ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥಗಳನ್ನು ಕಳವು ಮಾಡುತ್ತಿದ್ದ ಖತರ್ನಾಕ್ ಕಳ್ಳಿ, ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ. ಸರಗೂರು ಗ್ರಾಮದ ನಿವಾಸಿ ಶಶಿಕಲಾ(50), ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆಯುತ್ತಿದ್ದ ಸಮಾರಂಭವೊಂದರಲ್ಲಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದಾಗ ಲಕ್ಷ್ಮೀಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಳಿಕ ಆಕೆ ನೀಡಿದ ಮಾಹಿತಿ ಮೇರೆಗೆ ವಿವಿಧೆಡೆ ಅಡವಿಟ್ಟಿದ್ದ ಸುಮಾರು 20 ಗ್ರಾಂ ಚಿನ್ನಾಭರಣ ಹಾಗೂ 1600 ಗ್ರಾಂ ಬೆಳ್ಳಿ ಪದಾರ್ಥಗಳನ್ನು…