ಸಮಸ್ಯೆಗಳ ತ್ವರಿತವಾಗಿ ನಿಭಾಯಿಸುವುದೇ ಇಸ್ರೋ ಯಶಸ್ಸಿಗೆ ಕಾರಣ
ಮೈಸೂರು

ಸಮಸ್ಯೆಗಳ ತ್ವರಿತವಾಗಿ ನಿಭಾಯಿಸುವುದೇ ಇಸ್ರೋ ಯಶಸ್ಸಿಗೆ ಕಾರಣ

July 20, 2019

ಮೈಸೂರು,ಜು.19(ಆರ್‍ಕೆಬಿ)- ಸಮಸ್ಯೆ ಗಳನ್ನು ತ್ವರಿತವಾಗಿ ನಿಭಾಯಿಸುವ ಸಾಮಥ್ರ್ಯ ಇರುವುದೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಯಶಸ್ಸಿಗೆ ಕಾರಣವಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಕೆ.ರಾಧಾಕೃಷ್ಣನ್ ಹೇಳಿದರು.

ಮೈಸೂರಿನ ಚಾಮುಂಡಿಬೆಟ್ಟದ ರಸ್ತೆ ಯಲ್ಲಿರುವ ಧರ್ಮಸ್ಥಳ ಮಂಜುನಾಥೇ ಶ್ವರ ಇನ್ಸ್‍ಟಿಟ್ಯೂಟ್ ಫಾರ್ ಮ್ಯಾನೇಜ್ ಮೆಂಟ್ ಡೆವಲಪ್‍ಮೆಂಟ್ (ಎಸ್‍ಡಿಎಂ ಐಎಂಡಿ)ನ ಸಂಸ್ಥಾಪನಾ ದಿನದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

ಚಂದ್ರಯಾನ-2 ಮಿಷನ್ ಅನ್ನು ಇತ್ತೀಚೆಗೆ ಮುಂದೂಡಿದ್ದನ್ನು ಉಲ್ಲೇ ಖಿಸಿದ ಅವರು, ಸಣ್ಣ ಸೋರಿಕೆಯಿಂದಾಗಿ ಮಿಷನ್ ಸ್ಥಗಿತಗೊಂಡಿತ್ತು. ಅದನ್ನು ತ್ವರಿತ ವಾಗಿ ಸರಿಪಡಿಸುವ ಮೂಲಕ ವಾರ ದೊಳಗೆ ಅದರ ಹಾರಾಟಕ್ಕೆ ಸಿದ್ಧಗೊಳಿ ಸಿದೆ. ಇಂತಹ ಸಾಮಥ್ರ್ಯ ಇಸ್ರೋ ಹೊಂದಿದೆ ಎಂದು ಹೇಳಿದರು.

ಇಸ್ರೋದ ಕಾರ್ಯ ಸಂಸ್ಕೃತಿ ಹಾಗೂ ಇನ್ನಿತರ ವಿಷಯ ಕುರಿತಂತೆ ವಿದ್ಯಾರ್ಥಿ ಗಳಿಗೆ ಮಾಹಿತಿ ನೀಡಿದ ಅವರು, ಇಸ್ರೋನ ಕಾರ್ಯ ಸಂಸ್ಕೃತಿಯು ಪ್ರತಿ ಯಶಸ್ವಿ ಯೋಜನೆ ಅಥವಾ ಕಾರ್ಯಾಚರಣೆಯ ಮನ್ನಣೆಯನ್ನು ಇಡೀ ತಂಡಕ್ಕೆ ನೀಡಲಾಗು ತ್ತದೆ. ಆದರೆ ಕಾರ್ಯ ವಿಫಲವಾದರೆ ಅದರ ನಾಯಕತ್ವ ವಹಿಸಿದವರು ಮಾತ್ರ ಜವಾ ಬ್ದಾರಿ ಹೊರುತ್ತಾರೆ. ಇದು ಇಸ್ರೋದ ಕಾರ್ಯ ಸಂಸ್ಕøತಿಯ ಭಾಗ ವಾಗಿದೆ ಎಂದರು.

ಇಸ್ರೋ ಕಾರ್ಯ ಸಂಸ್ಕೃತಿಯ ಮತ್ತೊಂದು ಅಂಶವೆಂದರೆ ಶ್ರೇಣಿಯನ್ನು ಲೆಕ್ಕಿಸದೆ ಪ್ರಶ್ನೆ ಯನ್ನು ಹುಟ್ಟು ಹಾಕುವ ಸ್ವಾತಂತ್ರ್ಯ ಎಂದ ಅವರು, ಪ್ರತಿ ಉಡಾವಣೆ ಮತ್ತು ಯೋಜನೆ ಯನ್ನು ಮಾಜಿ ಅಧ್ಯಕ್ಷರು ಮತ್ತು ವಿಜ್ಞಾನಿ ಗಳು ಸೇರಿದಂತೆ ನಮ್ಮ ಹಿರಿಯರ ಸಹಾಯದಿಂದ ಕಾರ್ಯಗತಗೊಳಿಸಲಾಗು ತ್ತದೆ. ಆದಾಗ್ಯೂ, ಕಿರಿಯ ಎಂಜಿನಿಯರ್ ಕೂಡ ಇದ್ದಾರೆ. ಅವರಲ್ಲಿ ಪ್ರಶ್ನೆಯನ್ನು ಹುಟ್ಟು ಹಾಕುವ ಹಕ್ಕನ್ನು ಮತ್ತು ಅದೇ ಪ್ರಾಮುಖ್ಯತೆ ಯೊಂದಿಗೆ ಪರಿಗಣಿಸಲಾಗುತ್ತದೆ ಎಂದರು.

