Tag: Lingambudhi lake

ಪರಿಸರ ಕಳಕಳಿಯುಳ್ಳವರಿಂದ ಲಿಂಗಾಂಬುದಿ ಕೆರೆ ಸ್ವಚ್ಛತಾ ಕಾರ್ಯ
ಮೈಸೂರು

ಪರಿಸರ ಕಳಕಳಿಯುಳ್ಳವರಿಂದ ಲಿಂಗಾಂಬುದಿ ಕೆರೆ ಸ್ವಚ್ಛತಾ ಕಾರ್ಯ

December 3, 2019

ಮೈಸೂರು,ಡಿ.2(ಎಂಟಿವೈ)- ಕೊಳಚೆ ನೀರು ಹಾಗೂ ಪ್ಲಾಸ್ಟಿಕ್ ವಸ್ತುಗಳಿಂದ ಮಲೀನಗೊಳ್ಳುತ್ತಿದ್ದ ಲಿಂಗಾಂಬುದಿ ಕೆರೆ ರಕ್ಷಣೆಗೆ ಸ್ಥಳೀಯರೇ ಮುಂದೆ ಬಂದಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಕೆರೆ ಆವರಣದಲ್ಲಿ ರಾಶಿ ರಾಶಿ ಬಿದ್ದಿದ್ದ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರೆ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ, ವಿಲೇವಾರಿ ಮಾಡಲಾಯಿತು. ಲಿಂಗಾಂಬುದಿ ಕೆರೆಗೆ ಸಂಪರ್ಕ ಹೊಂದಿ ರುವ ಎರಡು ರಾಜಕಾಲುವೆಗಳಿದ್ದು, ಅವು ಗಳ ಮೂಲಕ ಪರಿಸರ ಮಾರಕ ವಸ್ತು ಗಳು ಕೆರೆ ಒಡಲು ಸೇರುತ್ತಿವೆ. ಇದರಿಂದ ಕೆರೆ ನೀರು ಮಲಿನಗೊಂಡು ದುರ್ವಾಸನೆ ಬೀರುತ್ತಿದೆ. ಕೆರೆ ವಾತಾವರಣ ಕಲು…

ಲಿಂಗಾಂಬುದಿ ಕೆರೆಗೆ ಶಾಸಕ ರಾಮದಾಸ್ ಭೇಟಿ: ಕೆರೆ ಸಂರಕ್ಷಣೆ ಸಂಬಂಧ ಮುಡಾ, ಪಾಲಿಕೆ ಅಧಿಕಾರಿಗಳೊಂದಿಗೆ ಪರಿಶೀಲನೆ, ಕ್ರಮಕ್ಕೆ ಸೂಚನೆ
ಮೈಸೂರು

ಲಿಂಗಾಂಬುದಿ ಕೆರೆಗೆ ಶಾಸಕ ರಾಮದಾಸ್ ಭೇಟಿ: ಕೆರೆ ಸಂರಕ್ಷಣೆ ಸಂಬಂಧ ಮುಡಾ, ಪಾಲಿಕೆ ಅಧಿಕಾರಿಗಳೊಂದಿಗೆ ಪರಿಶೀಲನೆ, ಕ್ರಮಕ್ಕೆ ಸೂಚನೆ

June 12, 2018

ಮೈಸೂರು:  ಮೈಸೂರಿನ ಶ್ರೀರಾಂಪುರ ಮತ್ತು ರಾಮಕೃಷ್ಣನಗರ ಪ್ರದೇಶಗಳಿಗೆ ಹೊಂದಿಕೊಂಡಂತಿರುವ ಲಿಂಗಾಂಬುದಿ ಕೆರೆಗೆ ಕಲುಷಿತ ನೀರು ಸೇರುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲ ದಿನಗಳಿಂದ ಒಳಚರಂಡಿ ನೀರು ಸೋರಿಕೆಯಾಗಿ ಕೆರೆಗೆ ಹರಿಯುತ್ತಿರುವುದರಿಂದ ನೀರು ಕಲುಷಿತಗೊಂಡು ದುರ್ವಾಸನೆ ಸೂಸುವಂತಾಗಿತ್ತು. ನಿತ್ಯ ಕೆರೆ ಆವರಣದಲ್ಲಿ ವಾಯು ವಿಹಾರಕ್ಕೆ ಬರುವ ಸಾರ್ವಜನಿಕರು ಹಾಗೂ ಸುತ್ತಮುತ್ತಲ ಬಡಾವಣೆಗಳ ನಿವಾಸಿಗಳು ಕಲುಷಿತ ನೀರಿನ ದುರ್ವಾಸನೆಯಿಂದ ಕಿರಿಕಿರಿ ಅನುಭವಿಸುವಂತೆಯೂ ಆಗಿತ್ತು. ಈ ಹಿನ್ನೆಲೆಯಲ್ಲಿ…

Translate »