ಚೆಸ್ಕಾಂ ಕಚೇರಿಗಳಲ್ಲಿ ಸರ್ವರ್ ಡೌನ್ ಸಮಸ್ಯೆ: ಗ್ರಾಹಕರಿಗೆ ತೊಂದರೆ
ಮೈಸೂರು

ಚೆಸ್ಕಾಂ ಕಚೇರಿಗಳಲ್ಲಿ ಸರ್ವರ್ ಡೌನ್ ಸಮಸ್ಯೆ: ಗ್ರಾಹಕರಿಗೆ ತೊಂದರೆ

July 21, 2019

ಮೈಸೂರು, ಜು.20 (ಆರ್‍ಕೆಬಿ)- ಉಪ ವಿಭಾಗದ ವ್ಯಾಪ್ತಿಯಲ್ಲಿ ಪದೇ ಪದೆ ಸರ್ವರ್ ಡೌನ್ ಸಮಸ್ಯೆ ಯಿಂದಾಗಿ ಗ್ರಾಹಕರು ತೊಂದರೆ ಅನುಭವಿಸುವಂತಾ ಗಿದೆ ಎಂದು ಶನಿವಾರ ಮೈಸೂರಿನ ಶ್ರೀ ಹರ್ಷ ರಸ್ತೆಯಲ್ಲಿನ ಚೆಸ್ಕಾಂ ಉಪವಿಭಾಗದ ಸಭಾಂಗಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ದೂರುಗಳು ಕೇಳಿಬಂದವು.

ಸರ್ವರ್ ಡೌನ್ ಸಮಸ್ಯೆಯಿಂದಾಗಿ ಗ್ರಾಹಕರಿಗೆ ಬಿಲ್ ಕಟ್ಟಲು ಹಾಗೂ ಮಾಹಿತಿ ತಿಳಿಯಲು ಸಾಧ್ಯವಾಗುತ್ತಿಲ್ಲ ದರ ಬಗ್ಗೆ ದೂರಿಗೆ ಪ್ರತಿಕ್ರಿಯಿಸಿದ ಉಪವಿಭಾಗದ ಎಇಇ ಆರ್.ರುದ್ರಪ್ಪ, ಈ ಬಗ್ಗೆ ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಮತ್ತೊಮ್ಮೆ ಈ ಬಗ್ಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಹಲವು ತಿಂಗಳಿಂದ ದೂರು ನೀಡಿದ್ದರೂ ಆರ್‍ಆರ್ ಸಂಖ್ಯೆ ಗಳ ಶಾಶ್ವತ ವಿದ್ಯುತ್ ನಿಲುಗಡೆ ಮಾಡಿಲ್ಲ, ಕಂದಾಯ ವಿಭಾಗದಲ್ಲಿ ಎಸ್‍ಆರ್‍ಎ (ಸ್ಟೇಟ್‍ಮೆಂಟ್ ಆಫ್ ಅರಿ ಯರ್ಸ್) ದಾಖಲೆ ನೀಡುತ್ತಿಲ್ಲ. ಎಂಬ ದೂರಿಗೆ ಸಂಬಂಧಿ ಸಿದಂತೆ, ಹಲವು ನೌಕರರ ವರ್ಗಾವಣೆಯಿಂದಾಗಿ ಸಿಬ್ಬಂದಿ ಕೊರತೆಯಿಂದ ಈ ಸಮಸ್ಯೆ ಉಂಟಾಗಿತ್ತು. ಇದೀಗ ಸಿಬ್ಬಂದಿ ಕೊರತೆ ಸರಿಪಡಿಸಲಾಗಿದ್ದು, ಸಮಸ್ಯೆಯನ್ನು ಶೀಘ್ರ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಜನಸಂಪರ್ಕ ಸಭೆಗಳನ್ನು ಆಯೋಜಿಸಿದಾಗ ಇದರ ಮಾಹಿತಿಯನ್ನು ಗ್ರಾಹಕರಿಗೆ ಎಸ್‍ಎಂಎಸ್ ಮೂಲಕ ನೀಡುವಂತಾದರೆ ಹೆಚ್ಚಿನ ಗ್ರಾಹಕರು ದೂರು ನೀಡಲು ಸಹಾಯಕವಾಗುತ್ತದೆ ಎಂದು ಗ್ರಾಹಕರು ಸಲಹೆ ನೀಡಿ ದರು. ಸಭೆಯಲ್ಲಿ ಒಟ್ಟಾರೆ ಐದು ದೂರುಗಳು ದಾಖಲಾ ದವು. ಗ್ರಾಹಕರ ಪರವಾಗಿ ಮಂಜುನಾಥ್, ಎಂ.ಎನ್. ಚಂದ್ರಶೇಖರ್, ಚೆಸ್ಕಾಂ ಶಾಖಾಧಿಕಾರಿಗಳಾದ ಮೊಯಿದ್ದೀನ್, ಧರಣಿದೇವಿ, ಎ.ಕೆ.ಕಮಲಾದೇವಿ, ಕಂದಾಯ ಶಾಖೆಯ ಹಿರಿಯ ಸಹಾಯಕ ಮಹದೇವಯ್ಯ, ಬಸವರಾಜು ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Translate »