ಬೆಂಗಳೂರು: ಮೈತ್ರಿ ಸರ್ಕಾರದ ಪರವಾಗಿ ಮತ ಚಲಾಯಿ ಸುವಂತೆ ಬಿಎಸ್‍ಪಿ ಶಾಸಕ ಎನ್.ಮಹೇಶ್ ಅವರಿಗೆ ಪಕ್ಷದ ವರಿಷ್ಠೆ ಮಾಯಾವತಿ ಸೂಚಿಸಿದ್ದಾರೆ. ಮೈತ್ರಿ ಸರ್ಕಾರವನ್ನು ಬೆಂಬಲಿಸಿದ್ದ ಬಹುಜನ ಸಮಾಜವಾದಿ ಪಕ್ಷದ ಶಾಸಕ ಎನ್.ಮಹೇಶ್ ವಿಶ್ವಾಸಮತ ಯಾಚನೆ ವೇಳೆ ಸದನಕ್ಕೆ ಗೈರು ಹಾಜರಾಗುವುದಾಗಿ ಭಾನುವಾರ ತಿಳಿಸಿದ್ದರು. ಈ ಮೂಲಕ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಆಘಾತ ನೀಡಿದ್ದರು. ಇದೀಗ ಶಾಸಕ ಎನ್.ಮಹೇಶ್ ಅವರ ಹೇಳಿಕೆಯಿಂದ ಆತಂಕಕ್ಕೆ ಒಳಗಾಗಿದ್ದ ಜೆಡಿಎಸ್ ನಾಯಕರು ತಕ್ಷಣ ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡರ ಮೂಲಕ ಬಿಎಸ್‍ಪಿ ವರಿಷ್ಠೆ…
ಕುರ್ಚಿ ಕಳೆದುಕೊಳ್ಳುವಾಗ ನೈತಿಕತೆ ಅರಿವಾಗಿದೆ
July 22, 2019ಬೆಂಗಳೂರು, ಜು.21- ವಿಶ್ವಾಸಮತದ ಮುನ್ನಾದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಪತ್ರಿಕಾ ಪ್ರಕಟಣೆಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಿರು ಗೇಟು ನೀಡಿದ್ದು, ಅವರ ಪೂರ್ಣ ಪಾಠ ಹೀಗಿದೆ. “ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜಕೀಯ ನೈತಿಕತೆ ಬಗ್ಗೆ ಈಗ ತಮ್ಮ ಕುರ್ಚಿ ಕಳೆದುಕೊಳ್ಳುವುದು ಖಾತ್ರಿಯಾದಾಗ ಅರಿವಾಗಿದೆ. ಚುನಾವಣೆ ಪೂರ್ವದಲ್ಲಿ ಪರಸ್ಪರ ಕಚ್ಚಾಡಿ, ಒಬ್ಬರಿಗೊಬ್ಬರು ಬಾಯಿಗೆ ಬಂದ ಹಾಗೆ ಮಾತಾಡಿ ಆಮೇಲೆ ಅಧಿಕಾರ ದಾಹದಿಂದ ಕಾಂಗ್ರೆಸ್ ಜೊತೆ ಸೇರಿ ಸರಕಾರ ರಚಿಸಿದಾಗ ನಿಮ್ಮ ನೈತಿಕತೆ ಎಲ್ಲಿತ್ತು? ಭಾರತೀಯ ಜನತಾಪಕ್ಷ ಒಂದು ರಾಷ್ಟ್ರೀಯ…
ನಾನು ಸಿಎಂ ಆಗಿದ್ದಾಗ ಕೆಲಸ ಮಾಡಿಸಿಕೊಂಡು ಬೆನ್ನಿಗೆ ಇರಿದರು
July 22, 2019ಬೆಂಗಳೂರು: ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಬಳಿ ಬರುತ್ತಿದ್ದ ಬೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್ ಮತ್ತು ಮುನಿರತ್ನಂ ನಾಯ್ಡು ತಮಗೆ ಬೇಕಾದ ಎಲ್ಲ ಕೆಲಸಗಳನ್ನು ಮಾಡಿಕೊಂಡರು. ಈಗ ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ. ಈ ಮೂಲಕ ಹೇಸಿಗೆ ತಿನ್ನುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾನುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು ಎನ್ನ ಲಾಗಿದೆ. ಇದರಿಂದಾಗಿ ರಾಜಕೀಯದಲ್ಲಿ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬುದೇ ತಿಳಿಯದಾಗಿದೆ. ನಂಬಿಕೆ…
ಯಾರೇ ಸಿಎಂ ಆದರೂ ನಾವು ಅಧಿವೇಶನಕ್ಕೆ ಬರಲ್ಲ
July 22, 2019ಬೆಂಗಳೂರು,ಜು.21-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಪಟ್ಟವನ್ನು ಜೆಡಿಎಸ್ ಬಿಟ್ಟುಕೊಟ್ಟಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಯಾರೇ ಮುಖ್ಯ ಮಂತ್ರಿ ಆದರೂ ನಾವು ನಾಳೆ ಅಧಿವೇಶನಕ್ಕೆ ಬರು ವುದಿಲ್ಲ ಎಂದು ಮುಂಬೈ ನಿಂದ ಅತೃಪ್ತ ಶಾಸಕರು ವೀಡಿಯೊ ರಿಲೀಸ್ ಮಾಡಿ ದ್ದಾರೆ. ಅತೃಪ್ತ ಶಾಸಕರಾದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಗೋಪಾ ಲಯ್ಯ, ಎ.ಹೆಚ್.ವಿಶ್ವನಾಥ್ ಅವರು ವೀಡಿಯೊದಲ್ಲಿ ಮಾತನಾಡಿದ್ದು, ನಮ್ಮ ಸ್ವಾಭಿ ಮಾನಕ್ಕೆ ಧಕ್ಕೆಯಾಗಿರುವುದರಿಂದ ಇಲ್ಲಿಗೆ ಬಂದಿದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಇಂದು ಎಂಟಿಬಿ ನಾಗರಾಜ್ ಮತ್ತು ನಾರಾಯಣಗೌಡರ ಹುಟ್ಟುಹಬ್ಬವನ್ನು ಆಚರಿ…
ಮಧ್ಯಂತರ ಚುನಾವಣೆಗೆ ಸದಾನಂದಗೌಡ ವಿರೋಧ
July 22, 2019ಬೆಂಗಳೂರು, ಜು.21- ರಾಜ್ಯ ರಾಜಕೀಯದಲ್ಲಿ ಬಿಕ್ಕಟ್ಟು ತಲೆದೋರಿ ರುವಂತೆ ಮಧ್ಯಂ ತರ ಚುನಾವಣೆಗೆ ಕೇಂದ್ರ ರಾಸಾಯ ನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಂತರ ಚುನಾವಣೆಯಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆ ಬರುತ್ತದೆ. ಬಿಜೆಪಿ ಸರ್ಕಾರ ಬಂದರೆ ಎಲ್ಲದಕ್ಕೂ ಅಂತ್ಯ ಬೀಳುತ್ತದೆ ಎಂದರು. ಬಿಜೆಪಿ ಸದನದಲ್ಲಿ ಪ್ರಜಾತಂತ್ರಕ್ಕೆ ಗೌರವ ಕೊಟ್ಟು ನಡೆದು ಕೊಳ್ಳುತ್ತಿದೆ. ಮೈತ್ರಿ ಪಕ್ಷಗಳಿಗೆ ಬಹುಮತ ಇಲ್ಲ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಕಾಂಗ್ರೆಸ್-ಜೆಡಿಎಸ್ ಶಾಸಕರ ಸಂಖ್ಯೆ…
ಖಂಡಿತ ಮೈತ್ರಿ ಸರ್ಕಾರ ಉಳಿಯುತ್ತೆ
