Tag: Mysore

ಮೂರನೇ ಆಷಾಢ ಶುಕ್ರವಾರ ಶ್ರೀ ಚಾಮುಂಡೇಶ್ವರಿಗೆ ದಿನವಿಡೀ ವಿಶೇಷ ಪೂಜೆ
ಮೈಸೂರು

ಮೂರನೇ ಆಷಾಢ ಶುಕ್ರವಾರ ಶ್ರೀ ಚಾಮುಂಡೇಶ್ವರಿಗೆ ದಿನವಿಡೀ ವಿಶೇಷ ಪೂಜೆ

July 20, 2019

ಮೈಸೂರು,ಜು.19(ಎಂಟಿವೈ)- ಮೋಡ ಮುಸುಕಿದ ವಾತಾವರಣ, ಇಬ್ಬನಿಯೊಂದಿಗೆ ಬೀಸುತ್ತಿದ್ದ ತಂಗಾಳಿ ನಡುವೆ ಆಷಾಢ ಮಾಸದ ಮೂರನೇ ಶುಕ್ರವಾರವಾದ ಇಂದು ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ನಡೆದ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು, ನಾಡದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಧನ್ಯರಾದರು. ಆಷಾಢ ಮಾಸದಲ್ಲಿ ಶಕ್ತಿ ದೇವರಿಗೆ ಪೂಜೆ ಸಲ್ಲಿಸಿದರೆ ಒಳಿತಾಗಲಿದೆ ಎಂಬ ರೂಢಿ ಇರುವು ದರಿಂದ ಚಾಮುಂಡೇಶ್ವರಿ ದೇವಾಲಯದಲ್ಲಿ ನಡೆದ ಪೂಜಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ವಿವಿಧೆಡೆಯಿಂದ ಭಕ್ತರು ಚಾಮುಂಡಿಬೆಟ್ಟಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯಲು…

ಕೈಕೊಟ್ಟ ಮಳೆರಾಯ: ಸಂಕಷ್ಟದಲ್ಲಿ ಮೈಸೂರು ಜಿಲ್ಲೆ ರೈತರು
ಮೈಸೂರು

ಕೈಕೊಟ್ಟ ಮಳೆರಾಯ: ಸಂಕಷ್ಟದಲ್ಲಿ ಮೈಸೂರು ಜಿಲ್ಲೆ ರೈತರು

July 20, 2019

ಮೈಸೂರು,ಜು.19(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಕ್ಷೀಣಿಸಿದ್ದು, ಕೃಷಿ ಕ್ಷೇತ್ರದ ಮೇಲೆ ಭಾರೀ ಹೊಡೆತ ಬಿದ್ದಿದೆ. ಮುಂಗಾರು ಹಂಗಾಮಿನಲ್ಲಿ ಕ್ಷೇತ್ರ ಗುರಿಯ ಅರ್ಧದಷ್ಟು ಮಾತ್ರ ಬಿತ್ತನೆಯಾಗಿದೆ. ಸದ್ಯ ಬೆಳವಣಿಗೆ ಹಂತದಲ್ಲಿರುವ ಬೆಳೆಗೆ ಒಮ್ಮೆಯಾದರೂ ಹದವಾಗುವಷ್ಟು ಮಳೆ ಯಾಗಬೇಕು. ಇಲ್ಲವಾದರೆ ಬಿತ್ತಿದ ಬೆಳೆ ರೈತರ ಕೈ ಸೇರದೆ ಮಣ್ಣು ಪಾಲಾಗುವ ಭೀತಿ ಎದುರಾಗಿದೆ. ಸಾಲ ಮಾಡಿ ಬಿತ್ತಿರುವ ರೈತರು ಪ್ರತಿಕ್ಷಣ ಆಗಸದತ್ತ ಮುಖಮಾಡಿ ಇಂದು ಮಳೆ ಬರಬಹುದು, ನಾಳೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ…

