ಬೆಂಗಳೂರು, ಜು.18(ಕೆಎಂಶಿ)- ಕಾಂಗ್ರೆಸ್-ಜೆಡಿಎಸ್‍ನ 15 ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥಗೊಳ್ಳುವವರೆಗೂ ವಿಶ್ವಾಸಮತ ಯಾಚನೆಗೆ ಅವಕಾಶ ನೀಡಬಾರದು ಎಂದು ಸಿಎಲ್‍ಪಿ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಎತ್ತಿದ ಕ್ರಿಯಾಲೋಪ ಇಂದು ಇಡೀ ದಿನದ ಕಲಾಪವನ್ನೇ ಬಲಿ ತೆಗೆದುಕೊಂಡಿತು. ಸಿದ್ದರಾಮಯ್ಯ ಅವರ ಕ್ರಿಯಾಲೋಪ ಅಂಗೀಕರಿಸಬೇಕೇ ಇಲ್ಲ ತಿರಸ್ಕರಿಸಬೇಕೇ ಅಥವಾ ಸುಪ್ರೀಂಕೋರ್ಟ್‍ನಲ್ಲೇ ಶಾಸಕರ ರಾಜೀನಾಮೆಯ ಸಂಶಯವನ್ನು ನಿವಾರಿಸಿಕೊಳ್ಳಬೇಕೇ ಎಂಬ ಬಗ್ಗೆ ರಾಜ್ಯ ಅಡ್ವೊಕೇಟ್ ಜನರಲ್ ಅವರಿಂದ ಮಾಹಿತಿ ಪಡೆದು, ನಂತರ ನಾನು ನಿರ್ಧಾರ ಪ್ರಕಟಿಸುತ್ತೇನೆ ಎಂಬ ನಿರ್ಧಾರಕ್ಕೆ ಸ್ಪೀಕರ್ ರಮೇಶ್…
ಮೈಸೂರು ಅರಮನೆಯಲ್ಲಿ ಶ್ರೀಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವ ಆಚರಣೆ
July 19, 2019ಮೈಸೂರು,ಜು.18(ಎಂಟಿವೈ)- ಅಧಿಕಾರ ಪಡೆಯಲು ಹಾಗೂ ಕೈಯಲ್ಲಿರುವ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಮಾಡುವವರು ಮೈಸೂರು ಸಂಸ್ಥಾನದ ಕೊನೆಯ ಅರಸ ಜಯಚಾಮರಾಜ ಒಡೆಯರ್ ಅವರ ಆದರ್ಶ ಅರ್ಥೈಸಿಕೊಳ್ಳಬೇಕು ಎಂದು ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲ ಕೃಷ್ಣ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ಅರಮನೆ ದರ್ಬಾರ್ ಹಾಲ್ ನಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆ ಯರ್ ಫೌಂಡೇಶನ್ ವತಿಯಿಂದ ಗುರು ವಾರ ನಡೆದ ಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ಹಲವು ರಾಜಮನೆತನಗಳನ್ನು ಕಂಡ ದೇಶವಾಗಿದೆ….
