ಹೆಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆಯಿಂದ ಗಿಡ ನೆಡುವ ಕಾರ್ಯಕ್ರಮ
ಮೈಸೂರು

ಹೆಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆಯಿಂದ ಗಿಡ ನೆಡುವ ಕಾರ್ಯಕ್ರಮ

July 23, 2019

ಮೈಸೂರು: ಹೆಚ್.ಸಿ. ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆ ವತಿಯಿಂದ ಮೈಸೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯ ಕ್ರಮಕ್ಕೆ ಮೇಯರ್ ಪುಷ್ಪಲತಾ ಜಗ ನ್ನಾಥ್ ಚಾಲನೆ ನೀಡಿದರು.

ಮೈಸೂರಿನ ವಾಣಿವಿಲಾಸ ಮೊಹಲ್ಲಾ ದಲ್ಲಿರುವ ಸಂಸ್ಥೆಯ ಕಚೇರಿ `ಯಶೋ ವಿಲಾಸ್’ ಎದುರು ರಸ್ತೆ ಬದಿಯಲ್ಲಿ ಗಿಡ ನೆಡುವ ಮೂಲಕ ಮೇಯರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಯಶೋ ವಿಲಾಸ್ ಎದುರಿನ ರಸ್ತೆ ಯಲ್ಲಿ 20ಕ್ಕೂ ಹೆಚ್ಚು ಗಿಡಗಳನ್ನು ನೆಡ ಲಾಯಿತು. ಕಕ್ಕೆ, ಬಸವನ ಪಾದ, ತಬೆ ಬುಯಾ ಸೇರಿದಂತೆ ವಿವಿಧ ಜಾತಿಯ ಗಿಡ ಗಳನ್ನು ನೆಡಲಾಯಿತಲ್ಲದೆ, ವಿದ್ಯಾ ವರ್ಧಕ ಸಂಘದ ವತಿಯಿಂದ ಅವುಗಳಿಗೆ ಟ್ರೀ ಗಾರ್ಡ್‍ಗಳನ್ನು ಅಳವಡಿಸಲಾಯಿತು. ಇದೇ ವೇಳೆ `ಪರಿಸರ ಸಂರಕ್ಷಣೆ’ ಕುರಿತ ಕರ ಪತ್ರಗಳನ್ನು ಸಾರ್ವಜನಿಕರಿಗೆ ಹಂಚಲಾಯಿತು.

ರಸ್ತೆ, ವೃತ್ತಗಳಿಗೆ ಹೆಸರಿಡಿ: ಅಂದಿನ ಮೈಸೂರು ಸಂಸ್ಥಾನದಲ್ಲಿ ದೀನ-ದಲಿ ತರು ಹಾಗೂ ಹಿಂದುಳಿದ ವರ್ಗಗಳ ಏಳಿ ಗೆಗೆ ಶ್ರಮಿಸಿದ ಕೆ.ಹೆಚ್.ರಾಮಯ್ಯ ಅವರ ಹೆಸರನ್ನು ಮೈಸೂರಿನ ಯಾವುದಾದರೂ ಒಂದು ವೃತ್ತಕ್ಕೆ ನಾಮಕರಣ ಮಾಡಬೇಕು. ಹೆಚ್.ಸಿ.ದಾಸಪ್ಪ ವೃತ್ತದಲ್ಲಿ ದಾಸಪ್ಪ ನವರ ಹೆಸರು ಸೂಚಿಸುವ ನಾಮಫಲಕ ದುರಸ್ತಿ ಗೊಳಿಸಬೇಕು. ಜೊತೆಗೆ ಸ್ವಾತಂತ್ರ್ಯ ಹೋರಾಟ ಗಾರರಾದ ಯಶೋಧರ ದಾಸಪ್ಪ, ಹೆಚ್.ಸಿ. ದಾಸಪ್ಪ ಹಾಗೂ ಹೆಚ್.ಡಿ.ತುಲಸೀ ದಾಸಪ್ಪ ಅವರ ಹೆಸರುಗಳನ್ನು ಮೈಸೂ ರಿನ ರಸ್ತೆಗಳಿಗೆ ನಾಮಕರಣ ಮಾಡ ಬೇಕೆಂದು ಸಂಸ್ಥೆ ವತಿಯಿಂದ ಮೇಯರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಮನವಿ ಸ್ವೀಕ ರಿಸಿ ಮಾತನಾಡಿದ ಮೇಯರ್ ಪುಷ್ಪ ಲತಾ ಜಗನ್ನಾಥ್, ಯಾವ ರಸ್ತೆ ಹಾಗೂ ವೃತ್ತಗಳಿಗೆ ಇನ್ನೂ ಹೆಸರು ನಾಮಕರಣ ಮಾಡಿಲ್ಲ ಎಂಬುದನ್ನು ಪರಿಶೀಲಿಸಿ ಈ ಮಹನೀಯರ ಹೆಸರುಗಳನ್ನು ನಾಮಕರಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ಎಲ್ಲಾ ಮಹನೀಯರು ಸ್ವಾತಂತ್ರ್ಯದ ಬಳಿಕ ಶ್ರೀಸಾಮಾನ್ಯರಿಗಾಗಿ ರಾಜಕಾರಣ ಮಾಡಿದ ಧೀಮಂತ ನಾಯಕರು. ಇವರ ರಾಜ ಕೀಯ ಆದರ್ಶಗಳನ್ನು ಇಂದಿನವರು ಅಳ ವಡಿಸಿಕೊಳ್ಳಬೇಕಿದೆ ಎಂದು ನುಡಿದರು.

ಸಂಸ್ಥೆ ಅಧ್ಯಕ್ಷ ಡಾ.ಕೆ.ಮಹದೇವ್ ಮಾತ ನಾಡಿ, ದಾಸಪ್ಪ ಹಾಗೂ ಯಶೋಧರ ದಾಸಪ್ಪ ಅವರು ರಾಜಕಾರಣಿಗಳಾಗಿ ಸಾಮಾಜಿಕ ಕಳಕಳಿಯಿಂದ ಜನಸಾಮಾನ್ಯರ ಸಂಕಷ್ಟ ಗಳಿಗೆ ಸ್ಪಂದಿಸುತ್ತಿದ್ದನ್ನು ಸ್ವತಃ ಕಂಡಿದ್ದೇನೆ. ಪ್ರಸ್ತುತ ಪರಿಸರ ಸಂರಕ್ಷಣೆಗೆ ಸಮಾಜ ಒತ್ತು ನೀಡಬೇಕಿದ್ದು, ಇದು ಕೇವಲ ಮರ-ಗಿಡಗಳ ವಿಚಾರ ಎಂದು ಲಘುವಾಗಿ ಸ್ವೀಕರಿಸದೆ, ಪರಿಸರವಿದ್ದರೆ ನಾವು ಎಂಬ ಭಾವನೆಯಲ್ಲಿ ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು ಎಂದರು. ಪಾಲಿಕೆ ಸದಸ್ಯೆ ಭಾಗ್ಯ ಮಹದೇಶ್, ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗುಂಡಪ್ಪಗೌಡ, ಕಾರ್ಯ ದರ್ಶಿ ಪಿ.ವಿಶ್ವನಾಥ್, ಸಂಸ್ಥೆ ಕಾರ್ಯದರ್ಶಿ ಸರೋಜ ತುಳಸೀದಾಸ್ ಇನ್ನಿತರರಿದ್ದರು.

Translate »