ಸಮಸ್ಯೆಗಳ ತ್ವರಿತವಾಗಿ ನಿಭಾಯಿಸುವುದೇ ಇಸ್ರೋ ಯಶಸ್ಸಿಗೆ ಕಾರಣ
ಮೈಸೂರು

ಸಮಸ್ಯೆಗಳ ತ್ವರಿತವಾಗಿ ನಿಭಾಯಿಸುವುದೇ ಇಸ್ರೋ ಯಶಸ್ಸಿಗೆ ಕಾರಣ

July 20, 2019

ಮೈಸೂರು,ಜು.19(ಆರ್‍ಕೆಬಿ)- ಸಮಸ್ಯೆ ಗಳನ್ನು ತ್ವರಿತವಾಗಿ ನಿಭಾಯಿಸುವ ಸಾಮಥ್ರ್ಯ ಇರುವುದೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಯಶಸ್ಸಿಗೆ ಕಾರಣವಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಕೆ.ರಾಧಾಕೃಷ್ಣನ್ ಹೇಳಿದರು. ಮೈಸೂರಿನ ಚಾಮುಂಡಿಬೆಟ್ಟದ ರಸ್ತೆ ಯಲ್ಲಿರುವ ಧರ್ಮಸ್ಥಳ ಮಂಜುನಾಥೇ ಶ್ವರ ಇನ್ಸ್‍ಟಿಟ್ಯೂಟ್ ಫಾರ್ ಮ್ಯಾನೇಜ್ ಮೆಂಟ್ ಡೆವಲಪ್‍ಮೆಂಟ್ (ಎಸ್‍ಡಿಎಂ ಐಎಂಡಿ)ನ ಸಂಸ್ಥಾಪನಾ ದಿನದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು. ಚಂದ್ರಯಾನ-2 ಮಿಷನ್ ಅನ್ನು ಇತ್ತೀಚೆಗೆ ಮುಂದೂಡಿದ್ದನ್ನು ಉಲ್ಲೇ ಖಿಸಿದ ಅವರು, ಸಣ್ಣ ಸೋರಿಕೆಯಿಂದಾಗಿ ಮಿಷನ್ ಸ್ಥಗಿತಗೊಂಡಿತ್ತು….

`ಕುವೆಂಪುರಂತಹ ದೊಡ್ಡ ವ್ಯಕ್ತಿಯನ್ನು ಕಾಣಲು ನಾನೇ ಮೈಸೂರಿಗೆ ಬರುತ್ತೇನೆ’
ಮೈಸೂರು

`ಕುವೆಂಪುರಂತಹ ದೊಡ್ಡ ವ್ಯಕ್ತಿಯನ್ನು ಕಾಣಲು ನಾನೇ ಮೈಸೂರಿಗೆ ಬರುತ್ತೇನೆ’

July 20, 2019

ಮೈಸೂರು, ಜು.19(ಆರ್‍ಕೆಬಿ)- ಮೈಸೂರು ವಿವಿ ಕುಲಪತಿಯಾಗಿದ್ದ ಕುವೆಂಪು ಒಮ್ಮೆ ಆಗಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪರನ್ನು ಕಾಣಲು ಭೇಟಿಯ ಸಮಯ ಕೇಳಿದ್ದರಂತೆ. ಅದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ ನಿಜಲಿಂಗಪ್ಪ, ರಾಷ್ಟ್ರ ಕವಿ ಕುವೆಂಪುರಂತಹ ದೊಡ್ಡ ವ್ಯಕ್ತಿ ನನ್ನನ್ನು ಕಾಣಲು ಮೈಸೂರಿನಿಂದ ಬೆಂಗಳೂರಿಗೆ ಬರಬೇಕೆ? ನಾನೇ ಹೋಗಿ ಕುವೆಂಪು ಅವರನ್ನು ಭೇಟಿಯಾಗುತ್ತೇನೆ. ವಿಶ್ವವಿದ್ಯಾನಿಲಯದ ವಿಷಯವಿದ್ದರೆ ಶಿಕ್ಷಣ ಸಚಿವರನ್ನೇ ಅವರ ಬಳಿಗೆ ಕಳುಹಿಸುತ್ತೇನೆ. ನನ್ನನ್ನು ಭೇಟಿಯಾಗಲು ಅಷ್ಟು ದೊಡ್ಡ ವ್ಯಕ್ತಿ ಬೆಂಗಳೂರಿನವರೆಗೆ ಬರು ವುದು ಬೇಡ ಎಂದು ಅಂದಿನ ಸಿಎಂ ಎಸ್.ನಿಜಲಿಂಗಪ್ಪ ಹೇಳಿದ್ದರಂತೆ. ಮೈಸೂರಿನ…