ಒಡೆಯರ್ ಸಂಗೀತ ಪ್ರೀತಿ ನೆನೆದ ಸತ್ಯವತಿ
July 19, 2019ಮೈಸೂರು,ಜು.18(ವೈಡಿಎಸ್)-ಜಯ ಚಾಮರಾಜ ಒಡೆಯರ್ ಅವರು ಕರ್ನಾ ಟಕ ಸಂಗೀತದ ಮೇಲೆ ಅಪಾರ ಹಿಡಿತ ಹೊಂದಿದ್ದರು ಎಂದು ಸಂಗೀತ ವಿದ್ವಾಂಸೆ ಡಾ.ಟಿ.ಎಸ್.ಸತ್ಯವತಿ ತಿಳಿಸಿದರು. ಮೈಸೂರು ಅರಮನೆಯ ದರ್ಬಾರ್ ಹಾಲ್‍ನಲ್ಲಿ ಆಯೋಜಿಸಿದ್ದ ಜಯಚಾಮ ರಾಜ ಒಡೆಯರ್ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಸಂಗೀತ ಕಾರ್ಯಕ್ರಮ ದಲ್ಲಿ ಜಯಚಾಮರಾಜ ಒಡೆಯರ್ ಅವರ ಸಂಗೀತ ಸಂಯೋಜನೆಗಳನ್ನು ಕುರಿತು ಮಾತನಾಡಿ, ಜಯಚಾಮರಾಜ ಒಡೆ ಯರ್ ಅವರು ಪಾಶ್ಚಾತ್ಯ ಹಾಗೂ ಕರ್ನಾ ಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಮಹ ತ್ವದ ಸಾಧನೆ ಮಾಡಿದ್ದು, 94 ಸಂಗೀತ ಕೃತಿಗಳನ್ನು…
ಇಂದಿನಿಂದ ಗೋವಾ, ಕೊಚ್ಚಿನ್, ಹೈದರಾಬಾದ್‍ಗೆ ವಿಮಾನ ಹಾರಾಟ
July 19, 2019ಮೈಸೂರು, ಜು.18(ಎಸ್‍ಬಿಡಿ)- ಮೈಸೂ ರಿನಿಂದ ಕೊಚ್ಚಿ, ಗೋವಾ ಹಾಗೂ ಹೈದರಾಬಾದ್‍ಗೆ ನಾಳೆ(ಜು.19)ಯಿಂದ ವಿಮಾನ ಹಾರಾಟ ಆರಂಭವಾಗಲಿದೆ. ಉಡಾನ್-3 ಯೋಜನೆಯಡಿ ಏರ್ ಇಂಡಿಯಾದ ಅಲಯನ್ಸ್ ಏರ್ ಸಂಸ್ಥೆ ಈ ಸೇವೆ ಒದಗಿಸುತ್ತಿದ್ದು, ಎಟಿಆರ್ 72 ಆಸನಗಳ ವಿಮಾನ ವಿವಿಧ ನಗರಗಳನ್ನು ಸಂಪರ್ಕಿಸಲಿದೆ. ಇದರೊಂದಿಗೆ ಮೈಸೂ ರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ದಿನವಿಡೀ ಚಟುವಟಿಕೆ ಗರಿಗೆದರಲಿದೆ. ಹೈದರಾಬಾದ್‍ನಿಂದ ಬೆಳಿಗ್ಗೆ 6.05ಕ್ಕೆ ಹೊರಡುವ ವಿಮಾನ 7.50ಕ್ಕೆ ಮೈಸೂ ರಿಗೆ ತಲುಪಲಿದೆ. ಬೆಳಿಗ್ಗೆ 8.15ಕ್ಕೆ ಮೈಸೂರಿನಿಂದ ಹೊರಟು 9.45ಕ್ಕೆ ಕೊಚ್ಚಿನ್‍ಗೆ ತಲುಪಲಿದೆ. ಹಾಗೆಯೇ…
ಮತ್ತೆ ಕೇರಳ ತ್ಯಾಜ್ಯ ಮೈಸೂರಿಗೆ!
July 19, 2019ಮೈಸೂರು,ಜು.18(ವೈಡಿಎಸ್)- ಕೇರಳದಿಂದ ಮೈಸೂರಿಗೆ ತ್ಯಾಜ್ಯ ತುಂಬಿ ಕೊಂಡು ಬಂದಿದ್ದ ಲಾರಿ ಮತ್ತು ಚಾಲಕ ಜಾಫರ್‍ನನ್ನು ಪಾಲಿಕೆ ಅಧಿಕಾರಿಗಳು ಗುರುವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ಕೇರಳದಿಂದ ತ್ಯಾಜ್ಯವನ್ನು ತುಂಬಿ ಕೊಂಡು ಮೈಸೂರಿಗೆ ಬರುತ್ತಿದ್ದ ಲಾರಿಯನ್ನು ಟೋಲ್‍ಗೇಟ್ ಬಳಿ ತೆರಿಗೆ ಅಧಿ ಕಾರಿ ಗಳು ತಪಾಸಣೆ ನಡೆಸಿದಾಗ ಶಾಂತಿ ನಗ ರದ ಟ್ರೇಡರ್ಸ್‍ನ ಮಾಲೀಕ ಹಕೀಬ್ ಎಂಬು ವರ ಜಿಎಸ್‍ಟಿ ಸಂಖ್ಯೆಯನ್ನು ಬಳಸಿ ಬಿಲ್ ಮಾಡಿದ್ದರು. ಈ ಕುರಿತು ಅಧಿಕಾರಿ ಗಳು ಹಕೀಬ್ ಅವರಿಗೆ ಕರೆ ಮಾಡಿ ತಿಳಿಸಿದ್ದು, ಅವರು…
ಬೆಂಗಳೂರಿನಲ್ಲಿ ಎದೆ ನೋವು! ಮುಂಬೈನಲ್ಲಿ ಚಿಕಿತ್ಸೆ..!!‘ಕೈ’ ಕೊಟ್ರಾ ಶಾಸಕ ಶ್ರೀಮಂತ್ ಪಾಟೀಲ್!!!
