ಬೆಂಗಳೂರು, ಜು.20(ಕೆಎಂಶಿ)-ಸರ್ಕಾರ ಉಳಿಸಿಕೊಳ್ಳುವ ಆಸೆಯನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಕೈ ಬಿಟ್ಟಿದ್ದರೂ, ರಾಜ್ಯದ ಕೆಲವು ಕಾಂಗ್ರೆಸ್ ನಾಯಕರು ಮಾತ್ರ ಕೊನೆಯ ಕಸರತ್ತು ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಅವರಲ್ಲಿ ಸರ್ಕಾರ ಉಳಿಸಲು ಯಾವುದೇ ಅಸ್ತ್ರ ಉಳಿದಿಲ್ಲ. ಆದರೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮಾತ್ರ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಉಳಿಸಲೇಬೇಕೆಂದು ಪಣ ತೊಟ್ಟಂತೆ ಹೋರಾಟ ನಡೆಸಿದ್ದಾರೆ. ಅತ್ಯಂತ ಗೌಪ್ಯವಾಗಿ ಕಾರ್ಯಚಟುವಟಿಕೆ ಮಾಡುತ್ತಿದ್ದು, ಭಿನ್ನರ ಗುಂಪನ್ನೇ ವಿಭಜಿಸಿ ಹೊರ ತರುವ ಪ್ರಯತ್ನ ಮಾಡಿದ್ದಾರೆ. ಆದರೆ ಇದರಲ್ಲಿ ಎಷ್ಟು…
ಶಾಸಕ ರಾಮಲಿಂಗಾರೆಡ್ಡಿ ಮೂಲಕ ಅತೃಪ್ತರಿಗೆ ಗಾಳ
July 21, 2019ಬೆಂಗಳೂರು, ಜು.20- ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಬೆಂಗಳೂರಿನಲ್ಲಿಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮುಂಬೈಯಲ್ಲಿ ಬೀಡುಬಿಟ್ಟಿರುವ ಅತೃಪ್ತ ಶಾಸಕರನ್ನು ರಾಮಲಿಂಗಾರೆಡ್ಡಿ ಮೂಲಕ ಸಂಪರ್ಕಿಸುವ ಪ್ರಯತ್ನ ವನ್ನು ದೇವೇಗೌಡರು ಮಾಡಿದರು, ಆದರೆ ಅತೃಪ್ತ ಶಾಸಕರು ರೆಡ್ಡಿ ಅವರ ಮೊಬೈಲ್ ಕರೆ ಸ್ವೀಕರಿಸದ ಕಾರಣ ಈ ಪ್ರಯ ತ್ನವೂ ವಿಫಲವಾಗಿದೆ ಎಂದು ಮೂಲಗಳು ತಿಳಿಸಿವೆ. ದೇವೇಗೌಡರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ರೆಡ್ಡಿ, ನನಗೆ ಉಪಮುಖ್ಯಮಂತ್ರಿ ಹುದ್ದೆ ಬೇಡ. ದೇವೇ ಗೌಡರ ಜೊತೆ ನಡೆಸಿದ…
ರಾಜಕೀಯ ಬಿಕ್ಕಟ್ಟು: ಅಂತರ ಕಾಯ್ದುಕೊಂಡ ಅಮಿತ್ ಶಾ, ಬಿಎಸ್‍ವೈ ಹೆಗಲಿಗೆ ಪೂರ್ಣ ಹೊಣೆ
July 21, 2019ಬೆಂಗಳೂರು, ಜು.20- ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದಿನದಿನಕ್ಕೆ ಹೊಸ ತಿರುವು ತೆಗೆದು ಕೊಳ್ಳುತ್ತಿದೆ. ಅದೇ ವೇಳೆ ಬಿಜೆಪಿ ಕೇಂದ್ರ ರಾಜಕೀಯ ನಾಯಕರು ಹೆಚ್.ಡಿ.ಕುಮಾರ ಸ್ವಾಮಿ ಸರ್ಕಾರದ ಬಿಕ್ಕಟ್ಟಿನಿಂದ ತಮ್ಮದೇ ಅಂತರ ಕಾಯ್ದುಕೊಂಡಿದ್ದು ಯಾವುದೇ ತೀರ್ಮಾನ ತೆಗೆದುಕೊಳ್ಳಲು ರಾಜ್ಯ ಬಿಜೆಪಿ ನಾಯಕರಿಗೇ ಸ್ವತಂತ್ರ ಅವಕಾಶ ಕಲ್ಪಿಸಿದ್ದಾರೆ. ಇದೇ ವೇಳೆ ಮೈತ್ರಿ ಸರ್ಕಾರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಪರ ನಿಲುವು ತಾಳಿದೆ ಎನ್ನಲಾಗುತ್ತಿದ್ದು ಇದು ಕೇಂದ್ರ ನಾಯಕರಿಗೆ ಸವಾಲಾಗಿ ಪರಿಣಮಿಸಿದೆ. “ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ವಿಶ್ವಾಸಮತ ಸಾಬೀತಿಗೆ ವಿಳಂಬ…
ಮಾನ ಇದ್ದರೆ ಸೋಮವಾರ ಸದನಕ್ಕೆ ಬಂದು ನನ್ನ ವಿರುದ್ಧ ಹಕ್ಕುಚ್ಯುತಿ ಮಂಡಿಸಿ
July 21, 2019ಮೈಸೂರು, ಜು.20-ನನ್ನ ಮೇಲೆ ಮಾನ ನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿರುವ ಶಾಸಕ ಎ. ಹೆಚ್. ವಿಶ್ವನಾಥ್ ಅವ ರಿಗೆ ಮಾನ ಇದ್ದರೆ ಸೋಮವಾರ ಸದನಕ್ಕೆ ಬಂದು ನನ್ನ ವಿರುದ್ಧ ಹಕ್ಕು ಚ್ಯುತಿ ಮಂಡಿಸಲಿ ಎಂದು ಪ್ರವಾ ಸೋದ್ಯಮ ಸಚಿವ ಸಾ.ರಾ.ಮಹೇಶ್ ಸವಾಲು ಹಾಕಿದ್ದಾರೆ. ಮೈಸೂರಿನ ತಮ್ಮ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿದ ಅವರು, ವಿಶ್ವನಾಥ್ ತಾನು ಕಳಂಕ ರಹಿತ ಎಂದು ಮುಂಬೈ ನಲ್ಲಿ ಕುಳಿತು ಹೇಳಿದರೆ ಸಾಲದು. ಸದನಕ್ಕೆ ಬಂದು ಹೇಳಲಿ ನೋಡೋಣ. ನನ್ನ ಆರೋ ಪದಲ್ಲಿ…
ಮುಖ್ಯಮಂತ್ರಿಗೆ ಮತ್ತೊಂದು ಸಂಕಷ್ಟ
July 21, 2019ಬೆಂಗಳೂರು,ಜು.20-ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿ ಸುಮಾರು 4 ಎಕರೆ ಭೂಮಿಯ ಡಿ-ನೋಟಿಫಿಕೇಷನ್ ಮಾಡಿದ್ದರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಜನಪ್ರತಿನಿಧಿಗಳ ನ್ಯಾಯಾಲಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ 19 ಆರೋಪಿಗಳನ್ನು ವಿಚಾರಣೆ ನಡೆಸುವಂತೆ ಆದೇಶಿಸಿದೆ. ಈ ಹಿಂದೆ 2006-07ರ ಅವಧಿಯಲ್ಲಿ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ ಬನಶಂಕರಿ ಬಡಾವಣೆಯ 4 ಎಕರೆ ಭೂಮಿಯನ್ನು ಡಿ-ನೋಟಿಫೈ ಮಾಡಿದ್ದರೆಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಎಂ.ಎಸ್.ಮಹದೇವಸ್ವಾಮಿ ಜನಪ್ರತಿನಿಧಿ ಗಳ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾ ಧೀಶ ರಾಮಚಂದ್ರ ಡಿ.ಹೆಬ್ಬಾರ್ ಸಿಎಂ ಕುಮಾರಸ್ವಾಮಿ…
ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಗುಡ್ಡ ಕುಸಿತ
July 21, 2019ಮಡಿಕೇರಿ,ಜು.20- ಕೊಡಗಿನಾದ್ಯಂತ ಇಂದು ಸುರಿದ ಭಾರೀ ಮಳೆಗೆ ಮಡಿಕೇರಿ ಸಮೀಪದ ಜೋಡುಪಾಲ ಬಳಿ ನಿರ್ಮಾಣ ಹಂತದ ಮನೆ ಯೊಂದು ಕುಸಿದು ಬಿದ್ದಿದೆ. ಅಲ್ಲದೇ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಒಂದು ಕಡೆ ಗುಡ್ಡ ಕುಸಿದಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆಯೇ ಇಂದಿನಿಂದ ಕೊಡಗಿನಲ್ಲಿ ಮಳೆ ಬಿರುಸುಗೊಂಡಿದೆ. ಮಧ್ಯಾಹ್ನದ ವೇಳೆಗೆ ಮದೆನಾಡು ಗ್ರಾಪಂ ವ್ಯಾಪ್ತಿಯ ಜೋಡುಪಾಲ ಬಳಿ ನಿರ್ಮಾಣ ಹಂತದ ಮನೆಯೊಂದು ಸಂಪೂರ್ಣ ವಾಗಿ ಕುಸಿದು ಬಿದ್ದಿದೆ. ಇದೇ ಸ್ಥಳದಲ್ಲಿದ್ದ ಹಳೆಯ ಮನೆ ಕಳೆದ ವರ್ಷ ಸಂಭವಿಸಿದ್ದ ಪ್ರಕೃತಿ ವಿಕೋಪದಲ್ಲಿ ಕುಸಿದಿತ್ತು….
ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ನಿಧನ
July 21, 2019ನವದೆಹಲಿ, ಜು.20- ತೀವ್ರ ಅನಾ ರೋಗ್ಯದಿಂಗಾಗಿ ಕಾಂಗ್ರೆಸ್ ಹಿರಿಯ ನಾಯಕಿ ಹಾಗೂ ಮೂರು ಬಾರಿ ರಾಷ್ಟ್ರ ರಾಜ ಧಾನಿ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರು ಶನಿವಾರ ನಿಧನರಾಗಿದ್ದಾರೆ. ಶೀಲಾ ದೀಕ್ಷಿತ್ ಅವ ರಿಗೆ 81 ವರ್ಷ ವಯಸ್ಸಾಗಿತ್ತು. ಸುದೀರ್ಘ ಕಾಲ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು, ಇಂದು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 1998ರಿಂದ ಸತತ ಮೂರು ಅವಧಿಗೆ ದೆಹಲಿ ಸರ್ಕಾರವನ್ನು ಮುನ್ನಡೆಸಿದ್ದರು. ರಾಷ್ಟ್ರ ರಾಜಧಾನಿಯಲ್ಲಿ ಸತತ 3 ಬಾರಿ ಜಯಗಳಿಸಿ, 15 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದು…
ವಕೀಲರು, ನ್ಯಾಯಾಲಯ ನೌಕರರಲ್ಲಿ ಸಮನ್ವಯವಿದ್ದರೆ ನ್ಯಾಯಾಲಯದ ವಿಶ್ವಾಸಾರ್ಹತೆ ಉಳಿಯಲು ಸಾಧ್ಯ
