Tag: Mathigodu Elephant Camp

ಖಾಸಗಿ ಬಸ್ ಡಿಕ್ಕಿ: ಸಾಕಾನೆ ‘ರಂಗ’ ದುರ್ಮರಣ
ಮೈಸೂರು

ಖಾಸಗಿ ಬಸ್ ಡಿಕ್ಕಿ: ಸಾಕಾನೆ ‘ರಂಗ’ ದುರ್ಮರಣ

October 9, 2018

ಕೇರಳದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಭವಿಷ್ಯದ ಮೈಸೂರು ದಸರಾ ಅಂಬಾರಿ ಆನೆ ಆಕರ್ಷಣೆ ಹೊಂದಿದ್ದ ಸಾಕಾನೆ ರಂಗ ಇಂದು ಮುಂಜಾನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಚೌಕೂರು ವನ್ಯಜೀವಿ ವಲಯದ ಮತ್ತಿಗೋಡು ಸಾಕಾನೆ ಶಿಬಿರದ ಬಳಿ ದುರ್ಮರಣಕ್ಕೀಡಾಗಿದ್ದಾನೆ. ಕೇರಳದ ಕಣ್ಣೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಲ್ಪಕ ಟ್ರಾನ್ಸ್‍ಪೋರ್ಟ್‍ಗೆ ಸೇರಿದ ಖಾಸಗಿ ಬಸ್(ಕೆಎ01, ಎಇ7579) ಡಿಕ್ಕಿ ಹೊಡೆದ ರಭಸಕ್ಕೆ ಸಾಕಾನೆ ರಂಗನ ಬೆನ್ನು ಮೂಳೆ ಮುರಿದಿದೆ. ಬಸ್‍ನ ಒಂದು ಭಾಗವೂ ಜಖಂ ಆಗಿದೆ. ಬೆನ್ನು ಮೂಳೆ ಮುರಿತದಿಂದ…

ಪಾಪ, ನಮ್ಮ ‘ರೌಡಿ ರಂಗ’ನಿಗೆ ಇಂತಹ ಸಾವು ಬರಬಾರದಿತ್ತು…
ಮೈಸೂರು

ಪಾಪ, ನಮ್ಮ ‘ರೌಡಿ ರಂಗ’ನಿಗೆ ಇಂತಹ ಸಾವು ಬರಬಾರದಿತ್ತು…

October 9, 2018

ಮೈಸೂರು:  ರೌಡಿಸಂ ಬಿಟ್ಟು ಸಹಜ ಜೀವನಕ್ಕೆ ಮರಳಿದ ರೌಡಿಗಳು ದಾರುಣವಾಗಿ ಹತ್ಯೆಯಾಗಿ ಮರುಕ ಉಂಟುಮಾಡುವಂತಹ ಅನೇಕ ಪ್ರಕರಣಗಳನ್ನು ಕಂಡಿದ್ದೇವೆ. ಅದೇ ರೀತಿ ತನ್ನ ರೌಡಿಸಂ ಬಿಟ್ಟು ಶಾಂತ ಸ್ವರೂಪನಾಗಿ ಅಡ್ಡಾಡುತ್ತಿದ್ದ ಸಾಕಾನೆ ರಂಗ ಇಂದು ಮುಂಜಾನೆ ಖಾಸಗಿ ಬಸ್ ಡಿಕ್ಕಿಯಿಂದ ಸಾವಿಗೀಡಾಗಿ, ಎಲ್ಲರೂ ಮರುಕ ಪಡುವಂತೆ ಮಾಡಿದ್ದಾನೆ. ಈತ ಎರಡು ವರ್ಷಗಳ ಹಿಂದೆ ಸಾವನದುರ್ಗ ಅರಣ್ಯದಲ್ಲಿ ಸೆರೆಯಾಗುವ ಮುನ್ನ ‘ರೌಡಿ ರಂಗ’ ಎಂದೇ ಕರೆಯಲ್ಪಡುತ್ತಿದ್ದ. ರಾಮನಗರ, ಆನೆಕಲ್, ಬನ್ನೇರುಘಟ್ಟ ಅರಣ್ಯಗಳಲ್ಲಿ ತನಗೆ ಯಾರೂ ಸರಿಸಾಟಿ ಇಲ್ಲವೆಂಬಂತೆ ಸ್ವಚ್ಛಂದವಾಗಿ…

Translate »