July 19, 2019ಬೆಂಗಳೂರು, ಜು.18- ಅತೃಪ್ತ ಶಾಸಕರ ರಾಜೀನಾಮೆ ಪ್ರಹಸನ ಮತ್ತು ರಾಜಕೀಯ ಮುಖಂಡರ ರೆಸಾರ್ಟ್ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ರಾತ್ರೋ ರಾತ್ರಿ ನಾಪತ್ತೆ ಯಾಗುವ ಮೂಲಕ ದೋಸ್ತಿ ಸರ್ಕಾರಕ್ಕೆ ಶಾಕ್ ನೀಡಿದ್ದ ಶಾಸಕ ಶ್ರೀಮಂತ್ ಪಾಟೀಲ್ ಇದೀಗ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯಕ್ಷ ರಾಗಿದ್ದಾರೆ. ನಿನ್ನೆ ಕಾಂಗ್ರೆಸ್ ಶಾಸಕರೊಂದಿಗೆ ಬೆಂಗಳೂರಿನ ಪ್ರಕೃತಿ ರೆಸಾರ್ಟ್‍ನಲ್ಲಿ ತಂಗಿದ್ದ ಕಾಗವಾಡ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ರಾತ್ರೋರಾತ್ರಿ ರೆಸಾರ್ಟ್‍ನಿಂದ ನಾಪತ್ತೆಯಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು. ಇದಕ್ಕೆ ಪುಷ್ಠಿ ನೀಡುವಂತೆ ಶ್ರೀಮಂತ ಪಾಟೀಲ್…
ವ್ಹಿಪ್ ಸಂಬಂಧ ಹೇಳಿಕೆ: ಬಿಎಸ್‍ವೈ ಇಕ್ಕಟ್ಟಿಗೆ
July 19, 2019ಬೆಂಗಳೂರು, ಜು.18(ಕೆಎಂಶಿ)- ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಕಾಂಗ್ರೆಸ್-ಜೆಡಿಎಸ್ ಸದಸ್ಯರಿಗೆ ಸಂಬಂಧಪಟ್ಟ ಪಕ್ಷಗಳು ವ್ಹಿಪ್ ಜಾರಿ ಮಾಡುವಂತಿಲ್ಲ ಎಂದು ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ಹೇಳಿಕೆ ನೀಡಿ, ಇಕ್ಕಟ್ಟಿಗೆ ಸಿಲುಕಿದರು. ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಅವರು, ನ್ಯಾಯಾಲಯ ವ್ಹಿಪ್ ನೀಡಬಾರದು ಎಂದು ಹೇಳಿದೆ ಎಂದು ಹೇಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಸುಪ್ರೀಂಕೋರ್ಟ್ ತೀರ್ಪಿನ ಪ್ರತಿಯನ್ನು ಯಡಿಯೂರಪ್ಪ ನವರಿಗೆ ತೋರಿಸಿ, ಅವರ ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದರು….
