ನಾಳೆಯಿಂದ ಮೈಸೂರಲ್ಲಿ ಪೇಜಾವರ ಶ್ರೀ ಚಾತುರ್ಮಾಸ್ಯ
ಮೈಸೂರು

ನಾಳೆಯಿಂದ ಮೈಸೂರಲ್ಲಿ ಪೇಜಾವರ ಶ್ರೀ ಚಾತುರ್ಮಾಸ್ಯ

July 25, 2019

ಮೈಸೂರು,ಜು.24(ಪಿಎಂ)- ಉಡುಪಿಯ ಶ್ರೀ ಪೇಜಾ ವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ 81ನೇ ಚಾತುರ್ಮಾಸ್ಯ ವ್ರತ ಮೈಸೂರಿನ ಶ್ರೀಕೃಷ್ಣಧಾಮ ದಲ್ಲಿ ಜು.26ರಿಂದ 51 ದಿನಗಳ ಕಾಲ ನಡೆಯಲಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಕೃಷ್ಣ ಟ್ರಸ್ಟ್ ಅಧ್ಯ ಕ್ಷರೂ ಆದ ಚಾತುರ್ಮಾಸ್ಯ ಆಡಳಿತ ಸಮಿತಿ ಅಧ್ಯಕ್ಷ ಆರ್. ವಾಸುದೇವ ಭಟ್, ಹಿರಿಯ ಸ್ವಾಮೀಜಿ ಅವರ ಜೊತೆ ಪೇಜಾವರ ಮಠದ ಕಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರೂ ತಮ್ಮ 32ನೇ ಚಾತುರ್ಮಾಸ್ಯ ವ್ರತ ಕೈಗೊಳ್ಳಲಿದ್ದಾರೆ ಎಂದರು. ಜು.26ರಂದು ಸ್ವಾಮೀಜಿ ಗಳಿಬ್ಬರೂ ಮೈಸೂರಿಗೆ ಆಗಮಿಸುವರು. ಅಂದು ಸಂಜೆ 4ಕ್ಕೆ ಸರಸ್ವತಿಪುರಂನ ಅಗ್ನಿಶಾಮಕದಳ ಎದುರಿನಿಂದ ಏರ್ಪ ಡಿಸಿರುವ ವಿರಾಟ್ ಶೋಭಾಯಾತ್ರೆ ಮೂಲಕ ಶ್ರೀಗಳನ್ನು ಸಾಹುಕಾರ್ ಚನ್ನಯ್ಯ ರಸ್ತೆಯಲ್ಲಿರುವ ಶ್ರೀ ಕೃಷ್ಣಧಾಮಕ್ಕೆ ಕರೆತರಲಾಗುವುದು. ಶೋಭಾಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು, ಭಜನ ಮಂಡಳಿಗಳು ಸೇರಿದಂತೆ 2ರಿಂದ 3 ಸಾವಿರ ಭಕ್ತ ಸಮೂಹ ಪಾಲ್ಗೊಳ್ಳಲಿದೆ. ಬಳಿಕ ಕೃಷ್ಣಧಾಮ ದಲ್ಲಿ ಸಂಜೆ 6ಕ್ಕೆ ಸ್ವಾಗತ ಸಮಾರಂಭ ಹಮ್ಮಿಕೊಂಡಿದ್ದು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಉದ್ಘಾಟಿಸಲಿದ್ದಾರೆ. ಶಾಸಕ ಎಸ್.ಎ.ರಾಮದಾಸ್ ಅಧ್ಯಕ್ಷತೆ ವಹಿಸಲಿದ್ದು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ವಿವರಿಸಿದರು.

ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ 89 ವರ್ಷ ವಯಸ್ಸು. 8ನೇ ವರ್ಷ ವಯಸ್ಸಿನಲ್ಲೇ ದೀಕ್ಷೆ ಪಡೆದರು. ಮೈಸೂ ರಿನಲ್ಲಿ ಇದು ಅವರ 4ನೇ ಚಾತುರ್ಮಾಸ್ಯ ವ್ರತ. ಗುರು-ಶಿಷ್ಯರಿ ಬ್ಬರೂ ಒಂದೇ ಸ್ಥಳದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿ ರುವುದು ವಿಶೇಷ. ಈ ಸಂದರ್ಭ ಪ್ರತಿದಿನ ಸಾಂಸ್ಕøತಿಕ ಕಾರ್ಯಕ್ರಮ, ವಿದ್ವಾಂಸರಿಂದ ಉಪನ್ಯಾಸ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಸೆ.14ರವರೆಗೆ ಜರು ಗಲಿವೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರತಿದಿನ ಸಂಜೆ 4ರಿಂದ 5ರವರೆಗೆ ಭಜನೆ, ಸಂಜೆ 5ರಿಂದ 7ರವರೆಗೆ ಗಾನಸಿರಿ-ವೇದಾಂತ ಲಹರಿ, ಸಂಜೆ 7ರಿಂದ 7.30ರವರೆಗೆ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಯವರಿಂದ ಅನುಗ್ರಹ ಸಂದೇಶ, ಬಳಿಕ ರಾತ್ರಿ 8ರವರೆಗೆ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಂದ `ಮಹಾಭಾರತ ಅನುಗ್ರಹ ಸಂದೇಶ’ ಇರಲಿದೆ ಎಂದರು.

ಸಮಾಜ ಸೇವಾ ಚಟುವಟಿಕೆಗಳು: ಸಮಾಜ ಸೇವಕ ಕೆ.ಎಸ್.ಗುರುರಾಜ್ ಮಾತನಾಡಿ, 81ನೇ ಚಾತುರ್ಮಾಸ್ಯ ವ್ರತದ ಅಂಗವಾಗಿ ಶ್ರೀಗಳು ಮೆಚ್ಚುವ ಸಮಾಜ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಜು.26ರಿಂದ ಸೆ.14ರವರೆಗೆ ಸಂಜೆ 5.30ರಿಂದ 7ರವರೆಗೆ ಕೃಷ್ಣಧಾಮ ದಲ್ಲಿ ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣೆ ಶಿಬಿರ ನಡೆ ಯಲಿವೆ ಎಂದರು. ಇದರ ಜೊತೆಗೆ ಭಾನುವಾರ ಕೃಷ್ಣಧಾಮ ಸೇರಿದಂತೆ ಮೈಸೂರಿನ ಅನೇಕ ಸ್ಥಳಗಳಲ್ಲಿ ವಿಶೇಷ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುವುದು. ಚಾತುರ್ಮಾಸ್ಯದ ಅವಧಿಯಲ್ಲಿ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ 810 ಬಾಟಲಿ ರಕ್ತ ಸಂಗ್ರಹಿಸಿ ನೀಡಲು ವ್ಯವಸ್ಥೆ ಮಾಡ ಲಾಗುವುದು. ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲೂ 9 ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲು ಉದ್ದೇಶಿಸಲಾಗಿದೆ. ಜೊತೆಗೆ ಆಯುರ್ವೇದ ಹಾಗೂ ವಿವಿಧ ಜಾತಿಯ ಗಿಡಗಳು ಸೇರಿದಂತೆ ಸಾವಿರ ಗಿಡಗಳನ್ನು ಮೈಸೂರಿನ ವಿವಿಧ ಭಾಗಗಳಲ್ಲಿ ನೆಡಲು ಉದ್ದೇಶಿಸಿದ್ದು, 20 ಸಾವಿರ ಬೀಜದುಂಡೆಗಳನ್ನು ವಿತರಣೆ ಮಾಡಲಾಗುವುದು ಎಂದು ವಿವರಿಸಿದರು.

ಚಾತುರ್ಮಾಸ್ಯ ಆಡಳಿತ ಸಮಿತಿ ಕಾರ್ಯಾಧ್ಯಕ್ಷರಾದ ಎಂ.ಕೃಷ್ಣದಾಸ್ ಪುರಾಣಿಕ್, ರವಿಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ಪಿ.ಜಯರಾಮ ಭಟ್ಟ, ಕಾರ್ಯದರ್ಶಿ ಹೆಚ್.ಬಿ.ರಮಾಕಾಂತ್ ಸುದ್ದಿಗೋಷ್ಠಿಯಲ್ಲಿದ್ದರು.

Translate »