ನಾಳೆಯಿಂದ ರಂಗಾಯಣದಲ್ಲಿ `ಹೌಸ್ ಆಫ್ ಬರ್ನಾಡಾ ಅಲ್ಬಾ’ ವಾರಾಂತ್ಯ ನಾಟಕ
ಮೈಸೂರು

ನಾಳೆಯಿಂದ ರಂಗಾಯಣದಲ್ಲಿ `ಹೌಸ್ ಆಫ್ ಬರ್ನಾಡಾ ಅಲ್ಬಾ’ ವಾರಾಂತ್ಯ ನಾಟಕ

July 20, 2019

ಮೈಸೂರು,ಜು.19(ಆರ್‍ಕೆ)-ಮೈಸೂರಿನ ರಂಗಾಯಣದಲ್ಲಿ ಜು.21ರಿಂದ ಮೈಸೂರಿನ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಫೆಡ್ರಿಕೋ ಗಾರ್ಸಿಯ ಲೋರ್ಕಾ ವಿರಚಿತ `ಹೌಸ್ ಆಫ್ ಬರ್ನಾಡಾ ಅಲ್ಬಾ’ ವಾರಾಂತ್ಯ ನಾಟಕ ಪ್ರದರ್ಶನ ನಡೆಯಲಿದೆ. ಮೈಸೂರಿನ ರಂಗಾಯಣದ ಕುಟೀರದಲ್ಲಿ ಇಂದು ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ರಂಗಾ ಯಣ ನಿರ್ದೇಶಕರಾದ ಭಾಗೀರಥಿ ಬಾಯಿ ಅವರು, ಇದೇ ಮೊದಲ ಭಾರಿಗೆ ರಂಗಾಯಣದಲ್ಲಿ ಮಹಿಳಾ ಪಾತ್ರಧಾರಿಗಳಾಧಾರಿತ `ಹೌಸ್ ಆಫ್ ಬರ್ನಾಡಾ ಅಲ್ಬಾ’ ನಾಟಕ ಪ್ರದರ್ಶನವನ್ನು ಪ್ರತೀ ಭಾನುವಾರ ಸಂಜೆ 6.30 ಗಂಟೆಗೆ ಭೂಮಿಗೀತ ರಂಗಮಂದಿರ ದಲ್ಲಿ ಏರ್ಪಡಿಸಲಾಗಿದೆ ಎಂದರು. ಸ್ಪ್ಯಾನಿಷ್ ಕವಿ…

ಆರ್‍ಟಿಓ ಕಚೇರಿಯಲ್ಲಿ ರಸ್ತೆ ಸುರಕ್ಷತೆ ಜಾಗೃತಿ ಭಿತ್ತಿಪತ್ರ ವಿತರಣೆ
ಮೈಸೂರು

ಆರ್‍ಟಿಓ ಕಚೇರಿಯಲ್ಲಿ ರಸ್ತೆ ಸುರಕ್ಷತೆ ಜಾಗೃತಿ ಭಿತ್ತಿಪತ್ರ ವಿತರಣೆ

July 20, 2019

ಮೈಸೂರು, ಜು.19(ಆರ್‍ಕೆ)- ಅಪಘಾತಗಳ ಸಂದರ್ಭದಲ್ಲಿ ಮಾನವೀಯತೆ ಮೆರೆಯುವುದು ನಮ್ಮೆಲ್ಲರ ಮಹತ್ವದ ಜವಾಬ್ದಾರಿ ಎಂಬ ಘೋಷಣೆಯೊಂದಿಗೆ ಮೈಸೂರಿನ ಪಶ್ಚಿಮ ಆರ್‍ಟಿಓ ಕಚೇರಿಯಲ್ಲಿ ರಸ್ತೆ ಸುರಕ್ಷತೆ ಕುರಿತ ಜಾಗೃತಿ ಕಾರ್ಯಕ್ರಮ ನಡೆಯಿತು. ಜಂಟಿ ಸಾರಿಗೆ ಆಯುಕ್ತರ ಕಚೇರಿ ಹಾಗೂ ವಿಶೇಷಚೇತನರ ಸಂಗ್ರಾಮ ಪರಿಷತ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಜಂಟಿ ಆಯುಕ್ತ ಸಿ.ಟಿ. ಮೂರ್ತಿ, ರಸ್ತೆ ಸುರಕ್ಷತೆ ಕುರಿತ ಭಿತ್ತಿಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಿದರು. ಈ ಸಂದರ್ಭ ಮಾತನಾಡಿದ ಅವರು, ರಸ್ತೆ ಸುರಕ್ಷತೆ ಬಗ್ಗೆ ಉದಾಸೀನತೆ, ಅಜಾಗರೂ ಕತೆ ಹಾಗೂ ಬೇಜವಾಬ್ದಾರಿ…

ಜು.23ರಿಂದ 27ರವರೆಗೆ ಆಷಾಢ ಪ್ರಯುಕ್ತಚಾಮುಂಡೇಶ್ವರಿ ಪೂಜಾ ಮಹೋತ್ಸವ
ಮೈಸೂರು

ಜು.23ರಿಂದ 27ರವರೆಗೆ ಆಷಾಢ ಪ್ರಯುಕ್ತಚಾಮುಂಡೇಶ್ವರಿ ಪೂಜಾ ಮಹೋತ್ಸವ

July 20, 2019

ಮೈಸೂರು, ಜು.19(ಆರ್‍ಕೆಬಿ)- ಮೈಸೂರಿನ ಲಷ್ಕರ್ ಮೊಹಲ್ಲಾ ಅಶೋಕ ರಸ್ತೆ ಪೂರ್ವದ 30ನೇ ಕ್ರಾಸ್‍ನಲ್ಲಿ ಭಾವಸಾರ ಕ್ಷತ್ರಿಯ ಚಾಮುಂಡೇಶ್ವರಿ ಯುವಕರ ಭಕ್ತ ಮಂಡಳಿ ವತಿ ಯಿಂದ ಜು.23ರಿಂದ 27ರವರೆಗೆ ಆಷಾಢ ಮಾಸದ 79ನೇ ವರ್ಷದ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ ಏರ್ಪಡಿಸಲಾಗಿದೆ. ಜು.23ರಂದು ಮಧ್ಯಾಹ್ನ 12 ಗಂಟೆಗೆ ಕಳಸ ಪ್ರತಿ ಷ್ಠಾಪನೆ, 24ರಂದು ಸಂಜೆ 6ಕ್ಕೆ ಮಹಿಳಾ ಮಂಡಳಿ ಯಿಂದ ಭಜನೆ, 7 ಗಂಟೆಗೆ ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ, 25ರಂದು ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ, ಸಂಜೆ…

ವಿಶ್ವಾಸಮತ ಯಾಚನೆಗೆ ಇಂದು ಮಧ್ಯಾಹ್ನ 1.30ರ ಗಡುವು
ಮೈಸೂರು

ವಿಶ್ವಾಸಮತ ಯಾಚನೆಗೆ ಇಂದು ಮಧ್ಯಾಹ್ನ 1.30ರ ಗಡುವು

July 19, 2019

ಇಂದು ರಾತ್ರಿ ರಾಜಭವನದಿಂದ ಮುಖ್ಯ ಮಂತ್ರಿಗಳಿಗೆ ರಾಜ್ಯಪಾಲರಿಂದ ಮೂರು ಪುಟಗಳ ಅಧಿಕೃತ ಪತ್ರ ರವಾನೆಯಾ ಗಿದ್ದು, 224 ಶಾಸಕರ ಬಲ ಹೊಂದಿರುವ ವಿಧಾನಸಭೆಯಲ್ಲಿ 117 ಶಾಸಕರ ಬೆಂಬಲದಿಂದ ನೀವು ಸರ್ಕಾರ ರಚಿಸಿದ್ದೀರಿ. ಜು.1ರಂದು ಕಾಂಗ್ರೆಸ್‍ನ ಆನಂದ್‍ಸಿಂಗ್, ಜು.6 ರಂದು ರಮೇಶ್ ಜಾರಕಿಹೊಳಿ, ಎಸ್.ಟಿ. ಸೋಮಶೇಖರ್, ಜೆಡಿಎಸ್‍ನ ಗೋಪಾಲಯ್ಯ, ಎ.ಹೆಚ್. ವಿಶ್ವನಾಥ್, ನಾರಾಯಣಗೌಡ, ಕಾಂಗ್ರೆಸ್‍ನ ಭೈರತಿ ಬಸವರಾಜು, ಬಿ.ಸಿ. ಪಾಟೀಲ್, ಶಿವರಾಂ ಹೆಬ್ಬಾರ್, ಮುನಿರತ್ನ, ರೋಷನ್‍ಬೇಗ್, ಜು.10ರಂದು ಡಾ. ಕೆ. ಸುಧಾಕರ್, ಎಂಟಿಬಿ ನಾಗರಾಜು, ಪ್ರತಾಪ್‍ಗೌಡ ಪಾಟೀಲ್ ಮತ್ತು…