July 22, 2019ಚಿಕ್ಕಬಳ್ಳಾಪುರ, ಜು.21- ಸಮ್ಮಿಶ್ರ ಸರ್ಕಾರ ಉಳಿಯುತ್ತೋ, ಉರುಳುತ್ತೋ ಅಂತ ಎಲ್ಲರಿಗೂ ಟೆನ್ಷನ್ ಶುರುವಾಗಿದೆ. ಆದರೆ ಹಾಸನ ಸಂಸದ, ಜೆಡಿಎಸ್ ಪಕ್ಷದ ಯುವ ನಾಯಕ ಪ್ರಜ್ವಲ್ ರೇವಣ್ಣ ಅವರು ಖಂಡಿತ ಸರ್ಕಾರ ಉಳಿಯುತ್ತದೆ. ನಾಳೆ ಕಾದು ನೋಡಿ ಅಂತ ಆತ್ಮವಿಶ್ವಾಸದ ಮಾತುಗಳನ್ನಾ ಡಿದ್ದಾರೆ. ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾ ರ್ಟಿಗೆ ಭೇಟಿ ನೀಡಿ ಶಾಸಕರೊಂದಿಗೆ ಮಾತುಕತೆ ನಡೆಸಿ, ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಎಲ್ಲಾ ಅತೃಪ್ತ ಶಾಸಕ…
ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ರಾಜಕೀಯ ನಿವೃತ್ತಿ ಘೋಷಣೆ
July 22, 2019ತುಮಕೂರು, ಜು.21-ಕಾಂಗ್ರೆಸ್ ನಾಯಕ, ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಕೆ.ಎನ್. ರಾಜಣ್ಣ ರಾಜಕೀಯ ನಿವೃತ್ತಿ ಘೋಷಣೆ ಮಾಡಿದರು. 2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎದುರು ಸೋಲು ಅನುಭವಿಸಿದ್ದರು. ಭಾನುವಾರ ತುಮಕೂರಿನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಕೆ.ಎನ್.ರಾಜಣ್ಣ, ಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸುವು ದಿಲ್ಲ ಎಂದು ಘೋಷಣೆ ಮಾಡಿದರು. “ಮುಂದೆ ಮಧುಗಿರಿ ಕ್ಷೇತ್ರದಲ್ಲಿ ಯಾರೇ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಜಿ ಸಲ್ಲಿಸಲು ಮುಂದೆ ಬಂದರೆ ನಾನು ಬೆಂಬಲಿಸುತ್ತೇನೆ. ನಾನಂತೂ ಸ್ಪರ್ಧೆ ಮಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಮಧುಗಿರಿ…
ತಾಂತ್ರಿಕ ದೋಷ ನಿವಾರಣೆ: ಚಂದ್ರಯಾನ-2 ಉಡಾವಣೆಗೆ ಸಿದ್ಧ
July 22, 2019ಶ್ರೀಹರಿಕೋಟಾ,ಜು.21-ಭಾರತೀಯ ಹೆಮ್ಮೆಯ ಬಾಹ್ಯಾಕಾಶ ಯೋಜನೆ ಚಂದ್ರಯಾನ-2 ಯೋಜನೆಯ ತಾಂತ್ರಿಕ ದೋಷ ನಿವಾರಣೆಯಾಗಿದ್ದು, ನೌಕೆ ಸಂಪೂರ್ಣ ಸಿದ್ಧವಾಗಿದೆ ಎಂದು ಇಸ್ರೋ ಮುಖ್ಯಸ್ಥ ಕಿರಣ್‍ಕುಮಾರ್ ಹೇಳಿದ್ದಾರೆ. ಈ ಕುರಿತಂತೆ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಕಿರಣ್‍ಕುಮಾರ್ ಅವರು, ಈ ಹಿಂದೆ ಕಾಣಿಸಿಕೊಂಡಿದ್ದ ಎಲ್ಲ ತಾಂತ್ರಿಕ ದೋಷಗಳನ್ನು ನಿವಾರಣೆ ಮಾಡಿದ್ದಷ್ಟೇ ಅಲ್ಲದೇ ಪ್ರಾಯೋಗಿಕ ಪರೀಕ್ಷೆ ಕೂಡ ನಡೆಸಲಾಗಿದೆ. ಎಲ್ಲ ಪರೀಕ್ಷೆಗಳೂ ಯಶಸ್ವಿಯಾಗಿದ್ದು, ನಾವು ಉಡಾವಣೆಗೆ ಸಿದ್ಧವಾಗಿದ್ದೇವೆ ಎಂದು ಹೇಳಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ರೋ ಕೂಡ ಟ್ವೀಟ್ ಮಾಡಿದ್ದು, ಚಂದ್ರಯಾನ-2 ನೌಕೆಯನ್ನು ಹೊತ್ತು…
ಸಣ್ಣ ಸೇವೆಯಲ್ಲೂ ಆನಂದ ಪಡುವವನೇ ನಿಜವಾದ ಸೇವಕ
July 22, 2019ಮೈಸೂರು,ಜು.21(ಎಂಕೆ)-ಸಣ್ಣ ಸಣ್ಣ ಸೇವೆಯಲ್ಲೂ ಆನಂದ ಪಡುವವನೇ ನಿಜವಾದ ಸೇವಕ ಎಂದು ಜವಳಿ ಮತ್ತು ಕೈಮಗ್ಗ ಇಲಾಖೆ ಆಯುಕ್ತ ಡಾ.ಎಂ.ಆರ್.ರವಿ ಹೇಳಿದರು. ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಹೋಟೆಲ್‍ನಲ್ಲಿ ನಡೆದ ರೋಟರಿ ಹೆರಿಟೇಜ್ ಕ್ಲಬ್ ಮೈಸೂರಿನ 2019-20ನೇ ಸಾಲಿನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಇತರೆ ಪದಾಧಿ ಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಳ್ಳೆಯ ಹೃದಯವಂತರಿಂದ ಸಮಾಜದಲ್ಲಿ ಒಳ್ಳೆಯ ಕೆಲಸವಾಗುತ್ತದೆ. ರೋಟರಿ ಸಂಸ್ಥೆ ಈ ನಿಟ್ಟಿನಲ್ಲಿ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು. ಸಮಾಜ ನಮಗೆ…
ವೃದ್ಧೆ ವಂಚಿಸಿ ಚಿನ್ನಾಭರಣ, ನಗದು ದೋಚಿದ ದುಷ್ಕರ್ಮಿ
July 22, 2019ಮೈಸೂರು, ಜು.21(ಎಸ್‍ಬಿಡಿ)- ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಬಂದಿದ್ದ ವೃದ್ಧೆಯನ್ನು ವಂಚಿಸಿ, ಚಿನ್ನಾಭರಣ ಹಾಗೂ ನಗದನ್ನು ದೋಚಿರುವ ಘಟನೆ ನಡೆದಿದೆ. ಹೆಚ್.ಡಿ.ಕೋಟೆ ತಾಲೂಕು ಗಂಗರ ಹೊಸಹಳ್ಳಿ ಗ್ರಾಮದ ಪುಟ್ಟಮ್ಮ(65) ವಂಚಕನ ಬಲೆಗೆ ಸಿಲುಕಿ ತಾವು ದರಿಸಿದ್ದ 38ಗ್ರಾಂ ಚಿನ್ನದ ಸರ, 8ಗ್ರಾಂ ಓಲೆ ಹಾಗೂ 1,100ರೂ. ಹಣವನ್ನು ಕಳೆದುಕೊಂಡಿದ್ದಾರೆ. ಮಧುಮೇಹ ಪರೀಕ್ಷೆಗೆಂದು ಜು.12 ರಂದು ಕೆ.ಆರ್.ಆಸ್ಪತ್ರೆಗೆ ಬಂದಿದ್ದ ಪುಟ್ಟಮ್ಮ ಅವರನ್ನು ಸುಮಾರು 40 ವರ್ಷದ ಅಪ ರಿಚಿತನೊಬ್ಬ ಮಾತನಾಡಿಸಿ, ಪರಿಚಯ ಮಾಡಿಕೊಂಡಿದ್ದಾನೆ. ನಿಮಗೆ ಸರ್ಕಾರದ ಕಡೆಯಿಂದ ಹಣಕಾಸು ನೆರವು ಕೊಡಿಸು…