July 21, 2019ಮೈಸೂರು,ಜು.20(ಆರ್‍ಕೆಬಿ)- ಮೈಸೂರಿನ ಮಳಲವಾಡಿಯ ನ್ಯಾಯಾಲಯ ಸಂಕೀರ್ಣದಲ್ಲಿ 4 ಅಂತಸ್ತಿನ ಕಟ್ಟಡವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಉದ್ಘಾಟಿಸಿದರು. ಮೈಸೂರು ಜಿಲ್ಲಾ ನ್ಯಾಯಾಲಯ, ಲೋಕೋಪಯೋಗಿ ಇಲಾಖೆ ಮತ್ತು ಮೈಸೂರು ವಕೀಲರ ಸಂಘ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಳಿಕ ಮಾತನಾಡಿದ ಅವರು, ಮೈಸೂರಿನಲ್ಲಿ ಇಷ್ಟು ಸುಸಜ್ಜಿತ ಕಟ್ಟಡ ಇರುವುದು ಸಂತಸ ದಾಯಕ. ಬರೀ ಕಟ್ಟಡ ಇದ್ದರಷ್ಟೇ ಸಾಲದು, ನ್ಯಾಯ ಅರಸಿ ಬರುವ ಸಾರ್ವಜನಿಕರಿಗೆ ಸೂಕ್ತ ನ್ಯಾಯ ದೊರಕುವುದೂ ಅಷ್ಟೇ ಮುಖ್ಯ ಎಂದು ಹೇಳಿದರು. ನ್ಯಾಯ ಸಿಗುವುದು ವಿಳಂಬ…
ಚೆಸ್ಕಾಂ ಕಚೇರಿಗಳಲ್ಲಿ ಸರ್ವರ್ ಡೌನ್ ಸಮಸ್ಯೆ: ಗ್ರಾಹಕರಿಗೆ ತೊಂದರೆ
July 21, 2019ಮೈಸೂರು, ಜು.20 (ಆರ್‍ಕೆಬಿ)- ಉಪ ವಿಭಾಗದ ವ್ಯಾಪ್ತಿಯಲ್ಲಿ ಪದೇ ಪದೆ ಸರ್ವರ್ ಡೌನ್ ಸಮಸ್ಯೆ ಯಿಂದಾಗಿ ಗ್ರಾಹಕರು ತೊಂದರೆ ಅನುಭವಿಸುವಂತಾ ಗಿದೆ ಎಂದು ಶನಿವಾರ ಮೈಸೂರಿನ ಶ್ರೀ ಹರ್ಷ ರಸ್ತೆಯಲ್ಲಿನ ಚೆಸ್ಕಾಂ ಉಪವಿಭಾಗದ ಸಭಾಂಗಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ದೂರುಗಳು ಕೇಳಿಬಂದವು. ಸರ್ವರ್ ಡೌನ್ ಸಮಸ್ಯೆಯಿಂದಾಗಿ ಗ್ರಾಹಕರಿಗೆ ಬಿಲ್ ಕಟ್ಟಲು ಹಾಗೂ ಮಾಹಿತಿ ತಿಳಿಯಲು ಸಾಧ್ಯವಾಗುತ್ತಿಲ್ಲ ದರ ಬಗ್ಗೆ ದೂರಿಗೆ ಪ್ರತಿಕ್ರಿಯಿಸಿದ ಉಪವಿಭಾಗದ ಎಇಇ ಆರ್.ರುದ್ರಪ್ಪ, ಈ ಬಗ್ಗೆ ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಮತ್ತೊಮ್ಮೆ…
ಡೆಂಗ್ಯೂ ವಿರೋಧಿ ಮಾಸಾಚರಣೆ: ಅರಿವು ಜಾಥಾಗೆ ಚಾಲನೆ
July 21, 2019ಮೈಸೂರು,ಜು.20(ಆರ್‍ಕೆಬಿ)- ಡೆಂಗ್ಯೂ ವಿರೋಧಿ ಮಾಸಾಚರಣೆ ಅಂಗವಾಗಿ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೈಸೂರು ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಧಿಕಾರಿ ಕಚೇರಿ ವತಿಯಿಂದ ಶನಿವಾರ ಅರಿವು ಜಾಥಾ ನಡೆಸಲಾಯಿತು. ಕುರುಬಾರಹಳ್ಳಿ ಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಗರಪಾಲಿಕೆ ಸದಸ್ಯರಾದ ಛಾಯಾದೇವಿ, ಜಿ.ರೂಪಾ, ಎಸ್.ಸಾತ್ವಿಕ್, ಡಿಹೆಚ್‍ಓ ಡಾ. ಆರ್.ವೆಂಕ ಟೇಶ್ ಜಾಥಾಗೆ ಚಾಲನೆ ನೀಡಿದರು. ಹೆಚ್‍ಹೆಚ್‍ಎಂಬಿಜಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಿಂದ ಹೊರಟ ಜಾಥಾ, ಕುರುಬಾರಹಳ್ಳಿ ವೃತ್ತ, ಹಾಲಿನ ಡೈರಿ…










