ಕಲ್ಯಾಣವು ಜಂಗಮ ಸ್ವರೂಪಿ; ಸರ್ವತ್ರ ಅನ್ವಯ
ಹಾಸನ

ಕಲ್ಯಾಣವು ಜಂಗಮ ಸ್ವರೂಪಿ; ಸರ್ವತ್ರ ಅನ್ವಯ

July 21, 2019

`ಸಹಮತ ವೇದಿಕೆ ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಸಾಹಿತಿ ಚಿಟ್ನಹಳ್ಳಿ ಮಹೇಶ್
ರಾಮನಾಥಪುರ, ಜು.20- ಕೆಡಹು ವುದು ಸುಲಭ, ಕಟ್ಟುವುದೇ ಕಷ್ಟ. ಮುಂದಿನ ಪೀಳಿಗೆಗೆ ದೊರಕಬೇಕಾದ ಮಾನವೀಯ ತೆಯ ಭದ್ರ ಬುನಾದಿಗಾಗಿ ನಾವಿಂದು ಕೆಡ ಹುವ ಬದಲು ಕಟ್ಟುವ ಕಷ್ಟದ ದಾರಿ ಯನ್ನು ಅರಿಸಿಕೊಳ್ಳಬೇಕಿದೆ. ಒಡೆದ ಮನಸ್ಸು ಗಳನ್ನು ಒಂದುಗೂಡಿಸಲು ಮತ್ತೆ ಕಲ್ಯಾ ಣದ ದಾರಿಯಲ್ಲಿ ನಡೆಯಬೇಕಿದೆ. ಎಲ್ಲರೂ ಒಟ್ಟಾಗಿ ಬನ್ನಿ ಎಂದು ಸಾಹಿತಿ ಚಿಟ್ನಹಳ್ಳಿ ಮಹೇಶ್ ಕರೆ ನೀಡಿದರು.

ಇಲ್ಲಿಯ ಬಸವೇಶ್ವರ ವೃತ್ತದಲ್ಲಿರುವ ಮಹಿಳಾ ಪದವಿ ಪೂರ್ವ ಕಾಲೇಜು ಅವ ರಣದಲ್ಲಿ ಜಿಲ್ಲಾ ಸಹಮತ ವೇದಿಕೆ, ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮತ್ತು ಮಹಿಳಾ ಪಿಯು ಕಾಲೇಜು ಸಂಯು ಕ್ತಾಶ್ರಯದಲ್ಲಿ `ಸಹಮತ ವೇದಿಕೆ ಮತ್ತೆ ಕಲ್ಯಾಣ’ ಎಂಬ ವಿಚಾರವಾಗಿ ನಡೆದ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಸಾಣೆಹಳ್ಳಿ ಶ್ರೀಮಠದ ಶ್ರೀ ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ದಲ್ಲಿ ಆ.4ರಂದು ಹಾಸನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲೆಯ ಶರಣ-ಶರಣೆ ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕು ಎಂದು ಮನವಿ ಮಾಡಿದÀರು.

ಕಲ್ಯಾಣವು ಜಂಗಮ ಸ್ವರೂಪಿ, ಎಲ್ಲಾ ದೇಶ-ಕಾಲಕ್ಕೆ ಅನ್ವಯ. ಎಲ್ಲ ಜಾತಿ, ಧರ್ಮಗಳ ಶ್ರೀ-ಪುರುಷರ ನಡುವೆ ಸಮ ಭಾವ ಮೂಡದೆ ಯಾವ ಪೂಜೆಯೂ ಫಲ ನೀಡದು. ಮನದೊಂದಿಗೆ ಅರಿವಿನ ಜ್ಯೋತಿ ಬೆಳಗಿ ಅದು ಸಮಾಜದ ವಿಶಾಲ ಬೆಳಕಿನೊಳಗೆ ಲೀನವಾಗದಿದ್ದರೆ ಭಕ್ತಿಯ ಸಂಕೇತಗಳು ಅರ್ಥಹೀನ. ಜಡತ್ವಕ್ಕೆ ಸಂದ ಮನಸ್ಸುಗಳನ್ನು ಬಡಿದೆಚ್ಚರಿಸಿ ಬದು ಕಿನ ಸಾರ್ಥಕತೆಯ ಮಾರ್ಗ ತೋರಿ ಸಿದ್ದು, 12ನೆಯ ಶತಮಾನದ ಶರಣ ಚಳವಳಿ. ಆ ಅರಿವಿನ ಮಾರ್ಗವನ್ನು ಮತ್ತೆ ಕಂಡುಕೊಳ್ಳುವ ಪ್ರಯತ್ನವೇ ಮತ್ತೆ ಕಲ್ಯಾಣವೆಂಬ ಈ ಅಂದೋಲನ ಎಂದರು.

