ವರದಕ್ಷಿಣೆ ಕಿರುಕುಳ: ನಾಲ್ವರಿಗೆ 26 ತಿಂಗಳು ಜೈಲು
ಹಾಸನ

ವರದಕ್ಷಿಣೆ ಕಿರುಕುಳ: ನಾಲ್ವರಿಗೆ 26 ತಿಂಗಳು ಜೈಲು

July 21, 2019

* ಗಂಡ, ಮಾವ, ಮೈದುನ ಸೇರಿ 4 ಮಂದಿಗೆ ತಲಾ 24 ಸಾವಿರ ರೂ. ದಂಡ

* ದಂಡದ ಹಣದಲ್ಲಿ 80 ಸಾವಿರ ರೂ. ಸಂತ್ರಸ್ತ ಪತ್ನಿಗೆ ಪರಿಹಾರ ಧನ

* ದಂಡ ಪಾವತಿಸಲು ವಿಫಲವಾದರೆ ಮತ್ತೆ 8 ತಿಂಗಳ ಸೆರೆವಾಸ ಆದೇಶ

* ಬೇಲೂರು ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯ ತೀರ್ಪು

ಹಾಸನ,ಜು.20- ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಬೇಲೂರು ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯ 26 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಒಟ್ಟು 96 ಸಾವಿರ ರೂ. ದಂಡವನ್ನೂ ವಿಧಿಸಿದೆ.

ಬೇಲೂರು ತಾಲೂಕಿನ ಹೊಸ ಉತ್ಪಾ ತನಹಳ್ಳಿಯ ವಸಂತಕುಮಾರ ಮತ್ತು ಕುಮಾರಿ 2015ರ ಮೇ 11ರಂದು ಮದುವೆ ಯಾಗಿತ್ತು. ವರದಕ್ಷಿಣೆಯಾಗಿ 200 ಗ್ರಾಂ ಚಿನ್ನದ ಆಭರಣಗಳನ್ನೂ, ಬೆಂಗಳೂರಿಗೆ ಹೋಗಿ ವ್ಯಾಪಾರ ಮಾಡಲು ಬೇಕೆಂದು 4 ಲಕ್ಷ ರೂ. ನಗದನ್ನೂ ವರದಕ್ಷಿಣೆ ಯಾಗಿ ಪಡೆದುಕೊಂಡಿದ್ದ. ವರದಕ್ಷಿಣೆ ಕೊಡದಿದ್ದರೆ ಹೆಂಡತಿಯನ್ನು ಕರೆದು ಕೊಂಡು ಹೋಗುವುದಿಲ್ಲ ಎಂದು ಮಾವನ ಮನೆಯವರಿಗೆ ಹೆದರಿಸಿದ್ದ.

ಬಳಿಕ ಬೆಂಗಳೂರು ಸೇರಿದ ವಸಂತ ಕುಮಾರ್, ಪುನಃ ನಿನ್ನ ತವರಿನಿಂದ 2 ಲಕ್ಷ ರೂ. ತೆಗೆದುಕೊಂಡು ಬಾ. ಇಲ್ಲದಿ ದ್ದರೆ ಜಮೀನು ಬರೆಸಿಕೊಂಡು ಬಾ ಎಂದು ಒತ್ತಾಯಿಸಿ 2016ರ ಫೆ.17ರಂದು ಪತ್ನಿಯನ್ನು ತವರಿಗೆ ಕಳಿಸಿದ್ದ. ವಸಂತ ಕುಮಾರ್ ಜತೆಗೆ ಮಾವ, ಮೈದುನ ಸೇರಿದಂತೆ ನಾಲ್ಕು ಮಂದಿ ದೈಹಿಕ, ಮಾನಸಿಕವಾಗಿ ಹಿಂಸೆ ನೀಡಿದ್ದರು. ಅವಾಚ್ಯವಾಗಿ ನಿಂದಿಸಿದ್ದರು. ಕೊಲೆ ಬೆದರಿಕೆಯನ್ನೂ ಹಾಕಿದ್ದರು ಎಂದು ಕುಮಾರಿ ತವರಿಗೆ ಬಂದಾಗ ಬೇಲೂರು ಪೊಲೀಸರಿಗೆ ದೂರು ನೀಡಿದ್ದರು.