ಇಸ್ರೋದ ನಿರ್ವಹಣಾ ಪಾಠಗಳ ಕುರಿತ ಪ್ರಶ್ನೆಗೆ ಹಿರಿಯರ ಜ್ಞಾನ ಮತ್ತು ಬುದ್ಧಿವಂತಿಕೆ ಹಾಗೂ ಯುವಜನರ ಹೊಸ ಆವಿಷ್ಕಾರ ಪರಿಗಣಿಸಬೇಕಾದ ಸಿದ್ದಾಂತಗಳಾಗಿವೆ. ಒಬ್ಬ ನಾಯಕನಾದ ವನು ಯಾವಾಗಲೂ ಸವಾಲು ಎದುರಿಸಲು ಸಿದ್ಧನಾಗಿರಬೇಕು ಎಂದು ಉತ್ತರಿಸಿದರು.

80ರ ದಶಕದವರೆಗೆ ಸಂಸ್ಥೆಯು ಪ್ರತಿಭೆ ಯನ್ನು ಪಡೆಯುವಲ್ಲಿ ಯಾವುದೇ ಸಮಸ್ಯೆ ಗಳನ್ನು ಹೊಂದಿಲ್ಲ. ಆದರೆ 90ರ ದಶಕದ ಹೊತ್ತಿಗೆ ಐಟಿ ಉತ್ಕರ್ಷವು ಪ್ರತಿಭೆಗಳ ಮೇಲೆ ಪರಿಣಾಮ ಬೀರಿತು ಎಂದರು.

ಸವಾಲನ್ನು ಜಯಿಸಲು, ಆಗ ನಾವು ಮಾರ್ಸ್ ಆರ್ಬಿಟರ್ ಮತ್ತು ಚಂದ್ರ ಯಾನ್‍ನಂತಹ ಅತ್ಯಾಕರ್ಷಕ ಯೋಜನೆ ಗಳಿಗೆ ಒತ್ತು ನೀಡಿದ್ದೇವೆ. ವೇತನವನ್ನು ಶೇ.40ರಷ್ಟು ಹೆಚ್ಚಿಸಿದ್ದೇವೆ. ಬಾಹ್ಯಾಕಾಶ ಸಂಸ್ಥೆಯನ್ನು ಪುನಾರಂಭಿಸಿದ್ದೇವೆ. ಇದರ ಪರಿಣಾಮವಾಗಿಯೇ ಸಮಸ್ಯೆಯನ್ನು ಪರಿ ಹರಿಸಲು ಸಾಧ್ಯವಾಯಿತು. ಈಗ ನಾವು ವರ್ಷಕ್ಕೆ 300ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಹೊಂದುತ್ತೇವೆ ಎಂದು ತಿಳಿಸಿದರು.

ಬಾಹ್ಯಾಕಾಶದಲ್ಲಿ ಒಟ್ಟು 1400 ಸ್ಯಾಟ ಲೈಟ್‍ಗಳು ಕಕ್ಷೆಯಲ್ಲಿ ಹಾರಾಡುತ್ತಿವೆ. ಆದರೆ ಹಾಳಾಗಿರುವ 23,000ದಷ್ಟು ಬಿಡಿಭಾಗ ಗಳು ಕೂಡ ಕಸವಾಗಿ ಕಕ್ಷೆಯಲ್ಲಿ ಸುತ್ತುತ್ತಿ ರುವುದು ದೊಡ್ಡ ಸಮಸ್ಯೆಯಾಗಿದೆ. ಆದರೆ ಅವುಗಳನ್ನು ಅಂತಾರಾಷ್ಟ್ರೀಯ ಸಂಸ್ಥೆ ಯೊಂದು ನಿರ್ವಹಿಸುತ್ತಿದೆ. ಅಂತರಿಕ್ಷದಲ್ಲಿ ರುವ ಕಸವನ್ನು ಪತ್ತೆ ಹಚ್ಚಿ, ತೆರವುಗೊಳಿ ಸುವ ಕೆಲಸವನ್ನು ಆ ಸಂಸ್ಥೆ ಉತ್ತಮವಾಗಿಯೇ ನಿರ್ವಹಿಸುತ್ತಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಧರ್ಮಸ್ಥಳ ಮಂಜು ನಾಥೇಶ್ವರ ಇನ್ಸ್‍ಟಿಟ್ಯೂಟ್ ಫಾರ್ ಮ್ಯಾನೇಜ್ ಮೆಂಟ್ ಡೆವಲಪ್‍ಮೆಂಟ್‍ನ ಡಾ.ಎಂ.ಆರ್. ಸುರೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »