ಜು.23ರಿಂದ 27ರವರೆಗೆ ಆಷಾಢ ಪ್ರಯುಕ್ತಚಾಮುಂಡೇಶ್ವರಿ ಪೂಜಾ ಮಹೋತ್ಸವ
ಮೈಸೂರು

ಜು.23ರಿಂದ 27ರವರೆಗೆ ಆಷಾಢ ಪ್ರಯುಕ್ತಚಾಮುಂಡೇಶ್ವರಿ ಪೂಜಾ ಮಹೋತ್ಸವ

July 20, 2019

ಮೈಸೂರು, ಜು.19(ಆರ್‍ಕೆಬಿ)- ಮೈಸೂರಿನ ಲಷ್ಕರ್ ಮೊಹಲ್ಲಾ ಅಶೋಕ ರಸ್ತೆ ಪೂರ್ವದ 30ನೇ ಕ್ರಾಸ್‍ನಲ್ಲಿ ಭಾವಸಾರ ಕ್ಷತ್ರಿಯ ಚಾಮುಂಡೇಶ್ವರಿ ಯುವಕರ ಭಕ್ತ ಮಂಡಳಿ ವತಿ ಯಿಂದ ಜು.23ರಿಂದ 27ರವರೆಗೆ ಆಷಾಢ ಮಾಸದ 79ನೇ ವರ್ಷದ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ ಏರ್ಪಡಿಸಲಾಗಿದೆ.

ಜು.23ರಂದು ಮಧ್ಯಾಹ್ನ 12 ಗಂಟೆಗೆ ಕಳಸ ಪ್ರತಿ ಷ್ಠಾಪನೆ, 24ರಂದು ಸಂಜೆ 6ಕ್ಕೆ ಮಹಿಳಾ ಮಂಡಳಿ ಯಿಂದ ಭಜನೆ, 7 ಗಂಟೆಗೆ ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ, 25ರಂದು ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ, ಸಂಜೆ 6ಕ್ಕೆ ರಸಮಂಜರಿ, ಸಂಜೆ 7ಕ್ಕೆ ಸನ್ಮಾನ ಸಮಾ ರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಂಸದ ಪ್ರತಾಪಸಿಂಹ, ಮೇಯರ್ ಪುಷ್ಪಲತಾ ಜಗನ್ನಾಥ್, ಸಮಾಜ ಸೇವಕ ಸರೋದೆ ನಾರಾಯಣರಾವ್, ಮಂಡಳಿ ಅಧ್ಯಕ್ಷ ಶಿವಾಜಿ ರಾವ್ ರಂಪೂರೆ, ಸೊಸೈಟಿ ಅಧ್ಯಕ್ಷ ದಯಾಶಂಕರ ಲಾಳೆ, ನಿರ್ದೇಶಕಿ ರಶ್ಮಿ ಕುತ್ನೀಕರ್ ಅವರನ್ನು ಸನ್ಮಾನಿಸಲಾಗುವುದು. ಜು.26ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆವರೆಗೆ ಉಚಿತ ಆರೋಗ್ಯ ತಪಾಸಣೆ, ಸಂಜೆ 7ಕ್ಕೆ ವಿದ್ವಾನ್ ಶಿವಕುಮಾರ್ ಶಾಸ್ತ್ರಿ ಅವರಿಂದ `ಚಾಮುಂಡೇಶ್ವರಿ ಮಹಾತ್ಮೆ’ ಹರಿಕಥೆ, ಸಂಜೆ 7.30ಕ್ಕೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ, ವಿದ್ಯಾರ್ಥಿಗಳಿಗೆ ನೋಟ್‍ಬುಕ್ ವಿತರಣೆ, 27ರಂದು ಮಧ್ಯಾಹ್ನ 12 ಗಂಟೆಗೆ ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದ ಬಳಿ ಕಾವೇರಿ ನದಿಯಲ್ಲಿ ದೇವಿಯ ವಿಗ್ರಹ ವಿಸರ್ಜಿಸಲಾಗುವುದು ಎಂದು ಸಂಘದ ಅಧ್ಯಕ್ಷ ಜೈಕುಮಾರ್ ಲಾಳಿಗೆ ತಿಳಿಸಿದ್ದಾರೆ.

ಕಬೀರ್ ರಸ್ತೆಯಲ್ಲೂ ಪೂಜಾ ಮಹೋತ್ಸವ: ಮೈಸೂರಿನ ಕಬೀರ್ ರಸ್ತೆ ಭಾವಸಾರ ಕ್ಷತ್ರಿಯ ಚಾಮುಂಡೇಶ್ವರಿ ಯುವಕರ ಸೇವಾ ಸಮಿತಿಯಿಂದ 36ನೇ ವರ್ಷದ ಪೂಜಾ ಮಹೋತ್ಸವ ನಡೆಯಲಿದೆ. 23ರಂದು ಮಧ್ಯಾಹ್ನ 1 ಗಂಟೆಗೆ ಕಳಶ ಪ್ರತಿಷ್ಠಾಪನೆ, 24ರಂದು ಸಂಜೆ 6ಕ್ಕೆ ಪೂಜೆ, ಪ್ರಸಾದ ವಿನಿಯೋಗ, 25ರಂದು ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ, 26ರಂದು ಸಂಜೆ 7ಕ್ಕೆ ರಸಮಂಜರಿ, 27ರಂದು ಮಧ್ಯಾಹ್ನ 12 ಗಂಟೆಗೆ ಸನ್ಮಾನ ಕಾರ್ಯಕ್ರಮ, ಅನ್ನ ಸಂತರ್ಪಣೆ, ಸಂಜೆ 7ಕ್ಕೆ ಕಾವೇರಿ ನದಿಯಲ್ಲಿ ದೇವಿಯ ವಿಸರ್ಜನೆ ನಡೆಯಲಿದೆ ಎಂದು ಮಂಡಳಿ ನಿರ್ದೇಶಕ ಕೇಶವರಾವ್ ತೇಲ್ಕರ್ ತಿಳಿಸಿದ್ದಾರೆ.

Translate »