ತನಿಖೆ ನಡೆಸಿದ ಬೇಲೂರು ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ವೆಂಕಟೇಶ್ ಹೆಚ್.ಆರ್. ನಾಲ್ವರೂ ಆರೋಪಿಗಳ ವಿರುದ್ಧ ಬೇಲೂರು ಹಿರಿಯ ಸಿವಿಲ್ ಜಡ್ಜ್ ನ್ಯಾಯಾ ಲಯಕ್ಕೆ ಐಪಿಸಿ ಕಲಂ. 498(ಎ), 504, 506, ರೆಡ್ ವಿತ್ 34 ಐಪಿಸಿ ಹಾಗೂ 3, 4 ಮತ್ತು 6 ಡಿಪಿ ಆಕ್ಟ್ ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ಶಶಿಧರ ಎಂ.ಗೌಡ ಅವರು ನಾಲ್ವರೂ ಆರೋಪಿಗಳ ವಿರುದ್ಧ ಆರೋಪ ಸಾಬೀ ತಾಗಿದೆ. ಎಂದು ಜು.9ರಂದು ತೀರ್ಪು ನೀಡಿದ್ದರು. ಅಪರಾಧಿಗಳಿಗೆ 2 ವರ್ಷ 2 ತಿಂಗಳು ಸಾದಾ ಕಾರಾಗೃಹ ವಾಸದ ಶಿಕ್ಷೆ ಮತ್ತು ತಲಾ 24,000 ರೂ.ನಂತೆ ಒಟ್ಟು 96,000 ರೂ.ಗಳನ್ನು ದಂಡವಾಗಿ ವಿಧಿಸಿ ತೀರ್ಪು ನೀಡಿದರು. ದಂಡ ಪಾವತಿಸದಿದ್ದರೆ ಹೆಚ್ಚುವರಿಯಾಗಿ ಮತ್ತೆ 8 ತಿಂಗಳ ಸಾದಾ ಸೆರೆವಾಸದ ಶಿಕ್ಷೆ ಅನು ಭವಿಸುವಂತೆಯೂ ತೀರ್ಪು ನೀಡಿದರು.

ದಂಡದ ಹಣದಲ್ಲಿ 80 ಸಾವಿರ ರೂ. ಗಳನ್ನು ಪರಿಹಾರವಾಗಿ ಸಂತ್ರಸ್ತ ಕುಮಾರಿ ಅವರಿಗೆ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿ ದ್ದಾರೆ. ಸಹಾಯಕ ಸರ್ಕಾರಿ ಅಭಿಯೋ ಜಕ ಚೌಧರಿ ಮೋತಿಲಾಲ ಅವರ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ನಡೆದಿದ್ದೇನು
2015ರ ಮೇ 11ರಂದು ಬೇಲೂರು ತಾಲೂಕಿನ ಹೊಸ ಉತ್ಪಾತನಹಳ್ಳಿ ವಸಂತಕುಮಾರ-ಕುಮಾರಿ ಮದುವೆ.
ಹೆಂಡತಿಯನ್ನು ಜತೆಗೆ ಕರೆದೊಯ್ಯು ವುದಿಲ್ಲ ಎಂದು ಬೆದರಿಸಿ 200 ಗ್ರಾಂ ಚಿನ್ನ, 4 ಲಕ್ಷ ರೂ. ವರದಕ್ಷಿಣೆ.
2016ರ ಫೆ.17-ಪತ್ನಿಯನ್ನು ತವರಿಗೆ ಕಳಿಸಿ ಮತ್ತೆ 2 ಲಕ್ಷ ರೂ. ತರಲು ಒತ್ತಾಯ, ಹಿಂಸೆ, ಕೊಲೆ ಬೆದರಿಕೆ.

Translate »