ಪರಿಸರ ಕಳಕಳಿಯುಳ್ಳವರಿಂದ ಲಿಂಗಾಂಬುದಿ ಕೆರೆ ಸ್ವಚ್ಛತಾ ಕಾರ್ಯ
ಮೈಸೂರು

ಪರಿಸರ ಕಳಕಳಿಯುಳ್ಳವರಿಂದ ಲಿಂಗಾಂಬುದಿ ಕೆರೆ ಸ್ವಚ್ಛತಾ ಕಾರ್ಯ

December 3, 2019

ಮೈಸೂರು,ಡಿ.2(ಎಂಟಿವೈ)- ಕೊಳಚೆ ನೀರು ಹಾಗೂ ಪ್ಲಾಸ್ಟಿಕ್ ವಸ್ತುಗಳಿಂದ ಮಲೀನಗೊಳ್ಳುತ್ತಿದ್ದ ಲಿಂಗಾಂಬುದಿ ಕೆರೆ ರಕ್ಷಣೆಗೆ ಸ್ಥಳೀಯರೇ ಮುಂದೆ ಬಂದಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಕೆರೆ ಆವರಣದಲ್ಲಿ ರಾಶಿ ರಾಶಿ ಬಿದ್ದಿದ್ದ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರೆ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ, ವಿಲೇವಾರಿ ಮಾಡಲಾಯಿತು.

ಲಿಂಗಾಂಬುದಿ ಕೆರೆಗೆ ಸಂಪರ್ಕ ಹೊಂದಿ ರುವ ಎರಡು ರಾಜಕಾಲುವೆಗಳಿದ್ದು, ಅವು ಗಳ ಮೂಲಕ ಪರಿಸರ ಮಾರಕ ವಸ್ತು ಗಳು ಕೆರೆ ಒಡಲು ಸೇರುತ್ತಿವೆ. ಇದರಿಂದ ಕೆರೆ ನೀರು ಮಲಿನಗೊಂಡು ದುರ್ವಾಸನೆ ಬೀರುತ್ತಿದೆ. ಕೆರೆ ವಾತಾವರಣ ಕಲು ಷಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈಗಾ ಗಲೇ ಮಧ್ಯ ಯೂರೋಪ್‍ನಿಂದ ವಲಸೆ ಬಂದಿರುವ 15ಕ್ಕೂ ಹೆಚ್ಚು `ನಾರ್ಥನ್ ಶಾವೆಲ್ಲರ್’ ಬಾತುಕೋಳಿ ಜಾತಿಯ ಪಕ್ಷಿ ಸಾವನ್ನಪ್ಪಿದ್ದವು. ಸುತ್ತಮುತ್ತಲಿನ ಬಡಾ ವಣೆ ನಿವಾಸಿಗಳು, ಕಲ್ಯಾಣಮಂಟಪ ಹಾಗೂ ಮಾಂಸದ ಅಂಗಡಿಗಳ ತ್ಯಾಜ್ಯವೂ ರಾಜಕಾಲುವೆ ಮೂಲಕ ಮಳೆ ನೀರಿನಲ್ಲಿ ಟನ್‍ಗಟ್ಟಲೇ ಕೆರೆ ಸೇರುತ್ತಿತ್ತು.

ಈ ಹಿನ್ನೆಲೆಯಲ್ಲಿ ಲಿಂಗಾಂಬುದಿ ಕೆರೆ ಪರಿಸರ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿ ಸಿದ್ದ, ಹಿರಿಯ ನಾಗರಿಕರೂ, ಪರಿಸರ ಕಾಳಜಿಯುಳ್ಳ ಲಕ್ಕಿಮಾರನ್ ನೇತೃತ್ವದಲ್ಲಿ ವಿವಿಧ ಬಡಾವಣೆಗಳ 20ಕ್ಕೂ ಹೆಚ್ಚು ಮಂದಿ ಸ್ವಯಂಪ್ರೇರಣೆಯಿಂದ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸೇರಿ ಕೆರೆ ಆವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆ ಸಿದ್ದಾರೆ. ಈ ಅಭಿಯಾನದಲ್ಲಿ ರಾಜ ಕಾಲುವೆ ಮೂಲಕ ಬಂದು, ಕೆರೆ ದಡ ದಲ್ಲಿ ತೇಲುತ್ತಿದ್ದ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಬಾಟಲ್, ಥರ್ಮಾಕೋಲ್ ಸೇರಿದಂತೆ ಪರಿಸರ ಮಾರಕ ವಸ್ತುಗಳನ್ನು ಮೇಲೆತ್ತಿ ಸ್ವಚ್ಛಗೊಳಿಸಿದರು. ಸುಮಾರು ಎರಡು ಗೂಡ್ಸ್ ಆಟೋರಿಕ್ಷಾಗಳಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್ ವಸ್ತುಗಳನ್ನು ಕೆರೆ ಆವರಣದಿಂದ ಹೊರಗೆ ಸಾಗಿಸಲಾಯಿತು. ಯಾವುದೇ ಪ್ರಚಾರವಿಲ್ಲದೇ ಒಂದೇ ದಿನದಲ್ಲಿ ನಿರ್ಧ ರಿಸಿ ಕೈಗೊಳ್ಳಲಾದ ಸ್ವಚ್ಛತಾ ಅಭಿಯಾನ ದಲ್ಲಿ 20ಕ್ಕೂ ಹೆಚ್ಚು ಪರಿಸರ ಕಾಳಜಿ ಯುಳ್ಳವರು ಪಾಲ್ಗೊಂಡಿದ್ದರು.

Translate »