ಆರ್‍ಟಿಓ ಕಚೇರಿಯಲ್ಲಿ ರಸ್ತೆ ಸುರಕ್ಷತೆ ಜಾಗೃತಿ ಭಿತ್ತಿಪತ್ರ ವಿತರಣೆ
ಮೈಸೂರು

ಆರ್‍ಟಿಓ ಕಚೇರಿಯಲ್ಲಿ ರಸ್ತೆ ಸುರಕ್ಷತೆ ಜಾಗೃತಿ ಭಿತ್ತಿಪತ್ರ ವಿತರಣೆ

July 20, 2019

ಮೈಸೂರು, ಜು.19(ಆರ್‍ಕೆ)- ಅಪಘಾತಗಳ ಸಂದರ್ಭದಲ್ಲಿ ಮಾನವೀಯತೆ ಮೆರೆಯುವುದು ನಮ್ಮೆಲ್ಲರ ಮಹತ್ವದ ಜವಾಬ್ದಾರಿ ಎಂಬ ಘೋಷಣೆಯೊಂದಿಗೆ ಮೈಸೂರಿನ ಪಶ್ಚಿಮ ಆರ್‍ಟಿಓ ಕಚೇರಿಯಲ್ಲಿ ರಸ್ತೆ ಸುರಕ್ಷತೆ ಕುರಿತ ಜಾಗೃತಿ ಕಾರ್ಯಕ್ರಮ ನಡೆಯಿತು. ಜಂಟಿ ಸಾರಿಗೆ ಆಯುಕ್ತರ ಕಚೇರಿ ಹಾಗೂ ವಿಶೇಷಚೇತನರ ಸಂಗ್ರಾಮ ಪರಿಷತ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಜಂಟಿ ಆಯುಕ್ತ ಸಿ.ಟಿ. ಮೂರ್ತಿ, ರಸ್ತೆ ಸುರಕ್ಷತೆ ಕುರಿತ ಭಿತ್ತಿಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ರಸ್ತೆ ಸುರಕ್ಷತೆ ಬಗ್ಗೆ ಉದಾಸೀನತೆ, ಅಜಾಗರೂ ಕತೆ ಹಾಗೂ ಬೇಜವಾಬ್ದಾರಿ ವಾಹನ ಚಾಲನೆಯಿಂದಾಗಿ ಸಂಭವಿಸುವ ಅಪಘಾತದಲ್ಲಿ ಅಮೂಲ್ಯ ಜೀವ ಹಾರಿ ಹೋಗುತ್ತದೆ. ಹಲವರು ಕೈ-ಕಾಲು ಕಳೆದುಕೊಂಡು ಶಾಶ್ವತ ಅಂಗವಿಕಲರಾಗುತ್ತಾರೆ ಎಂದರು. ಅತೀ ವೇಗ, ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೆ ವಾಹನ ಚಾಲನೆ ಮಾಡುವುದು, ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆ ದೊಯ್ಯುವುದು, ಸಿಗ್ನಲ್ ಜಂಪ್‍ನಂತಹ ಸಂಚಾರ ನಿಯಮಗಳನ್ನು ಉಲ್ಲಂಘಿಸುವುದ ರಿಂದ ಅಪಘಾತಗಳು ಸಂಭವಿಸುತ್ತವೆ ಎಂದೂ ಅವರು ಇದೇ ಸಂದರ್ಭ ನುಡಿದರು.

ಆರ್‍ಟಿಓ ಕಚೇರಿಗೆ ಬಂದಿದ್ದ ಯುವಕ-ಯುವತಿಯರು, ಸಾರ್ವಜನಿಕರಿಗೆ ಭಿತ್ತಿಪತ್ರಗಳನ್ನು ವಿತರಿಸಿದ ವಿಶೇಷಚೇತನರ ಸಂಗ್ರಾಮ ಪರಿಷತ್ ಕಾರ್ಯಕರ್ತರು, ನಿಯಮ ಪಾಲಿಸಿ ರಸ್ತೆ ಅಪಘಾತಗಳನ್ನು ತಪ್ಪಿಸುವಂತೆ ಅರಿವು ಮೂಡಿಸಿದರು.

ಕೋದಂಡರಾಮು, ಪ್ರಸನ್ನ, ಶಕುಂತಲಾ, ಸೈಯದ್ ಉಸ್ಮಾನ್, ಚಂದ್ರಕುಮಾರ್, ಗಿರೀಶ್, ಶಹಾಬುದ್ದೀನ್, ಗೋಪಾಲಕೃಷ್ಣ, ವಕೀಲರಾದ ಲಕ್ಷ್ಮಣ್, ಸೋಮಶೇಖರ್ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.

Translate »