ಮೈಸೂರು,ಜು.24(ಪಿಎಂ)- ಉಡುಪಿಯ ಶ್ರೀ ಪೇಜಾ ವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ 81ನೇ ಚಾತುರ್ಮಾಸ್ಯ ವ್ರತ ಮೈಸೂರಿನ ಶ್ರೀಕೃಷ್ಣಧಾಮ ದಲ್ಲಿ ಜು.26ರಿಂದ 51 ದಿನಗಳ ಕಾಲ ನಡೆಯಲಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಕೃಷ್ಣ ಟ್ರಸ್ಟ್ ಅಧ್ಯ ಕ್ಷರೂ ಆದ ಚಾತುರ್ಮಾಸ್ಯ ಆಡಳಿತ ಸಮಿತಿ ಅಧ್ಯಕ್ಷ ಆರ್. ವಾಸುದೇವ ಭಟ್, ಹಿರಿಯ ಸ್ವಾಮೀಜಿ ಅವರ ಜೊತೆ ಪೇಜಾವರ ಮಠದ ಕಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರೂ ತಮ್ಮ…
‘ಸುಧರ್ಮ’ ಸಂಪಾದಕ ಕೆ.ವಿ.ಸಂಪತ್‍ಕುಮಾರ್ ಅವರಿಗೆ `ಶಿವರಾತ್ರೀಶ್ವರ ಮಾಧ್ಯಮ’ ಪ್ರಶಸ್ತಿ ಪ್ರದಾನ
July 23, 2019ಮೈಸೂರು: ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ರುವ ಮೈಸೂರಿನ ‘ಸುಧರ್ಮ’ ಸಂಸ್ಕೃತ ದಿನಪತ್ರಿಕೆಯ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಅವರಿಗೆ ಈ ಬಾರಿಯ ಜೆಎಸ್‍ಎಸ್ ಮಹಾವಿದ್ಯಾಪೀಠ ಕೊಡ ಮಾಡುವ ಶ್ರೀಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ನೀಡಿ ಸೋಮವಾರ ಗೌರವಿಸಲಾಯಿತು. 1970ರಲ್ಲಿ ವರದರಾಜ ಅಯ್ಯಂಗಾರ್ ಅವರಿಂದ ಸ್ಥಾಪಿಸಲ್ಪಟ್ಟು ಅವರ ನಂತರ ಕಳೆದ 30 ವರ್ಷಗಳಿಂದ ಅವರ ಪುತ್ರ ಕೆ.ವಿ. ಸಂಪತ್‍ಕುಮಾರ್ ಅವರು ಮುನ್ನಡೆಸಿ ಕೊಂಡು ಬರುತ್ತಿರುವ ವಿಶ್ವದ ಏಕೈಕ ಸಂಸ್ಕೃತ ದಿನಪತ್ರಿಕೆ ಸುಧರ್ಮ. ಅನೇಕ ಎಡರು ತೊಡರುಗಳ ನಡುವೆಯೂ ಸಕಾಲಕ್ಕೆ ಪ್ರತಿ…
ಶಾಲಾ ದೆಸೆಯಲ್ಲಿಯೇ ಮಕ್ಕಳಿಗೆ ಗ್ರಾಹಕರ ಕಾಯ್ದೆ ಕುರಿತ ಅರಿವು
July 23, 2019ಮೈಸೂರು: ಗ್ರಾಹಕ ಎಂದರೆ ಯಾರು? ಆತ ಹೇಗೆ ಮೋಸ, ವಂಚನೆಗಳಿಗೆ ಒಳಗಾಗುತ್ತಾನೆ? ಅದಕ್ಕೆ ಕಾರಣ ಮತ್ತು ಪರಿಹಾರವೇನು? ಎಂಬ ಬಗ್ಗೆ ಮಕ್ಕಳಿಗೆ ಅವರ ಶಾಲಾ ಹಂತದಲ್ಲಿಯೇ ಗ್ರಾಹಕ ಕಾಯ್ದೆಗಳ ಕುರಿತು ಅರಿವು ಮೂಡಿಸಲು ಜಿಲ್ಲಾ ಮಟ್ಟದಲ್ಲಿ `ಶಾಲಾ ಗ್ರಾಹಕರ ಕ್ಲಬ್’ಗಳನ್ನು ರಚಿಸಲಾಗುತ್ತಿದೆ. ಶಾಲಾ ಗ್ರಾಹಕರ ಕ್ಲಬ್‍ನಲ್ಲಿ ಆಯಾಯ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಮಕ್ಕಳು ಸದಸ್ಯರಾಗಿರುತ್ತಾರೆ. ಅವರಿಗೆ ಗ್ರಾಹಕ ಕಾಯ್ದೆಗಳ ಬಗ್ಗೆ ಶಿಕ್ಷಣ ನೀಡಿ, ಅವರು ತಮ್ಮ ಕುಟುಂಬ ಮತ್ತು ಊರಿನ ಇತರ ರಿಗೆ ಗ್ರಾಹಕ ಜಾಗೃತಿ…
ಹೆಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆಯಿಂದ ಗಿಡ ನೆಡುವ ಕಾರ್ಯಕ್ರಮ
July 23, 2019ಮೈಸೂರು: ಹೆಚ್.ಸಿ. ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆ ವತಿಯಿಂದ ಮೈಸೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯ ಕ್ರಮಕ್ಕೆ ಮೇಯರ್ ಪುಷ್ಪಲತಾ ಜಗ ನ್ನಾಥ್ ಚಾಲನೆ ನೀಡಿದರು. ಮೈಸೂರಿನ ವಾಣಿವಿಲಾಸ ಮೊಹಲ್ಲಾ ದಲ್ಲಿರುವ ಸಂಸ್ಥೆಯ ಕಚೇರಿ `ಯಶೋ ವಿಲಾಸ್’ ಎದುರು ರಸ್ತೆ ಬದಿಯಲ್ಲಿ ಗಿಡ ನೆಡುವ ಮೂಲಕ ಮೇಯರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಯಶೋ ವಿಲಾಸ್ ಎದುರಿನ ರಸ್ತೆ ಯಲ್ಲಿ 20ಕ್ಕೂ ಹೆಚ್ಚು ಗಿಡಗಳನ್ನು ನೆಡ ಲಾಯಿತು. ಕಕ್ಕೆ, ಬಸವನ…
ಪ್ರತಿಭಟನೆಗೆ ಅವಕಾಶ ನೀಡಲು ಡಿಆರ್‍ಎಫ್‍ಓಗಳಿಂದ ಸಿಸಿಎಫ್‍ಗೆ ಮನವಿ
July 23, 2019ಮೈಸೂರು: ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಉಪವಲಯ ಅರಣ್ಯಾಧಿಕಾರಿ (ಡಿಆರ್‍ಎಫ್), ಗಾರ್ಡ್, ವಾಚರ್, ಆನೆ ಮಾವುತರು, ಕಾವಾಡಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಗಳು ಎದುರಿಸುತ್ತಿರುವ ವೇತನ ತಾರತಮ್ಯ ಹೋಗಲಾಡಿಸುವಂತೆ ರಾಜ್ಯದಾದ್ಯಂತ ಜು.31ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಮೈಸೂರು ವೃತ್ತದ ಡಿಆರ್‍ಎಫ್ ಗಳು ಸೋಮವಾರ ಸಿಸಿಎಫ್ ಟಿ.ಹೀರಾ ಲಾಲ್ ಅವರಿಗೆ ಮನವಿ ಸಲ್ಲಿಸಿದರು. ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಮೈಸೂರು ವೃತ್ತದ ಸಿಸಿಎಫ್ ಟಿ.ಹೀರಾಲಾಲ್ ಅವರ ಕಚೇ ರಿಗೆ ಉಪವಲಯ…
ಜ್ಯೋತಿಷ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣ ಪತ್ರ ವಿತರಣೆ
