ಡೆಂಗ್ಯೂ ವಿರೋಧಿ ಮಾಸಾಚರಣೆ: ಅರಿವು ಜಾಥಾಗೆ ಚಾಲನೆ
ಮೈಸೂರು

ಡೆಂಗ್ಯೂ ವಿರೋಧಿ ಮಾಸಾಚರಣೆ: ಅರಿವು ಜಾಥಾಗೆ ಚಾಲನೆ

July 21, 2019

ಮೈಸೂರು,ಜು.20(ಆರ್‍ಕೆಬಿ)- ಡೆಂಗ್ಯೂ ವಿರೋಧಿ ಮಾಸಾಚರಣೆ ಅಂಗವಾಗಿ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೈಸೂರು ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಧಿಕಾರಿ ಕಚೇರಿ ವತಿಯಿಂದ ಶನಿವಾರ ಅರಿವು ಜಾಥಾ ನಡೆಸಲಾಯಿತು.

ಕುರುಬಾರಹಳ್ಳಿ ಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಗರಪಾಲಿಕೆ ಸದಸ್ಯರಾದ ಛಾಯಾದೇವಿ, ಜಿ.ರೂಪಾ, ಎಸ್.ಸಾತ್ವಿಕ್, ಡಿಹೆಚ್‍ಓ ಡಾ. ಆರ್.ವೆಂಕ ಟೇಶ್ ಜಾಥಾಗೆ ಚಾಲನೆ ನೀಡಿದರು. ಹೆಚ್‍ಹೆಚ್‍ಎಂಬಿಜಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಿಂದ ಹೊರಟ ಜಾಥಾ, ಕುರುಬಾರಹಳ್ಳಿ ವೃತ್ತ, ಹಾಲಿನ ಡೈರಿ ರಸ್ತ್ತೆ, ಸರ್ಕಾರಿ ಕಾಲೇಜು ರಸ್ತೆ, ಕುರುಬಾರಹಳ್ಳಿಯ ಎಲ್ಲಾ ಕ್ರಾಸ್‍ಗಳ ಮೂಲಕ ಮತ್ತೆ ಪ್ರಾಥ ಮಿಕ ಆರೋಗ್ಯ ಕೇಂದ್ರಕ್ಕೆ ವಾಪಸಾಯಿತು.

ಈ ವೇಳೆ ಮಾತನಾಡಿದ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿಕಾರಿ ಡಾ.ಆರ್.ವೆಂಕಟೇಶ್, ಮೈಸೂರು ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣದಲ್ಲಿದ್ದು, ಇನ್ನೂ ಹೆಚ್ಚಿನ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಮತ್ತು ಸಾರ್ವಜನಿಕರು ಸಹ ಕರಿಸುವಂತೆ ಮನವಿ ಮಾಡಿದರು.

ನಂತರ ಮಾತನಾಡಿದ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರ ಣಾಧಿಕಾರಿ ಡಾ.ಎಸ್.ಚಿದಂಬರ, ಡೆಂಗ್ಯೂ ವೈರಸ್‍ನಿಂದ ಡೆಂಗ್ಯೂ ಜ್ವರ ಬರುತ್ತದೆ. ಈಡಿಸ್ ಎಂಬ ಜಾತಿಯ ಸೊಳ್ಳೆಯಿಂದ ಹರಡುವ ಈ ಜ್ವರಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ. ಬದಲಾಗಿ ಸೊಳ್ಳೆ ನಿಯಂತ್ರಣವೇ ಮುಖ್ಯ ಎಂದರು.

ಬುದ್ಧಿವಂತ ಸೊಳ್ಳೆಯಾದ ಈಡಿಸ್ ಅತ್ಯಂತ ಕಡಿಮೆ ನೀರು ಅಂದರೇ ಕೇವಲ 5 mಟ ನೀರಿನಲ್ಲಿ ಉತ್ಪತ್ತಿಯಾಗುವ ಕ್ಷಮತೆ ಹೊಂದಿದೆ. ಸಾರ್ವಜನಿಕರು ಬಿಸಾಡಿದ ಹೆಲ್ಮೆಟ್, ಶೂ, ಒಡೆದ ಮೊಟ್ಟೆ ಸಿಪ್ಪೆ, ಮನಿ ಪ್ಲಾಂಟ್ ಬೆಳೆಸಲು ಇಡುವ ಪ್ಲಾಸ್ಟಿಕ್ ಬಾಟಲಿ ಇತರೆಗಳಲ್ಲಿ ಇವು ಉತ್ಪತ್ತಿಯಾಗುತ್ತವೆ. ನಿಂತ ನೀರಿನ ಜಾಗಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊ ಳಿಸಿ, ಸೊಳ್ಳೆ ಉತ್ಪತ್ತಿಯಾಗದಂತೆ ಕ್ರಮ ವಹಿಸಬೇಕು. ಜಿಲ್ಲೆಯನ್ನು ಡೆಂಗ್ಯೂ ಮುಕ್ತಗೊಳಿ ಸಲು ಆರೋಗ್ಯ ಇಲಾಖೆಯೊಂದಿಗೆ ಸಾರ್ವ ಜನಿಕರ ಸಹಕಾರ ಮುಖ್ಯವಾದದ್ದು ಎಂದು ಮನವಿ ಮಾಡಿದರು. ಆರೋಗ್ಯ ಇಲಾಖೆಯ ಡಾ.ಉಮೇಶ್, ಡಾ.ಶಿರಾಜ್ ಅಹಮದ್, ಡಾ.ಎಲ್.ರವಿ, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ನವೀನ್, ವೈದ್ಯಾಧಿ ಕಾರಿ ಡಾ.ಸೌಮ್ಯ, ಇಲಾಖೆ ಸಿಬ್ಬಂದಿ, ಸ್ವಯಂ ಸೇವಾ ಸಂಸ್ಥೆಗಳು, ಸಾರ್ವಜನಿ ಕರು ಜಾಥಾದಲ್ಲಿ ಭಾಗವಹಿಸಿದ್ದರು.

Translate »