ಒಡೆಯರ್ ಸಂಗೀತ ಪ್ರೀತಿ ನೆನೆದ ಸತ್ಯವತಿ
ಮೈಸೂರು

ಒಡೆಯರ್ ಸಂಗೀತ ಪ್ರೀತಿ ನೆನೆದ ಸತ್ಯವತಿ

July 19, 2019

ಮೈಸೂರು,ಜು.18(ವೈಡಿಎಸ್)-ಜಯ ಚಾಮರಾಜ ಒಡೆಯರ್ ಅವರು ಕರ್ನಾ ಟಕ ಸಂಗೀತದ ಮೇಲೆ ಅಪಾರ ಹಿಡಿತ ಹೊಂದಿದ್ದರು ಎಂದು ಸಂಗೀತ ವಿದ್ವಾಂಸೆ ಡಾ.ಟಿ.ಎಸ್.ಸತ್ಯವತಿ ತಿಳಿಸಿದರು.

ಮೈಸೂರು ಅರಮನೆಯ ದರ್ಬಾರ್ ಹಾಲ್‍ನಲ್ಲಿ ಆಯೋಜಿಸಿದ್ದ ಜಯಚಾಮ ರಾಜ ಒಡೆಯರ್ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಸಂಗೀತ ಕಾರ್ಯಕ್ರಮ ದಲ್ಲಿ ಜಯಚಾಮರಾಜ ಒಡೆಯರ್ ಅವರ ಸಂಗೀತ ಸಂಯೋಜನೆಗಳನ್ನು ಕುರಿತು ಮಾತನಾಡಿ, ಜಯಚಾಮರಾಜ ಒಡೆ ಯರ್ ಅವರು ಪಾಶ್ಚಾತ್ಯ ಹಾಗೂ ಕರ್ನಾ ಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಮಹ ತ್ವದ ಸಾಧನೆ ಮಾಡಿದ್ದು, 94 ಸಂಗೀತ ಕೃತಿಗಳನ್ನು ರಚಿಸಿದ್ದಾರೆ. ಸಂಗೀತದ ಲಿರಿಕ್ಸ್ ಗಳು ತುಂಬಾ ಚೆನ್ನಾಗಿದ್ದು, ವಿಶೇಷ ರಾಗಗಳು ಮನ ಸೆಳೆಯುತ್ತವೆ ಎಂದು ಹೇಳಿದರು.

ಸಂಗೀತ ಸಂಯೋಜನೆ ಕಲೆ ಕರಗತ ಮಾಡಿಕೊಳ್ಳುವುದು ಸುಲಭದ ವಿಷಯ ವಾಗಿರಲಿಲ್ಲ. ಆದರೆ, ಒಡೆಯರ್ ಅವರು ಕಠಿಣ ಪರಿಶ್ರಮದಿಂದ ಪರಿಣತಿ ಪಡೆದಿ ದ್ದರು. ಪಾಶ್ಚಾತ್ಯ ಸಂಗೀತದ ಬಗ್ಗೆಯೂ ಆಳವಾದ ಅಧ್ಯಯನ ಮಾಡಿದ್ದರು ಎಂದರು. ಎನ್‍ಸಿಪಿಎ ಮುಖ್ಯಸ್ಥ ಕುಶೂರ್ ಎನ್.ಸನ್ಟೂಕ್ ಅವರು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತಕ್ಕೆ ಜಯಚಾಮರಾಜ ಒಡೆಯರ್ ಕೊಡುಗೆ ಕುರಿತು ಮಾತ ನಾಡಿದರು. ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್, ಕಾಮಾಕ್ಷಿದೇವಿ ಒಡೆಯರ್, ಇಂದ್ರಾಕ್ಷಿದೇವಿ ಒಡೆಯರ್ ಉಪಸ್ಥಿತರಿದ್ದರು. ನಂತರ ಮುಂಬೈನ ಸಿಂಫೊನಿ ಆರ್ಕೆಸ್ಟ್ರಾದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ದೊಡ್ಡವರ ಹೆಸರಲ್ಲೇ ಆಹ್ವಾನ ಪತ್ರಿಕೆ ಕ್ರಮ: ಸ್ಪಷ್ಟನೆ
ಮೈಸೂರು,ಜು.18(ವೈಡಿಎಸ್)-ಮನೆಗೆ ಯಾರು ದೊಡ್ಡವರಿರುತ್ತಾರೋ ಅವರ ಹೆಸರಿನಲ್ಲಿ ಆಹ್ವಾನ ಪತ್ರಿಕೆ ಕೊಡಬೇಕು. ದಸರೆಗೆ ಕೊಡುವ ಪತ್ರಿಕೆಯಲ್ಲೂ ಪ್ರಮೋದಾ ದೇವಿ ಒಡೆಯರ್ ಅವರ ಹೆಸರಿನಲ್ಲೇ ಆಹ್ವಾನ ಪತ್ರಿಕೆ ನೀಡಲಾಗುತ್ತದೆ ಎಂದು ಯುವರಾಜ ಯದುವೀರ್ ಅವರ ಸೋದರ ಸಂಬಂಧಿ ವರ್ಚಸ್ ಸಿದ್ದಲಿಂಗರಾಜ ಅರಸ್ ಸ್ಪಷ್ಟಪಡಿಸಿದ್ದಾರೆ. ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋ ತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಯುವರಾಜ ಯದುವೀರ್ ಹೆಸರು ಇಲ್ಲದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ವರ್ಚಸ್ ಸಿದ್ದಲಿಂಗರಾಜ ಅರಸ್ ಅವರು ಸ್ಪಷ್ಟನೆ ನೀಡುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಮನೆಯಲ್ಲಿ ಯಾರು ದೊಡ್ಡವರಿರುತ್ತಾರೋ ಅವರ ಹೆಸರಿನಲ್ಲಿ ಆಹ್ವಾನ ಪತ್ರಿಕೆ ನೀಡಬೇಕು. ದಸರೆಗೆ ಕೊಡುವ ಕಾರ್ಡ್‍ನಲ್ಲೂ ಪ್ರಮೋದಾದೇವಿ ಒಡೆಯರ್ ಅವರ ಹೆಸರಿನಲ್ಲೇ ಆಹ್ವಾನ ಪತ್ರಿಕೆ ಕೊಡಲಾಗುತ್ತದೆ. ಈ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಜಯಚಾಮರಾಜ ಒಡೆಯರ್ ಅವರು ಮಹಾರಾಜರಾದಾಗಲೂ ಅವರ ತಂದೆ ಹೆಸರಿನಲ್ಲೇ ಆಹ್ವಾನ ಪತ್ರಿಕೆ ನೀಡಲಾಗುತ್ತಿತ್ತು. ನಂತರ ನನ್ನ ಸೋದರ ಮಾವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹೆಸರಿನಲ್ಲಿ ಹೋಗುತ್ತಿತ್ತು. ಈ ಬಾರಿ ಪ್ರಮೋದಾದೇದಿ ಒಡೆಯರ್ ಅವರ ಹೆಸರಿನಲ್ಲಿ ಆಹ್ವಾನ ಪತ್ರಿಕೆ ಹೋಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Translate »