ಸ್ಪೀಕರ್ ಕೆಟ್ಟೋಗಿದೆ: ಈಶ್ವರಪ್ಪ ಟಾಂಗ್
July 19, 2019ಬೆಂಗಳೂರು: ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಕಾವು ಹೆಚ್ಚಾಗುತ್ತಿದ್ದರೆ ಇನ್ನೊಂದು ಕಡೆ ಸ್ಪೀಕರ್ ಕೆಟ್ಟು ಹೋಗಿದೆ ಎಂದು ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ. ಕೆ.ಎಸ್.ಈಶ್ವರಪ್ಪ ಅವರು ಹರಿದಿರುವ ಸ್ಪೀಕರ್ ಫೆÇೀಟೋವನ್ನು ಟ್ವೀಟ್ ಮಾಡಿ, ಈ ಸ್ಪೀಕರ್ ಕೆಟ್ಟು ಹೋಗಿದೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಮಲ್ಲಿ ಕಾರ್ಜುನ ಸಜ್ಜನ್ ಎಂಬುವರು ಸೋಮವಾರ ಹೊಸ ಸ್ಪೀಕರ್ ಬರುತ್ತೆ ಬಿಡಿ ಸರ್ ಎಂದು ಕಮೆಂಟ್ ಮಾಡಿದ್ದಾರೆ. ಸುನಿಲ್ ಮಾಪಾ ಎಂಬುವರು ನೀವು ತುಂಬಾ ಲೇಟ್ ಸರ್ ಅದು 2018ರಲ್ಲೇ ಕೆಟ್ಟು ಹೋಗಿತ್ತು ಪ್ರತಿಕ್ರಿಯಿಸಿದರೆ ಹೌದು…
ಶ್ರೀ ವ್ಯಾಸರಾಜರ ವೃಂದಾವನ ಧ್ವಂಸ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ
July 19, 2019ಮೈಸೂರು, ಜು.18(ಎಂಕೆ)- ಕೊಪ್ಪಳ ಜಿಲ್ಲೆಯ ಆನೆಗೊಂದಿಯಲ್ಲಿರುವ ನವ ವೃಂದಾವನದಲ್ಲಿ ಶ್ರೀ ವ್ಯಾಸರಾಜರ ವೃಂದಾ ವನವನ್ನು ದುಷ್ಕರ್ಮಿಗಳು ಬುಧವಾರ ರಾತ್ರಿ ಧ್ವಂಸಗೊಳಿಸಿವುದನ್ನು ಖಂಡಿಸಿ ಮೈಸೂ ರಿನ ಶ್ರೀ ವ್ಯಾಸರಾಜತೀರ್ಥರ ಅಭಿಮಾನಿ ವೃಂದ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘ ದಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀ ವ್ಯಾಸರಾಜ ಮಠದ ಆವರಣದಲ್ಲಿ ಜಮಾಯಿಸಿದ ನೂರಾರು ವ್ಯಾಸರಾಜರ ಅಭಿಮಾನಿ ವೃಂದದವರು ಹಾಗೂ ಜಿಲ್ಲಾ ಬ್ರಾಹ್ಮಣ ಸಂಘದ ಕಾರ್ಯಕರ್ತರು ಘೋಷಣೆ ಕೂಗಿ, ಕೀಡಿಗೇಡಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಠ ದಿಂದ ಜಿಲ್ಲಾಧಿಕಾರಿ…
ಸರ್ಕಾರದ ಅಸ್ಥಿರತೆ ನಡುವೆ ನೂರಾರು ಅಧಿಕಾರಿಗಳ ವರ್ಗಾವಣೆ
July 19, 2019ಬೆಂಗಳೂರು, ಜು.18- ಸರ್ಕಾರಕ್ಕೆ ಅಸ್ತಿರತೆ ಕಾಡುತ್ತಿರುವ ಈ ಸಂದರ್ಭದಲ್ಲೇ ಇಂದು ರಾಜ್ಯ ಸರ್ಕಾರ ನೂರಾರು ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರ ಆರೋಪಕ್ಕೆ ಪುಷ್ಟಿ ನೀಡಿದೆ. ಕಳೆದ ಎರಡು ದಿನಗಳಿಂದ ನೂರಾರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಸರ್ಕಾರ ಇಂದು 8 ಕೆಎಎಸ್ ಅಧಿಕಾರಿಗಳು, 30 ಎಕ್ಸಿಕ್ಯೂಟಿವ್ ಇಂಜಿನಿಯರ್‍ಗಳು ಹಾಗೂ 110 ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್‍ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.