ರಾಜ್ಯಪಾಲರ ಆದೇಶ ಧಿಕ್ಕರಿಸಿದರೆ ಸರ್ಕಾರದ ಅಮಾನತಿಗೆ ಸಿದ್ಧತೆ
ಮೈಸೂರು

ರಾಜ್ಯಪಾಲರ ಆದೇಶ ಧಿಕ್ಕರಿಸಿದರೆ ಸರ್ಕಾರದ ಅಮಾನತಿಗೆ ಸಿದ್ಧತೆ

July 19, 2019

ಬೆಂಗಳೂರು, ಜು.18(ಕೆಎಂಶಿ, ಎಸಿಪಿ)- ರಾಜ್ಯಪಾಲರ ಸೂಚನೆಯಂತೆ ನಾಳೆ (ಜು.19) ಮಧ್ಯಾಹ್ನದೊಳಗೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಸರ್ಕಾರವನ್ನು ಅಮಾನತುಪಡಿಸಿ, ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿ ಮಾಡಲು ಅಗತ್ಯವಿರುವ ಸಿದ್ಧತೆಗಳು ರಾಜಭವನದಲ್ಲಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದ್ದರೂ ಆಡಳಿತದಲ್ಲಿ ಮುಂದುವರೆಯುತ್ತಿರುವುದರಿಂದ ರಾಜ್ಯದಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಯಾಗಿದೆ ಎಂಬ ಕಾರಣವನ್ನು ಮುಂದಿಟ್ಟು, ರಾಜ್ಯ ಪಾಲರು ತಮ್ಮ ಅಧಿಕಾರವನ್ನು ಚಲಾಯಿಸಿ ಸರ್ಕಾರದ ಅಮಾನತಿಗೆ ಶಿಫಾರಸು ಮಾಡಲು ಎಲ್ಲಾ ಸಿದ್ಧತೆಗಳು ನಡೆದಿವೆ ಎಂದು ಹೇಳಲಾಗಿದೆ….

ವಿಧಾನಸಭೆಯಲ್ಲೇ ಬಿಜೆಪಿ ಶಾಸಕರ ಅಹೋರಾತ್ರಿ ಧರಣಿ
ಮೈಸೂರು

ವಿಧಾನಸಭೆಯಲ್ಲೇ ಬಿಜೆಪಿ ಶಾಸಕರ ಅಹೋರಾತ್ರಿ ಧರಣಿ

July 19, 2019

ಬೆಂಗಳೂರು, ಜು.18- ತಕ್ಷಣವೇ ಸದನದಲ್ಲಿ ಮುಖ್ಯಮಂತ್ರಿಗಳು ವಿಶ್ವಾಸ ಮತಯಾಚಿಸಬೇಕೆಂದು ಆಗ್ರಹಿಸಿ ಬಿಜೆಪಿ ಶಾಸಕರು ಇಂದು ರಾತ್ರಿ ವಿಧಾನಸಭೆಯಲ್ಲೇ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಅವರಿಗೆ ಊಟದ ವ್ಯವಸ್ಥೆ ಕಲ್ಪಿಸ ಲಾಗಿದ್ದು, ಊಟದ ನಂತರ ಶಾಸಕರು ವಿಧಾನಸೌಧದ ಮುಂದೆ ವಾಯುವಿಹಾರ ನಡೆಸಿದರು. ಇಂದು ಬೆಳಿಗ್ಗೆ ಸದನ ಆರಂಭ ವಾದಾಗ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಪ್ರಸ್ತಾವನೆ ಮಂಡಿಸಿದರು. ಆ ವೇಳೆ ಪ್ರಸ್ತಾವನೆ ಮೇಲೆ ಚರ್ಚೆ ನಡೆಸಲು ಸ್ಪೀಕರ್ ರಮೇಶ್‍ಕುಮಾರ್ ಅವಕಾಶ ನೀಡಿದರು. ಮುಖ್ಯಮಂತ್ರಿಗಳು ಮಾತನಾಡುತ್ತಿರುವಂತೆಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ…

1 225 226 227 228 229 330
Translate »