July 23, 2019ಮೈಸೂರು: ಭಾರತೀಯ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರದ 2018-19ನೇ ಶೈಕ್ಷಣಿಕ ವರ್ಷದ ಜ್ಯೋತಿಷ್ಯ ಪರೀಕ್ಷೆಗಳಲ್ಲಿ ತೇರ್ಗಡೆಯಾದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನ ವಿತರಿಸಲಾಯಿತು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಆರಾಧ್ಯ ಮಹಾಸಭಾದಲ್ಲಿ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಧಾರವಾಡದ `ಚಿದಂಬರ’ ಪಂಚಾಂಗ ಕರ್ತ ಚಿದಂಬರ ಭಟ್ ರಾ.ಜೋಷಿ ಅವರು ಪ್ರಮಾಣ ಪತ್ರಗಳನ್ನು ವಿತರಿಸಿದರು. ಮೈಸೂರು, ಚಾಮರಾಜನಗರ, ಕುಣಿ ಗಲ್, ತುಮಕೂರು ಸೇರಿದಂತೆ ಅಡಗೂರಿನ ಶ್ರೀ ಗುರುಸಿದ್ಧನಂಜ ಶಿವಯೋಗಿ ಮಠ, ಶಿವಯೋಗಾನಂದಾಶ್ರಮ ಗುಡ್ಡದಹಳ್ಳಿ (ಆಂಧ್ರಪ್ರದೇಶ), ಬೆಂಗಳೂರು, ಕೊಪ್ಪಳ, ತುಮಕೂರು…
ಕಾಂಗ್ರೆಸ್‍ಗೆ ಸಿಎಂ ಪಟ್ಟ
July 22, 2019ಬೆಂಗಳೂರು,ಜು.21- ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಕೊನೆ ಕಸರತ್ತು ನಡೆ ಸುತ್ತಿದ್ದು, ಸರ್ಕಾರ ಉಳಿವಿಗಾಗಿ ಕಾಂಗ್ರೆಸ್‍ಗೆ ಮುಖ್ಯ ಮಂತ್ರಿ ಪಟ್ಟ ಕಟ್ಟಲು ಜೆಡಿಎಸ್ ಮುಂದಾ ಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಉಪಮುಖ್ಯಮಂತ್ರಿ ಡಾ.ಜಿ.ಪರ ಮೇಶ್ವರ್ ಅವರಲ್ಲಿ ಯಾರಾದರೊಬ್ಬರು ಸಿಎಂ ಆಗಲಿ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಕಾಂಗ್ರೆಸ್‍ಗೆ ಜೆಡಿಎಸ್ ಸಿಎಂ ಸ್ಥಾನದ ಆಫರ್ ನೀಡಿರುವುದನ್ನು ಖಚಿತಪಡಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್‍ನವರು ಯಾರಾದರೂ ಮುಖ್ಯ ಮಂತ್ರಿಯಾಗಲಿ…
ಎಲ್ಲವೂ ಇಂದು ಕೊನೆಗೊಳ್ಳಲಿದೆ
July 22, 2019ಬೆಂಗಳೂರು, ಜು.21- ವಿಶ್ವಾಸಮತ ನಿರ್ಣಯ ಮತ ಹಾಕುವ ವಿಚಾರದಲ್ಲಿ ಆಡ ಳಿತಾರೂಢ ಮೈತ್ರಿ ಸರ್ಕಾರದ ನಾಯಕರು ಹಾಗೂ ಬಿಜೆಪಿ ನಡುವಣ ವಾಕ್ ಸಮರ ನಡೆಯುತ್ತಿದೆ. ವಿಶ್ವಾಸಮತ ನಿರ್ಣಯ ವನ್ನು ಮತಕ್ಕೆ ಹಾಕುವ ಮುನ್ನ ಸಮಗ್ರ ಚರ್ಚೆ ನಡೆಯಬೇಕೆಂ ಬುದು ಕಾಂಗ್ರೆಸ್ ಬೇಡಿಕೆಯಾದರೆ, ಪ್ರಕ್ರಿಯೆಯನ್ನು ವಿನಾ ಕಾರಣ ವಿಳಂಬ ಮಾಡಲಾಗುತ್ತಿದೆ ಎಂಬುದು ಬಿಜೆಪಿಯ ಆರೋಪವಾಗಿದೆ. ಈ ಎಲ್ಲವೂ ಸೋಮವಾರ ಅಂತ್ಯಗೊಳ್ಳಲಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿನ ಪ್ರಸ್ತುತ ರಾಜಕೀಯ ಅಸ್ಥಿರತೆಗೆ ಬಿಜೆಪಿ ಹೊಣೆ. ನಮ್ಮ ಶಾಸಕರನ್ನು…
ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಅತೃಪ್ತ ಶಾಸಕರಿಗೆ ಸಿಎಂ ಕುಮಾರಸ್ವಾಮಿ ಆಹ್ವಾನ
July 22, 2019ಬೆಂಗಳೂರು, ಜು.21-ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಿಂದಿರುಗಿ ಬರುವಂತೆ ಆಹ್ವಾನ ನೀಡಿದ್ದಾರೆ. ಇಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮುಖ್ಯಮಂತ್ರಿಗಳು, ಪ್ರಜಾಪ್ರಭುತ್ವ ಹಾಗೂ ಸಂವಿ ಧಾನದ ಮೂಲ ತತ್ವ, ಆಶಯವನ್ನೇ ಬುಡಮೇಲು ಮಾಡಲು ಬಿಜೆಪಿ ಹೊರಟಿರುವುದು ಇಡೀ ದೇಶಕ್ಕೆ ಅರಿವಾಗಬೇಕು. ಈ ಸಂದರ್ಭ ದಲ್ಲಿ ನಮ್ಮಿಂದ ದೂರ ಹೋಗಿರುವ ಶಾಸಕರು ಹಿಂತಿರುಗಿ ಅಧಿವೇಶನ ದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ. ಎಲ್ಲರೂ ಹಿಂತಿರುಗಿ ಬನ್ನಿ. ಎಲ್ಲಾ ವಿಷಯಗಳ ಬಗ್ಗೆ ಒಟ್ಟಾಗಿ ಕುಳಿತು ಮುಕ್ತವಾಗಿ ಚರ್ಚಿಸೋಣ. ಪಕ್ಷ…
ವಿಶ್ವಾಸಮತ ಯಾಚನೆ ವಿಳಂಬ ಮಾಡಿದರೆ ಪ್ರಜಾತಂತ್ರಕ್ಕೆ ದ್ರೋಹ ಬಗೆದಂತೆ
July 22, 2019ಬೆಂಗಳೂರು,ಜು.21- ವಿಶ್ವಾಸಮತ ಯಾಚನೆಗೆ ನಾಳೆ (ಸೋಮವಾರ) ಸಮಯ ನಿಗದಿ ಯಾಗಿದ್ದು, ಇನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಒಂದು ವೇಳೆ ವಿಳಂಬ ಮಾಡಿದರೆ ಅದು ಪ್ರಜಾತಂತ್ರ ವ್ಯವಸ್ಥೆಗೆ ದ್ರೋಹ ಬಗೆದಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂ ರಿನ ಧವಳಗಿರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೀಗ ಎಲ್ಲರ ಗಮನ ಸುಪ್ರೀಂಕೋರ್ಟ್‍ನತ್ತ ನೆಟ್ಟಿದೆ. ನಾಳೆ ಸುಪ್ರೀಂ ಕೋರ್ಟ್ ಯಾವ ತೀರ್ಪು ನೀಡಲಿದೆ ಎಂಬುದನ್ನು ಎಲ್ಲರೂ ಕಾಯುತ್ತಿ ದ್ದಾರೆ. ಈಗಾಗಲೇ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಅತೃಪ್ತ ಶಾಸಕರನ್ನು…