ಮತ್ತೆ ಕಲ್ಯಾಣ ಕೇವಲ ಒಂದು ಸಮಾ ರಂಭ ವಿಚಾರ ಸಂಕಿರಣ ಅಲ್ಲ. ಸಮಾ ಜದ ಇಂದಿನ ತಲ್ಲಣಗಳಿಗೆ ಇದೇ ನೆಲ ದಲ್ಲಿ ಜನ್ಮ ತಳೆದ ಶರಣ ಚಳವಳಿಯ ತಾತ್ವಿಕ ಭಿತ್ತಿಯೊಳಗಿನಿಂದ ಪರಿಹಾರ ವನ್ನು ಹುಡುಕಿ ಕೊಳ್ಳುವ ಅನ್ವೇಷಣೆ. ವ್ಯಕ್ತಿ, ಕಸುಬು, ಜಾತಿ, ಲಿಂಗ, ಭಾಷೆ, ಧರ್ಮಗಳ ಹೆಸರಿನಲ್ಲಿ ಮನುಷ್ಯ ಕುಲ ತನ್ನದೇ ಸಹಜೀವಿಗಳಿಂದ ದೂರ ಸರಿ ಯುತ್ತಾ ಒಡೆದುಹೊಗುತ್ತಿರುವ ಈ ಅತಂಕದ ಹೊತ್ತಿನಲ್ಲಿ ಎಲ್ಲರೂ ಜೊತೆ ಜೊತೆಯಾಗಿಯೇ ಮುನ್ನಡೆಯಲು ತೊಡಗುತ್ತಿರುವ ಹೊಸದೊಂದು ಪ್ರಕ್ರಿಯೆ. ಗ್ರಾಮೀಣ ಬದುಕಿನ ನೆಲಗಟ್ಟಿನವರು ಅವರ ನಿಸ್ವಾರ್ಥ ಪ್ರಾಮಾಣಿಕ-ಪರಿಶುದ್ಧ ಬದುಕಿನ ಚಿಂತನೆಗಳು ಅವರನ್ನು ಅಮರ ರನ್ನಾಗಿ ಮಾಡಿವೆ. ವಚನಗಳು ಪ್ರತಿ ಯೊಬ್ಬರು ಸಮಾಜದಲ್ಲಿ ನೈತಿಕವಾಗಿ ಹೇಗೆ ಬದುಕಬೇಕು ಎಂಬುದನ್ನು ಕಲಿಸುತ್ತವೆ ಎಂದರು.ಕಾಲೇಜು ಪ್ರಾಂಶುಪಾಲ ಸಂಪತ್ತೇ ಗೌಡ ಅಧ್ಷಕ್ಷತೆ ವಹಿಸಿದ್ದರು.

ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿದರು. ಉಪನ್ಯಾಸಕ ಜಯದೇವ್, ಎಂ.ಎಂ. ಸ್ವಾಮಿ, ಮನೋಹರ, ಕೃಷ್ಣ, ಧರ್ಮೇಶ್, ಶಾಮಲಾದೇವಿ, ಶಾಂಭವಿ, ನಂದಿನಿ ಮತ್ತಿತರರಿದ್ದರು.

Translate »